ನವದೆಹಲಿ: Aadhaar Card Update Correction:ಆಧಾರ್ ಕಾರ್ಡ್ ಇಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳಿಗೂ ಕಡ್ಡಾಯವಾಗಿದೆ.  ಆಧಾರ್ ಕಾರ್ಡ್ ಇಲ್ಲದೆ, ಯಾವುದೇ ಬ್ಯಾಂಕಿಂಗ್, ಸರ್ಕಾರಿ ಅಥವಾ ಸರ್ಕಾರೇತರ ಕೆಲಸಗಳನ್ನು ಮಾಡುವುದು ಸಾಧ್ಯವಾಗುವುದಿಲ್ಲ.  ಈ ಕಾರಣದಿಂದಾಗಿ ಆಧಾರ್ ಕಾರ್ಡನ್ನು (Aadhaar card update) ನವೀಕರಿಸುವುದು ಅಗತ್ಯ. ಇದರ ಹೊರತಾಗಿ, ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕೂಡಾ ಅಗತ್ಯವಾಗಿದೆ.  ಯಾವುದೇ ಹಣಕಾಸಿನ ವಹಿವಾಟಿನ ಪರಿಶೀಲನೆಗಾಗಿ, OTP ನಿಮ್ಮ ಮೊಬೈಲ್ ಸಂಖ್ಯೆಗೆ ಮಾತ್ರ ಬರುತ್ತದೆ. ಆದ್ದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಯುಐಡಿಎಐ ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು.


COMMERCIAL BREAK
SCROLL TO CONTINUE READING

ಆಧಾರ್‌ಗೆ ಲಿಂಕ್ ಮಾಡಿದ ಸಂಖ್ಯೆಯನ್ನು ಹೇಗೆ ಬದಲಾಯಿಸುವುದು?
mAadhaar ಇನ್‌ಸ್ಟಾಲ್ ಮಾಡುವಾಗಲೂ  ನಿಮ್ಮ ರಿಜಿಸ್ಟರ್‌ಗಳ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.  ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದರೆ, ಆಧಾರ್ (Aadhaar) ಪರಿಶೀಲನೆಗಾಗಿ ನಿಮಗೆ OTP ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್‌ನೊಂದಿಗೆ ಲಿಂಕ್ (Aadhaar link) ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಅಗತ್ಯವಾಗಿರುತ್ತದೆ. ನಿಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀವು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು. ಆಧಾರ್ ಸಂಖ್ಯೆಯೊಂದಿಗೆ ಹೊಸ ಮೊಬೈಲ್ ಸಂಖ್ಯೆಯನ್ನು ಲಿಂಕ್ (Aadhar mobile link) ಮಾಡುವ ಪ್ರಕ್ರಿಯೆ ಸರಳವಾಗಿದೆ. 


ಇದನ್ನೂ ಓದಿ : Today Gold Price: 600 ರೂ. ಇಳಿಕೆ ಕಂಡ ಚಿನ್ನದ ಬೆಲೆ, ನಿಮ್ಮ ನಗರದ ದರ ಪರಿಶೀಲಿಸಿ


ನಿಮ್ಮ ಮೊಬೈಲ್ ಸಂಖ್ಯೆ ಕಳೆದುಹೋಗಿದ್ದರೆ ಅಥವಾ ಬದಲಾಗಿದ್ದರೆ, ಇನ್ನೊಂದು ಸಂಖ್ಯೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ಅದನ್ನು ನೋಂದಾಯಿಸಿಕೊಳ್ಳಬೇಕು.


ಆಧಾರ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದು ಹೇಗೆ ?
1. ಇದಕ್ಕಾಗಿ ನೀವು ಮೊದಲು ಆಧಾರ್ ನೋಂದಣಿ ಕೇಂದ್ರಕ್ಕೆ (Aadhaar regestration center) ಹೋಗಿ.
2. ಇಲ್ಲಿ ನಿಮಗೆ ಫೋನ್ ಸಂಖ್ಯೆಯನ್ನು ಲಿಂಕ್ ಮಾಡಲು ಒಂದು ಫಾರ್ಮ್ ನೀಡಲಾಗುತ್ತದೆ. 
3. ಈ ಫಾರ್ಮ್ ಅನ್ನು 'ಆಧಾರ್ ತಿದ್ದುಪಡಿ ಫಾರ್ಮ್' ಎಂದು ಕರೆಯಲಾಗುತ್ತದೆ. ಅದರಲ್ಲಿ ನಿಮ್ಮ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ. 
4. ಈಗ ತುಂಬಿದ ನಮೂನೆಯನ್ನು 25 ರೂಪಾಯಿ ಶುಲ್ಕದೊಂದಿಗೆ ಅಧಿಕಾರಿಗೆ ಸಲ್ಲಿಸಿ.
5. ಇದರ ನಂತರ ನಿಮಗೆ ಸ್ಲಿಪ್ ನೀಡಲಾಗುತ್ತದೆ. ಈ ಸ್ಲಿಪ್ ನವೀಕರಣ ರಿಕ್ವೆಸ್ಟ್ ನಂಬರ್ ಹೊಂದಿರುತ್ತದೆ. . ಈ ರಿಕ್ವೆಸ್ಟ್ ನಂಬರ್ನೊಂದಿಗೆ , ಹೊಸ ಫೋನ್ ಸಂಖ್ಯೆಯು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. 
6. ನಿಮ್ಮ ಆಧಾರ್ ಅನ್ನು ಹೊಸ ಮೊಬೈಲ್ ಸಂಖ್ಯೆಯೊಂದಿಗೆ ಮೂರು ತಿಂಗಳಲ್ಲಿ ಲಿಂಕ್ ಮಾಡಲಾಗುತ್ತದೆ.  ಆಧಾರ್ ಅನ್ನು ಹೊಸ ಮೊಬೈಲ್ ಸಂಖ್ಯೆಯೊಂದಿಗೆ (Mobile numebr)ಲಿಂಕ್ ಮಾದಿದಾಗ OTP ಅದೇ ಸಂಖ್ಯೆಗೆ ಬರುತ್ತದೆ. 
7. ಆ OTP ಬಳಸಿ, ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.
8. UIDAI ನ ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ಆಧಾರ್ ನೊಂದಿಗೆ ಹೊಸ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವ ಸ್ಟೇಟಸ್ ಅನ್ನು ಸಹಾ ತಿಳಿದುಕೊಳ್ಳಬಹುದು.


ಇದನ್ನೂ ಓದಿ : Ration Card: ಮನೆಯಲ್ಲಿಯೇ ಕುಳಿತು ನಿಮ್ಮ ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಬದಲಾಯಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.