ಈಗ ಯಾವುದೇ ದಾಖಲೆಗಳಿಲ್ಲದೆಯೂ ಆಧಾರ್ ಕಾರ್ಡ್ ಮಾಡಿಸಬಹುದು!
Aadhaar Card Without Documents: ಯುಐಡಿಎಐ ಸುತ್ತೋಲೆಯ ಪ್ರಕಾರ, ನಿಮ್ಮ ಬಳಿ ವಿಳಾಸದ ಯಾವುದೇ ಪುರಾವೆ ಇಲ್ಲದಿದ್ದರೂ ಕೂಡ ನೀವು ಸುಲಭವಾಗಿ ಆಧಾರ್ ಕಾರ್ಡ್ ಪಡೆಯಬಹುದು. ಯಾವುದೇ ದಾಖಲೆ ಇಲ್ಲದೆ ಆಧಾರ್ ಕಾರ್ಡ್ ಪಡೆಯುವುದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ತಪ್ಪದೇ ಓದಿ...
How to get Aadhaar Card Without Any Documents: ಇನ್ನೂ ಸಹ ಆಧಾರ್ ಕಾರ್ಡ್ ಮಾಡಿಸಿಲ್ಲವೇ ಅಥವಾ ಆಧಾರ್ ಕಾರ್ಡ್ ಮಾಡಿಸಲು ವಿಳಾಸದ ಪುರಾವೆಗಾಗಿ ನಿಮ್ಮ ಬಳಿ ಯಾವುದೇ ದಾಖಲೆಗಳಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈಗ ಯಾವುದೇ ದಾಖಲೆಗಳಿಲ್ಲದೆಯೂ ನೀವು ಆಧಾರ್ ಕಾರ್ಡ್ ಮಾಡಿಸಬಹುದು.
ಹೌದು, ನಿಮ್ಮ ಬಳಿ ವಿಳಾಸದ ಯಾವುದೇ ಪುರಾವೆ ಇಲ್ಲದಿದ್ದರೂ ಕೂಡ ನೀವು ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು. ಏಕೆಂದರೆ ದಾಖಲೆಗಳಿಲ್ಲದೆ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಸಹಾಯ ಮಾಡಲು ಯುಐಡಿಎಐ ಪ್ರಮಾಣಿತ ಪ್ರಮಾಣಪತ್ರವನ್ನು ನೀಡುತ್ತದೆ. ಇದನ್ನು ಪಡೆಯಲು ನೀವು ಕೆಲವು ನಿಯಮಗಳನ್ನು ಅನುಸರಿಸುವುದರ ಜೊತೆಗೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ನಿಗಾವಹಿಸಬೇಕಾಗುತ್ತದೆ.
ಇದನ್ನೂ ಓದಿ- ಅನಿವಾಸಿ ಭಾರತೀಯರೂ ಕೂಡ ಆಧಾರ್ ಕಾರ್ಡ್ ಪಡೆಯಬಹುದೇ? ನಿಯಮಗಳೇನು?
ಯುಐಡಿಎಐ ಸುತ್ತೋಲೆಯ ಪ್ರಕಾರ, ಆಧಾರ್ ಮಾಡಲು ಸಂಸದರು, ಶಾಸಕರು, ಗೆಜೆಟೆಡ್ ಅಧಿಕಾರಿಗಳು ಅಥವಾ ತಹಸೀಲ್ದಾರ್ ಅವರಂತಹ ವಿವಿಧ ಕಾರ್ಯನಿರ್ವಾಹಕರಿಂದ ಪ್ರಮಾಣಿತ ಪ್ರಮಾಣಪತ್ರಗಳನ್ನು ಪಡೆಯಬಹುದು. ನೀವು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಕೌನ್ಸಿಲರ್, ಅನಾಥಾಶ್ರಮದ ಮುಖ್ಯಸ್ಥರು ಅಥವಾ ಗ್ರಾಮ ಪಂಚಾಯತ್ ಮುಖ್ಯಸ್ಥರಿಂದಲೂ ಸಹ ಪ್ರಮಾಣಿತ ಪ್ರಮಾಣಪತ್ರವನ್ನು ಪಡೆಯಬಹುದು. ಯುಐಡಿಎಐ ಈ ಅಧಿಕಾರಿಗಳ ಮೂಲಕ ಆಧಾರ್ ನೋಂದಣಿ ಮತ್ತು ನವೀಕರಣಗಳಿಗಾಗಿ (ಅನುಬಂಧ I ಮತ್ತು II) ನಿಯಮ 10(2) ರ ವೇಳಾಪಟ್ಟಿ II ರಲ್ಲಿ ಆಧಾರ್ ನೋಂದಣಿಗಾಗಿ ಪ್ರಮಾಣಿತ ಪ್ರಮಾಣಪತ್ರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಈ ಪ್ರಮಾಣಪತ್ರವು ವಿಶೇಷವಾಗಿ ವಿಳಾಸದ ಪುರಾವೆಗಾಗಿ ಯಾವುದೇ ದಾಖಲೆಯನ್ನು ಹೊಂದಿಲ್ಲದವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ವಿಳಾಸ ಪುರಾವೆಗಾಗಿ ಮಾತ್ರ ನೀವು ಪ್ರಮಾಣಿತ ಪ್ರಮಾಣಪತ್ರವನ್ನು ಬಳಸಬಹುದು. ಇದು ಆಧಾರ್ ಕಾರ್ಡ್ ಪಡೆಯಲು ನಿಮಗೆ ಸಹಾಯ ಮಾಡುತ್ತದೆ ಎಂಬುದು ಗಮನಾರ್ಹ.
ಇದನ್ನೂ ಓದಿ- Aadhaar Card-Voter ID ಜೋಡಣೆಗೆ ಸಂಬಂಧಿಸಿದಂತೆ ಸರ್ಕಾರದ ಹೊಸ ಆದೇಶ ಜಾರಿ, ತಕ್ಷಣ ತಿಳಿದುಕೊಳ್ಳಿ!
ಆದಾಗ್ಯೂ, ವಿಶೇಷ ಅಧಿಕಾರಿಗಳು ನೀಡುವ ಪ್ರಮಾಣಪತ್ರಕ್ಕಾಗಿ ಒಬ್ಬ ವ್ಯಕ್ತಿಯು ಗುರುತಿನ ಪುರಾವೆ, ವಿಳಾಸದ ಪುರಾವೆ ಅಥವಾ ಜನ್ಮ ದಿನಾಂಕವನ್ನು ಒದಗಿಸಬೇಕಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.