Post Office MIS Scheme: ಒಂದು ವೇಳೆ ನೀವೂ ಕೂಡ ಅತ್ಯಲ್ಪ ಹೂಡಿಕೆಯ ಮೂಲಕ ಉತ್ತಮ ರಿಟರ್ನ್ ಹಾಗೂ ಸುರಕ್ಷಿತ ಹೂಡಿಕೆಯನ್ನು ಬಯಸುತ್ತಿದ್ದರೆ, ಪೋಸ್ಟ್ ಆಫೀಸ್ ನಿಮಗಾಗಿ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ನ ಮಂಥಲಿ ಇನ್ಕಂ ಸ್ಕೀಮ್ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ನೀವು ಕೇವಲ ಒಂದು ಬಾರಿ ಹೂಡಿಕೆಯನ್ನು ಮಾಡಿ ತಿಂಗಳಿಗೆ ಬಡ್ಡಿಯ ರೂಪದಲ್ಲಿ ಆದಾಯವನ್ನು ಪಡೆಯಬಹುದು. 


COMMERCIAL BREAK
SCROLL TO CONTINUE READING

ಈ ಖಾತೆಯ ಹಲವು ಲಾಭಗಳಿವೆ. ನೀವು ನಿಮ್ಮ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಗುವಿನ ಹೆಸರಲ್ಲೂ ಕೂಡ ಖಾತೆ ತೆರೆಯಬಹುದು. ಒಂದು ವೇಳೆ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ತೆರೆದರೆ, ಮಗುವಿನ ಶಾಲಾ ಶುಲ್ಕದ ಚಿಂತೆ ನಿಮಗೆ ಇರುವುದಿಲ್ಲ. ಈ ಸ್ಕೀಮ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ, 


ಎಲ್ಲಿ ಮತ್ತು ಹೇಗೆ ಈ ಖಾತೆಯನ್ನು ತೆರೆಯಬಹುದು?
>> ಈ ಖಾತೆಯನ್ನು ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ತೆರೆಯಬಹುದು.
>> ಈ ಯೋಜನೆಯಲ್ಲಿ ನೀವು ಕನಿಷ್ಠ ಅಂದರೆ 1000 ಹಾಗೂ ಗರಿಷ್ಟ ಅಂದರೆ 4.5 ಲಕ್ಷ ಹಣವನ್ನು ಹೂಡಿಕೆ ಮಾಡಬಹುದು.
>> ಪ್ರಸ್ತುತ ಈ ಯೋಜನೆಯ ಮೇಲೆ ಅಂಚೆ ಕಚೇರಿ ಶೇ. 6.6 ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ.
>> ಮಗುವಿನ ವಯಸ್ಸು 10 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ಮಗುವಿನ ಹೆಸರಲ್ಲಿ ನೀವು ಈ ಖಾತೆಯನ್ನು ತೆರೆಯಬಹುದು. 
>> ಒಂದು ವೇಳೆ ಮಗುವಿನ ವಯಸ್ಸು 10ಕ್ಕಿಂತ ಕಡಿಮೆಯಾಗಿದ್ದರೆ, ಪೋಷಕರು ಈ ಖಾತೆಯನ್ನು ತೆರೆಯಬಹುದು. 
>> ಈ ಸ್ಕೀಮ್ ನ ಪರಿಪಕ್ವತೆಯ ಅವಧಿ 5 ವರ್ಷಗಳದ್ದಾಗಿದೆ.

ಇಲ್ಲಿದೆ ಲೆಕ್ಕಾಚಾರ
>> ಒಂದು ವೇಳೆ ನಿಮ್ಮ ಮಗುವಿನ ವಯಸ್ಸು 10 ವರ್ಷಗಳಾಗಿದ್ದು, ನೀವು ನಿಮ್ಮ ಮಗುವಿನ ಹೆಸರಿನಲ್ಲಿ 2 ಲಕ್ಷ ರೂ. ಹಣವನ್ನು ಈ ಖಾತೆಯಲ್ಲಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಶೇ.6.6ರಷ್ಟು ಬಡ್ಡಿಯಂತೆ 1100 ರೂ ಸಿಗಲಿದೆ. 


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ ಪಕ್ಕಾ! ಈ ದಿನ ಘೋಷಣೆ ಸಾಧ್ಯತೆ

>> ಐದು ವರ್ಷಗಳಲ್ಲಿ ನಿಮ್ಮ ಒಟ್ಟು ಬಡ್ಡಿ 66 ಸಾವಿರ ರೂ. ಗಳಾಗಲಿದೆ. ಇದಲ್ಲದೆ ನಿಮ್ಮ 2 ಲಕ್ಷ ರೂ. ಹಣವೂ ಕೂಡ ನಿಮಗೆ ವಾಪಸ್ ಸಿಗಲಿದೆ. 
>> ಈ ರೀತಿ ನಿಮ್ಮ 10 ವರ್ಷದ ಮಗುವಿನ ತಿಂಗಳ ಆದಾಯ 1,100 ಆಗಿರಲಿದೆ. ಅದನ್ನು ನೀವು ಮಗುವಿನ ವಿದ್ಯಾಭ್ಯಾಸಕ್ಕೆ ಬಳಸಬಹುದು. 
>> ಪೋಷಕರ ಪಾಲಿಗೆ ಈ ಮೊತ್ತ ಒಂದು ಉತ್ತಮ ಆದಾಯವಾಗಿರಲಿದೆ. ಇದೇ ರೀತಿ ನೀವು 4.5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ತಿಂಗಳಿಗೆ 2500 ರೂ. ಬಡ್ಡಿ ಸಿಗಲಿದೆ.


ಇದನ್ನೂ ಓದಿ-7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!

>> ಈ ಯೋಜನೆಯಲ್ಲಿ ಒಂದು ವೇಳೆ ನೀವು 3.5 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳಿಗೆ 1925 ರೂ. ಬಡ್ಡಿ ಸಿಗಲಿದೆ. ಇದನ್ನು ನೀವು 1 ರಿಂದ ಮೂವರು ಪ್ರಭುದ್ಧರು ಸೇರಿ ಜಂಟಿಯಾಗಿ ಈ ಖಾತೆಯನ್ನು ತೆರೆಯಬಹುದು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.