ಬೆಂಗಳೂರು : ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ರಾಜಸ್ಥಾನದ ಪಾಲಿ ಮತ್ತು ಜೋಧ್‌ಪುರದಲ್ಲಿ ಮೂರು ಬಿಸ್ನೆಸ್ ಗ್ರೂಪ್ ಗಳ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ.ಅ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿವೆ. 
ಈ ದಾಳಿಯ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 52 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟು ಪ್ರಮಾಣದ ಆಭರಣಗಳನ್ನು ನೋಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೂ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ಆಭರಣದ ಮೂಲ ಹುಡುಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಎಷ್ಟು ಪ್ರಮಾಣದ ಚಿನ್ನವನ್ನು ಹೊಂದಬಹುದು :  
ಆದಾಯ ತೆರಿಗೆ ಇಲಾಖೆಯು ಪ್ರೇಮ್ ಕೇಬಲ್ಸ್ ಗ್ರೂಪ್, ಪಿಜಿ ಫಾಯಿಲ್ಸ್ ಮತ್ತು ಗುಗಾಡ್ ಗ್ರೂಪ್‌ನ ಕಚೇರಿ ಮತ್ತು ಈ ಸಂಸ್ಥೆಗಳಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ದಾಳಿ ಮೂಲಕ ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಾಗಿದ್ದರೆ ಒಬ್ಬ ವ್ಯಕ್ತಿ ತನ್ನ ಬಳಿ ಎಷ್ಟು ಪ್ರಮಾಣದ ಚಿನ್ನವನ್ನು ಹೊಂದಿರಬಹುದು ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.


ಇದನ್ನೂ ಓದಿ : ಹೊಸ ವರ್ಷಾರಂಭಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಹೆಚ್ಚಾಯ್ತು ತುಟ್ಟಿಭತ್ಯೆ!


ಮನೆಯಲ್ಲಿರುವ ಚಿನ್ನದ ಮೇಲೆಯೂ ಆದಾಯ ತೆರಿಗೆ : 
ಆಲ್ ಇಂಡಿಯಾ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಫೆಡರೇಶನ್ (ಕೇಂದ್ರ ವಲಯ) ಅಧ್ಯಕ್ಷ ಮತ್ತು ತೆರಿಗೆ ತಜ್ಞರಾದ ಸಂದೀಪ್ ಅಗರ್ವಾಲ್ ಪ್ರಕಾರ, ಸಂಪತ್ತು ತೆರಿಗೆಯನ್ನು ನಿರ್ಧರಿಸಲು ಆದಾಯ ತೆರಿಗೆ ಕಾಯ್ದೆ 132 ರಲ್ಲಿ ಮನೆಯಲ್ಲಿ ಇರಿಸಲಾಗಿರುವ ಚಿನ್ನವನ್ನು ಸೂಚಿಸಲಾಗಿದೆ. ಮನೆಯಲ್ಲಿ ಇರಿಸಲಾಗಿರುವ ಚಿನ್ನದ ಮೌಲ್ಯಮಾಪನಕ್ಕಾಗಿ ಸೂಚನೆ ಸಂಖ್ಯೆ 1916 ಅನ್ನು ಅನ್ವಯಿಸಲಾಗುತ್ತದೆ.


ವಿವಾಹಿತ ಮಹಿಳೆ 500 ಗ್ರಾಂ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು : 
ಆದಾಯ ತೆರಿಗೆ ಕಾಯಿದೆಯು ಮನೆಯಲ್ಲಿ ಮತ್ತು ಲಾಕರ್‌ಗಳಲ್ಲಿ ಇಡಬಹುದಾದ ಚಿನ್ನದ ಪ್ರಮಾಣವನ್ನು ನಿರ್ಧರಿಸಿದೆ. ಅವರ ಪ್ರಕಾರ, ಮನೆಯ ವಿವಾಹಿತ ಮಹಿಳೆ 500 ಗ್ರಾಂ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು. 
ಮನೆಯ ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನು ಹೊಂದಬಹುದು. ಒಬ್ಬ ವ್ಯಕ್ತಿ 200 ಗ್ರಾಂ ಚಿನ್ನವನ್ನು ಮನೆಯಲ್ಲಿ ಇಡಬಹುದು. ಇದಕ್ಕಿಂತ ಹೆಚ್ಚು ಚಿನ್ನ ಇದ್ದರೆ ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸುವುದು ಕಡ್ಡಾಯವಾಗಿರುತ್ತದೆ. 


ಇದನ್ನೂ ಓದಿ : ಇಂದಿನಿಂದ ಅಗ್ಗದದ ದರದಲ್ಲಿ ಚಿನ್ನ ಮಾರಾಟ ಆರಂಭ, ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ!


ಆದಾಯ ತೆರಿಗೆ ರಿಟರ್ನ್‌ನಲ್ಲಿ ಸಲ್ಲಿಸುವ ಅಗತ್ಯ :
ಮನೆ ಅಥವಾ ಲಾಕರ್‌ನಲ್ಲಿ ಅಥವಾ ಇನ್ನಾವುದೇ ಸ್ಥಳದಲ್ಲಿ ಪೂರ್ವಿಕರ ಚಿನ್ನ ಇದ್ದರೂ ಅದನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ಸಲ್ಲಿಸುವುದು ಅವಶ್ಯಕ. ತನಿಖೆಯ ಸಮಯದಲ್ಲಿ, ಇದು ಪೂರ್ವಜರ್ ಒಡವೆ ಎಂಬುದಕ್ಕೆ ಪುರಾವೆಗಳನ್ನು ನೀಡಬೇಕು. 


ನೀವು ಚಿನ್ನವನ್ನು ಖರೀದಿಸಿ ಬಿಲ್ ಮಾಡಿದರೂ ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸದಿದ್ದರೆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಈ ಚಿನ್ನವನ್ನು ಆದಾಯ ತೆರಿಗೆ ಕಾಯಿದೆ 132 ರ ಅಡಿಯಲ್ಲಿ ಮೌಲ್ಯಮಾಪನಕ್ಕಾಗಿ ಪರಿಗಣಿಸಬಹುದು.


ಚಿನ್ನವನ್ನು ಸ್ತ್ರಿಧನ್ ಎಂದು ಪರಿಗಣಿಸಲಾಗುತ್ತದೆ :
ಭಾರತದಲ್ಲಿ ಚಿನ್ನವನ್ನು ಮಹಿಳೆಯರ ಸಂಪತ್ತು ಎಂದು ಪರಿಗಣಿಸಲಾಗುತ್ತದೆ. 11 ಮೇ 1994 ರಂದು CBDT ಯಿಂದ ಮನೆಯಲ್ಲಿ ಚಿನ್ನವನ್ನು ಇಡುವ ಬಗ್ಗೆ ಸುತ್ತೋಲೆ ಹೊರಡಿಸಲಾಯಿತು. ಮನೆಯಲ್ಲಿ ನಿಗದಿತ ಪ್ರಮಾಣದ ಚಿನ್ನ ಪತ್ತೆಯಾದರೆ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಬಾರದು ಎಂಬ ನಿಬಂಧನೆಯೂ ಇದೆ. ನಿಗದಿತ ಪ್ರಮಾಣದ ಚಿನ್ನದ ಮೂಲದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಅವಕಾಶವೂ ಇಲ್ಲ.


ಈ ನಿಟ್ಟಿನಲ್ಲಿ ನ್ಯಾಯಾಲಯಗಳೂ ಹಲವು ತೀರ್ಪುಗಳನ್ನು ನೀಡಿವೆ :
ಮಹಿಳೆಯು ತನ್ನ ಹೆತ್ತವರು ಹಾಗೂ ತನ್ನ ಅತ್ತೆಯಂದಿರು, ಸ್ನೇಹಿತರು ಅಥವಾ ಇನ್ನಾವುದೇ ವ್ಯಕ್ತಿಯಿಂದ ಉಡುಗೊರೆಯಾಗಿ ಪಡೆದ ಚಿನ್ನವನ್ನು ಇಟ್ಟುಕೊಳ್ಳಲು ಮನೆಯಲ್ಲಿ ನಿಯಮಗಳಿವೆ. ರಾಜಸ್ಥಾನ ಹೈಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಸೇರಿದಂತೆ ಸುಪ್ರೀಂ ಕೋರ್ಟ್ ಕೂಡ ಮನೆಯಲ್ಲಿರುವ ಚಿನ್ನದ ಪ್ರಮಾಣಕ್ಕೆ ಸಂಬಂಧಿಸಿದ ಪ್ರಮುಖ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನಿರ್ಧಾರಗಳನ್ನು ಅಂಗೀಕರಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ