Neiman Marcus Limited Edition Fighter Price: ನಿಮಗೂ ಕೂಡ ದುಬಾರಿ ಮೋಟರ್‌ಸೈಕಲ್‌ಗಳ ಬಗ್ಗೆ ಆಸಕ್ತಿ ಇದ್ದರೆ, ಪ್ರಪಂಚದ ಅತ್ಯಂತ ದುಬಾರಿ ಮೋಟಾರ್‌ಸೈಕಲ್ ಯಾವುದು, ಅದು ಹೇಗೆ ಕಾಣುತ್ತದೆ ಮತ್ತು ಆ ಮೋಟಾರ್‌ಸೈಕಲ್‌ನ ವಿಶೇಷತೆ ಏನು ಎಂಬುದು ನಿಮಗೆ ಗೊತ್ತಿದೆಯೇ?  ಇಲ್ಲ ಎಂದಾದಲ್ಲಿ ಈ ಸುದ್ದಿ ತಪ್ಪದೆ ಓದಿ. ವಿಶ್ವದ ಅತ್ಯಂತ ದುಬಾರಿ ಬೈಕ್ ನ ಹೆಸರು ನೀಮನ್ ಮಾರ್ಕಸ್ ಲಿಮಿಟೆಡ್ ಎಡಿಷನ್ ಫೈಟರ್ ಆಗಿದೆ. 


COMMERCIAL BREAK
SCROLL TO CONTINUE READING

ಬೆಲೆ ಎಷ್ಟು?
Neiman ಮಾರ್ಕಸ್ ಲಿಮಿಟೆಡ್ ಎಡಿಷನ್ ಫೈಟರ್ ಬೆಲೆ $ 11 ಮಿಲಿಯನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 81.75 ಕೋಟಿ (ರೂ. 81,75,38,150) ಆಗಿದೆ (Most Expensive Bike Price) . ಮೋಟಾರ್‌ಸೈಕಲ್‌ನ (Bike) ಹರಾಜು ಬೆಲೆಯು $110,000 ಕ್ಕೆ ಪ್ರಾರಂಭವಾಯಿತು ಆದರೆ ಅಂತಿಮವಾಗಿ ಅದು ಸುಮಾರು 100 ಪಟ್ಟು ಹೆಚ್ಚಿನ ಬೆಲೆಯೊಂದಿಗೆ $11 ಮಿಲಿಯನ್‌ಗೆ ಮಾರಾಟವಾಯಿತು. ಈ ಬೈಕ್ ಗೆ ಇಷ್ಟೊಂದು ಬಿಡ್ ಮೊತ್ತ ಸಿಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.


ಇದನ್ನೂ ಓದಿ-FD In Bank: ಬ್ಯಾಂಕ್ ಎಫ್‌ಡಿಯಲ್ಲಿಯೂ ಅಪಾಯವಿದೆ! ನಷ್ಟ ತಪ್ಪಿಸಲು ಹೂಡಿಕೆ ಮಾಡುವ ಮೊದಲು ಈ 5 ವಿಷಯಗಳನ್ನು ತಿಳಿದುಕೊಳ್ಳಿ


ಫುಲ್ ಫ್ಲೆಜ್ ಮೋಟರ್ ಸೈಕಲ್ ತಯಾರಕ ಕಂಪನಿಯಲ್ಲಿ ನೀಮನ್
ಇಲ್ಲಿ ಬೆರಗುಗೊಳಿಸುವ ಸಂಗತಿ ಎಂದರೆ,  ನೈಮನ್ ಮಾರ್ಕಸ್ ಪೂರ್ಣ ಪ್ರಮಾಣದ ಮೋಟಾರ್‌ಸೈಕಲ್ ತಯಾರಕ ಕಂಪನಿಯಗಿಲ್ಲ.  ಆದರೆ ಐಷಾರಾಮಿ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳ ಅಮೇರಿಕನ್ ಸರಪಳಿಯಾಗಿದೆ. ಮತ್ತು ಅವರು ಈ ಮೋಟಾರ್ ಸೈಕಲ್ ಅನ್ನು ಹರಾಜಿಗೆ ನೀಡಿದಾಗ, ಅದರ ಬೆಲೆ ಗಗನಕ್ಕೇರಿದೆ. ಈ ಮೋಟಾರ್ಸೈಕಲ್ ಚಿತ್ರದಲ್ಲಿ ತೋರಿಸಿರುವುದಕ್ಕಿಂತ ಹೆಚ್ಚು ಆಕರ್ಷಕವಾಗಿದೆ. 


ಇದನ್ನೂ ಓದಿ-PPF: ಹೂಡಿಕೆ ಮಾಡಲು ಯೋಜಿಸುತ್ತಿರುವಿರಾ? ಕೆಲವೇ ವರ್ಷಗಳಲ್ಲಿ ಮಿಲೇನಿಯರ್ ಆಗಲು ಇಲ್ಲಿದೆ ಉತ್ತಮ ಆಯ್ಕೆ


ವೈಶಿಷ್ಟ್ಯಗಳು
ನೈಮನ್ ಮಾರ್ಕಸ್ ಲಿಮಿಟೆಡ್ ಎಡಿಷನ್ ಫೈಟರ್ ಸ್ಟ್ರೀಟ್ ಲೀಗಲ್ ಬೈಕ್ ಆಗಿದ್ದು, ಗಂಟೆಗೆ 300 ಕಿಮೀ ಗರಿಷ್ಟ ವೇಗದಲ್ಲಿ ಚಲಿಸಬಲ್ಲದು. ಇದರ ವಿನ್ಯಾಸ ಅದ್ಭುತವಾಗಿದೆ. ಇದನ್ನು 'Evolution Of The Machine (ಯಂತ್ರದ ವಿಕಾಸ)' ಎಂದು ಕರೆಯಲಾಗಿತ್ತು. ಇದು 120ci 45-ಡಿಗ್ರಿ ಏರ್-ಕೂಲ್ಡ್ V-Twin ಎಂಜಿನ್‌ನಿಂದ ಚಾಲಿತವಾಗಿದೆ, ಇದು ಈ ಬೈಕ್ ಅನ್ನು ಹೆಚ್ಚು ಬಲಿಷ್ಠಗೊಳಿಸುತ್ತದೆ.  ಇದರ ಪವರ್ ಟ್ರೈನ್ ಟೈಟಾನಿಯಂ, ಅಲ್ಯೂಮಿನಿಯಂ ಮತ್ತು ಕಾರ್ಬನ್ ಫೈಬರ್ ದೇಹದ ಭಾಗಗಳಿಂದ ಮಾಡಲ್ಪಟ್ಟಿದೆ.


ಇದನ್ನೂ  ಓದಿ-Whatsapp: ವಾಟ್ಸಾಪ್‌ನ ಈ ಸಿಂಪಲ್ ಟ್ರಿಕ್‌ನೊಂದಿಗೆ, ನೀವು ಕೆಲವೇ ಸೆಕೆಂಡುಗಳಲ್ಲಿ ಸ್ನೇಹಿತರಿಗೆ ಹಣ ಕಳುಹಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.