ಬದಲಾಗಿದೆ work culture ! ಇಲ್ಲೀಗ ವಾರದಲ್ಲಿ 4 ದಿನ ಮಾತ್ರ ಕೆಲಸ..!
ಉದ್ಯೋಗಿಗಳು ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ನಿರ್ಧಾರ ಸಹಾಯ ಮಾಡುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನವದೆಹಲಿ : ವಾರದಲ್ಲಿ 3 ದಿನಗಳ ರಜೆಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈಗ ಸೈಬರ್ ಭದ್ರತಾ ಕಂಪನಿ TAC ಸೆಕ್ಯುರಿಟಿ ಮುಂಬೈ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವಾರದ ರಜೆಯನ್ನು(three days week off) ಹೆಚ್ಚಿಸುವ ಬಗ್ಗೆ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಈಗ ಇಲ್ಲಿ ಉದ್ಯೋಗಿಗಳು ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡಬೇಕಾಗುತ್ತದೆ. ಉಳಿದ 3 ದಿನ ರಜೆ ಇರುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯು ಇದನ್ನು ಇನ್ನೂ ಪರ್ಮನೆಂಟ್ ಮಾಡಿಲ್ಲ. 7 ತಿಂಗಳಲ್ಲಿ ವಾರದಲ್ಲಿ ಮೂರು ದಿನಗಳ ರಜೆಯ ನಂತರವೂ, ಪ್ರೋಡಕ್ಟಿವಿಟಿಯಲ್ಲಿ ಏನೂ ವ್ಯತ್ಯಾಸ ಬಾರದೇ ಹೋದರೆ, ಈ ನಿಯಮವನ್ನು ಶಾಶ್ವತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಫ್ಯೂಚರ್ ಆಫ್ ವರ್ಕ್ ಬಗ್ಗೆಯೂ ಹೇಳಿದ ಕಂಪನಿ :
ಉದ್ಯೋಗಿಗಳು ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ನಿರ್ಧಾರ ಸಹಾಯ ಮಾಡುತ್ತದೆ ಎಂದು ಕಂಪನಿ (Company) ತನ್ನ ಹೇಳಿಕೆಯಲ್ಲಿ ತಿಳಿಸಿದೆ. 3 ದಿನಗಳ ರಜೆಯ (weekly off) ನಂತರ, ಉದ್ಯೋಗಿಗಳು ಕೆಲಸಕ್ಕೆ ಮರಳಿದಾಗ ಅವರು ಹೆಚ್ಚಿನ ಶಕ್ತಿ ಮತ್ತು ಉತ್ಸಾಹದಿಂದ ಬರುತ್ತಾರೆ. 200 ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯು ಈ ನಿರ್ಧಾರವನ್ನು 'ಫ್ಯೂಚರ್ ಆಫ್ ವರ್ಕ್ (Future of work) ಎಂದು ವಿವರಿಸಿದೆ.
ಇದನ್ನೂ ಓದಿ : Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಬೆಲೆ ಎಷ್ಟಿದೆ ನೋಡಿ
ಕಚೇರಿ ಮತ್ತು ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ :
ಇದಕ್ಕಾಗಿ ಕಂಪನಿಯು ಆಂತರಿಕ ಸಮೀಕ್ಷೆಯನ್ನೂ ನಡೆಸಿದೆ. ಈ ಸಮೀಕ್ಷೆಯಲ್ಲಿ, ಶೇ .80 ರಷ್ಟು ಉದ್ಯೋಗಿಗಳು ವಾರದಲ್ಲಿ 4 ದಿನ ಹೆಚ್ಚು ಗಂಟೆಗಳ ಕಾಲ ಕೆಲಸ ಮಾದುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ, ಅವರು ದೀರ್ಘ ವಾರದ ರಜಾದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಪ್ರಕಟಣೆಯ ನಂತರ, ಕಂಪನಿಯ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು (employees) ವಿವಿಧ ಕೋರ್ಸ್‌ಗಳು ಮತ್ತು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
"ನಮ್ಮ ತಂಡ ಮತ್ತು ಕಂಪನಿಯಲ್ಲಿ ಇರುವವರು ಹೆಚ್ಚಾಗಿ ಯುವಕರು. ಇಂತಹ ಪರಿಸ್ಥಿತಿಯಲ್ಲಿ, ನಾವು ಹೆಚ್ಚು ಪ್ರಯೋಗಗಳನ್ನು ಮಾಡಬಹುದು ಎಂದು ಟಿಎಸಿ ಸಂಸ್ಥಾಪಕ ಮತ್ತು ಸಿಇಒ ತೃಷ್ಣೀತ್ ಅರೋರಾ ಹೇಳಿದ್ದಾರೆ. ಯುವ ತಂಡವಾದ ಕಾರಣ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಕೆಲವು ಹೊಸ ಮತ್ತು ಉತ್ತಮ ಪ್ರಯೋಗಗಳನ್ನು ಮಾಡಬಹುದು. ನಾವೆಲ್ಲರೂ 5 ದಿನಗಳವರೆಗೆ ಕೆಲಸ ಮಾಡುವುದನ್ನು (5 days working) ಒಗ್ಗಿಸಿಕೊಂಡಿದ್ದೇವೆ. ಅದಕ್ಕಾಗಿಯೇ ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಈ ಪ್ರಯೋಗ ಹೊಸದಾಗಿದ್ದು, ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Coronavirus: ಪಾಸ್‌ಪೋರ್ಟ್ ನಿಯಮಗಳಲ್ಲಿ ಬದಲಾವಣೆ, ಇಲ್ಲಿದೆ ಮಹತ್ವದ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.