Investment Options for Housewife : ಉಳಿತಾಯ ಎಂದು ಬಂದರೆ ಅಲಿ ಮಹಿಳೆಯರದ್ದೇ ಎತ್ತಿದ ಕೈ. ಮಹಿಎಲ್ ದುಡಿಯಲಿ ದುಡಿಯದೇ  ಇರಲಿ ತನ್ನದು ಎನ್ನುವ ಪುಟ್ಟದೊಂದು ಸೇವಿಂಗ್ ಇದ್ದೇ ಇರುತ್ತದೆ. ತನಗೆ ನಿತ್ಯದ ಖರ್ಚಿಗೆ ಸಿಗುವ ಕಾಸಿನಲ್ಲಿಯೂ ಸ್ವಲ್ಪವಾದರೂ ಉಳಿಸಿ ಅದನ್ನು ಯಾವುದಾದರೂ ಡಬ್ಬದೊಳಗೆ ಬಚ್ಚಿಡುವ ಗುಣ ಮಹಿಳೆಯರಲ್ಲಿ ಇರುತ್ತದೆ. ಮಹಿಳೆಯರಿಗೆಂದೇ ಸರ್ಕಾರ ಕೂಡಾ ಅನೇಕ್ ಉಳಿಯ್ತಾಯ ಯೋಜನೆಗಳನ್ನು ಜಾರಿಗೆ ತಂದಿದೆ.  ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ  ಮೂಲಕ ಗೃಹಿಣಿಯ ಲಕ್ಷ ಗಳಿಸುವುದು ಸಾಧ್ಯವಾಗುತ್ತದೆ. ಮಹಿಳೆಯರು ಈ ಯೋಜನೆಯಲ್ಲಿ ಕೇವಲ 500 ಅಥವಾ 1000 ರೂ.ಗಳಿಂದ ಹೂಡಿಕೆ ಪ್ರಾರಂಭಿಸಿದರೂ ಸಾಕು, ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಅನೇಕ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು  :
ಕಡಿಮೆ ಹಣ ಹೂಡಿಕೆ ಮೂಲಕ ಪ್ರಾರಂಭಿಸಬಹುದಾದ ಕೆಲವು ಸ್ಕೀಮ್ ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. PPF ಅಂದರೆ ಸಾರ್ವಜನಿಕ ಭವಿಷ್ಯ ನಿಧಿ, SIP ಮತ್ತು RD ಸೇರಿದಂತೆ ಹಲವು ಆಯ್ಕೆಗಳಿವೆ. ಅಲ್ಲಿ ನೀವು ಹಣವನ್ನು ಹೂಡಿಕೆ ಮಾಡಬಹುದು.


ಸಾರ್ವಜನಿಕ ಭವಿಷ್ಯ ನಿಧಿ (. PPF) :
ಗೃಹಿಣಿಯರು PPF ಅಂದರೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಮಾಡುವ  ಹೂಡಿಕೆ ಮೇಲೆ ಸರ್ಕಾರವು ಶೇಕಡಾ 7.1 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಬೇಕು.ಆಗ  ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ  ಹಿಂತಿರುಗಿಸಲಾಗುತ್ತದೆ.


ಇದನ್ನೂ ಓದಿ :Ayodhya Ram Mandir : ಬ್ಯಾಂಕ್ ನಿಂದ ಷೇರು ಮಾರುಕಟ್ಟೆವರೆಗೂ ಸ್ಥಗಿತ : 9 ರಾಜ್ಯಗಳಲ್ಲಿ ಸಂಪೂರ್ಣ ರಜೆ ಘೋಷಣೆ


1000 ರೂಪಾಯಿಯಿಂದ ಹೂಡಿಕೆ :
15 ವರ್ಷಗಳವರೆಗೆ ಪ್ರತಿ ತಿಂಗಳು 1000 ರೂಗಳನ್ನು ಠೇವಣಿ ಮಾಡಿದರೆ, ಒಂದು ವರ್ಷದಲ್ಲಿ 12,000 ಮತ್ತು 15 ವರ್ಷಗಳಲ್ಲಿ 1,80,000 ಠೇವಣಿ ಮಾಡಿದಂತೆ ಆಗುತ್ತದೆ. ಇದರ ಬಡ್ಡಿಯಾಗಿ 1,45,457 ರೂಪಾಯಿಗಳನ್ನು ಪಡೆಯಬಹುದು. ಅಂದರೆ ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು 3,25,457 ರೂಪಾಯಿಗಳು ನಿಮ್ಮ ಕೈ ಸೇರುತ್ತದೆ.


SIPನಲ್ಲಿಯೂ ಹೂಡಿಕೆ ಮಾಡಬಹುದು :
 ಗೃಹಿಣಿಯರಿಗೆ ಹೂಡಿಕೆ ಮಾಡಲು ಇರುವ ಉತ್ತಮ ಆಯ್ಕೆಯೆಂದರೆ ಮ್ಯೂಚುವಲ್ ಫಂಡ್‌ಗಳಲ್ಲಿ SIP ಮಾಡುವುದು. ಇತ್ತೀಚಿನ ದಿನಗಳಲ್ಲಿ ಜನರು SIP ನಟ್ಟ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು.  SIP ನಲ್ಲಿ  ಹೆಚ್ಚು ಕಡಿಮೆ 12 ಶೇಕಡಾದಷ್ಟು ರಿಟರ್ನ್ ಸಿಗುತ್ತದೆ. 


ಪ್ರತಿ ತಿಂಗಳು 1000 ರೂಪಾಯಿಗಳ SIP ಮಾಡಿದರೆ 15 ವರ್ಷಗಳಲ್ಲಿ 1,80,000 ರೂಪಾಯಿಗಳನ್ನು ಇಲ್ಲಿ ಹೂಡಿಕೆ ಮಾಡುತ್ತೀರಿ. ನೀವು ಶೇಕಡಾ 12 ರ ದರದಲ್ಲಿ ಬಡ್ಡಿಯನ್ನು ಪಡೆದರೆ,  3,24,576 ರೂ ಬಡ್ಡಿ ನಿಮ್ಮ ಖಾತೆ ಸೇರುತ್ತದೆ. ಈ ಮೂಲಕ 15 ವರ್ಷಗಳಲ್ಲಿ 5,04,576 ರೂ. ಆದಾಯ ಗಳಿಸಬಹುದು.


ಇದನ್ನೂ ಓದಿ NPS Withdrawal Rules: ಫೆ.1 ರಿಂದ ಬದಲಾಗುವುದು NPS ನಿಯಮ : ಸಂಪೂರ್ಣ ವಿವರ ಇಲ್ಲಿದೆ


RD :
ಇದಲ್ಲದೆ, ನೀವು ಸಂಪೂರ್ಣವಾಗಿ ಸುರಕ್ಷಿತ ಆಯ್ಕೆಯನ್ನು ಬಯಸಿದರೆ ಬ್ಯಾಂಕ್‌ನಲ್ಲಿ ಆರ್‌ಡಿಯನ್ನು ತೆರೆಯಬಹುದು. ಹೂಡಿಕೆದಾರರು ಆರ್‌ಡಿಯಲ್ಲಿ ಸ್ಥಿರ ಲಾಭವನ್ನು ಪಡೆಯುತ್ತಾರೆ. ಅಲ್ಪಾವಧಿಗೆ ಹೂಡಿಕೆ ಮಾಡುವುದಾದರೆ  RD ಅತ್ಯುತ್ತಮ ಆಯ್ಕೆಯಾಗಿದೆ. 5 ವರ್ಷಗಳ ಕಾಲ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿಸಿಕೊಳ್ಳಬಹುದು. ಇದರ ಮೇಲೆ ನೀವು ಸುಮಾರು 6.5 ಶೇಕಡಾ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು.


ಉದಾಹರಣೆಗೆ, ನೀವು 1000 ರೂ.ಯಂತೆ 5 ವರ್ಷಗಳಲ್ಲಿ  60,000 ಹೂಡಿಕೆ ಮಾಡಿದರೆ ಮುಕ್ತಾಯದ ಮೇಲೆ 70,989 ಪಡೆಯುತ್ತೀರಿ.ಈ ಹಣವನ್ನು ಹಿಂಪಡೆಯಬಹುದು ಅಥವಾ ಅದನ್ನು ಎಫ್‌ಡಿಯಲ್ಲಿ ಠೇವಣಿ ಮಾಡಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ