ನಿಮ್ಮ ಹಳೆ ಸ್ಮಾರ್ಟ್ ಫೋನ್ ಬಳಸಿ ಮನೆಯಿಂದಲೇ ನೀವು ತಿಂಗಳಿಗೆ 40 ರಿಂದ 50 ಸಾವಿರ ಸಂಪಾದಿಸಬಹುದು!
Easy Money Making Formula: ನೀವು ಮನೆಯಲ್ಲಿಯೇ ಕುಳಿತು ಸುಲಭವಾಗಿ ಹಣ ಸಂಪಾದಿಸಲು ಬಯಸುತ್ತಿದ್ದರೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕವು ನಿಮ್ಮ ಪಾಲಿಗೆ ತುಂಬಾ ಉಪಯುಕ್ತ ಸಾಬೀತಾಗಲಿವೆ ಮತ್ತು ನೀವು ಅದರಿಂದ ಸಾಕಷ್ಟು ಹಣಗಳಿಕೆ ಮಾಡಬಹುದು. (Business News In Kannada)
ನವದೆಹಲಿ: ನಿಮಗೆ ಸಿಗುವ ವೇತನ ನಿಮ್ಮ ಹಣಕಾಸಿನ ಅಗತ್ಯತೆಗಳ ಪೂರೈಕೆಗೆ ಸಾಕಾಗುತ್ತಿಲ್ಲ ಮತ್ತು ಮುಂದಿನ ವರ್ಷದ ಇನ್‌ಕ್ರಿಮೆಂಟ್ ಬಡ್ತಿಗಾಗಿ ನೀವು ಕಾಯುತ್ತಿದ್ದಾರೆ, ನಾವು ನಿಮಗಾಗಿ ಕೆಲವು ಟ್ರಿಕ್‌ಗಳನ್ನು ತಂದಿದ್ದು, ಅವು ನಿಮಗೆ ಸಾಕಷ್ಟು ಗಳಿಕೆ ಮಾಡಲುಸಹಾಯ ಮಾಡುತ್ತವೆ. ಅರ್ಥಾತ್ ಕೆಲವೇ ಗಂಟೆಗಳ ಕೆಲಸ ಮಾಡುವ ಮೂಲಕ ನೀವು ಕೈತುಂಬಾ ಆದಾಯ ಸಂಪಾದಿಸಬಹುದು. ಇದು ನಿಮ್ಮ ಮಾಸಿಕ ಆದಾಯವನ್ನು ಹೆಚ್ಚಿಸುತ್ತದೆ, ಇದಕ್ಕಾಗಿ ನಿಮಗೆ ಬೇಕಾಗಿರುವುದು ಒಂದು ಹಳೆಯ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕ.Business News In Kannada
ಆನ್ಲೈನ್ ಸಮೀಕ್ಷೆ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಸಮೀಕ್ಷೆಗಳು ಸಾಮಾನ್ಯವಾಗಿದೆ. ಈಗ ನೀವು ಅಂತಹ ಸಮೀಕ್ಷೆಗಳಿಂದ ಹಣಗಳಿಕೆ ಮಾಡಬಹುದು. ಇದಕ್ಕಾಗಿ, ಕೆಲವು ಸಮೀಕ್ಷೆ ವೆಬ್‌ಸೈಟ್‌ಗಳಿವೆ, ಅಲ್ಲಿ ಭೇಟಿ ನೀಡುವ ಮೂಲಕ ನೀವು ಸಮೀಕ್ಷೆಯನ್ನು ಪೂರ್ಣಗೊಳಿಸಲು ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಗಳಿಕೆ ಮಾಡಬಹುದು.
ಆಫೀಲಿಯೇಟ್ ಮಾರ್ಕೆಟಿಂಗ್
ಆಫೀಲಿಯೇಟ್ ಮಾರ್ಕೆಟಿಂಗ್ ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಇದರ ಮೂಲಕ ಹಣ ಸಂಪಾದಿಸಲು, ನೀವು ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ನಿಮ್ಮ ಆನ್‌ಲೈನ್ ಆಫೀಲಿಯೇಟ್ ಪ್ರೊಫೈಲ್ ಅನ್ನು ರಚಿಸಬೇಕು, ನಂತರ ಕಂಪನಿಯ ಉತ್ಪನ್ನ ಲಿಂಕ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ, ಅದರ ನಂತರ ಯಾರಾದರೂ ಆ ಲಿಂಕ್‌ನಿಂದ ಖರೀದಿಸಿದಾಗ, ಆ ಉತ್ಪನ್ನದ ಬೆಲೆಯ ಲಾಭದ ಸ್ವಲ್ಪ ಭಾಗ ನಿಮಗೆ ನೀಡಲಾಗುತ್ತದೆ.
ಆನ್ಲೈನ್ ಆಪ್ ಪರೀಕ್ಷೆ
ಮಾರುಕಟ್ಟೆಯಲ್ಲಿ ಪ್ರತಿದಿನ ನೂರಾರು ಆ್ಯಪ್‌ಗಳು ಬಿಡುಗಡೆಯಾಗುತ್ತಿವೆ. ಆದಾಗ್ಯೂ, ಅಪ್ಲಿಕೇಶನ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಇದನ್ನು ಕೆಲವು ಜನರು ಮೊದಲ ಕೆಲವು ತಿಂಗಳುಗಳಲ್ಲಿ ಪರೀಕ್ಷಿಸುತ್ತಾರೆ. ಇಂತಹ ಆ್ಯಪ್ ಗಳನ್ನು ಟೆಸ್ಟ್ ಮಾಡಿದರೆ ಪ್ರತಿದಿನ 500-1000 ರೂ. ಸಿಗುತ್ತದೆ. ಆನ್‌ಲೈನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಲು ಹಣವನ್ನು ಪಾವತಿಸುವ ಹಲವಾರು ವೆಬ್‌ಸೈಟ್‌ಗಳಿವೆ ಮತ್ತು ಅವುಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕದಿಂದ ನೀವು ಹಣಗಳಿಕೆ ಮಾಡಬಹುದು.
ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಸಿಗಲಿದೆ 10288+10288+10288=30864 ಡಿಎ ಬಾಕಿ, ಇಲ್ಲಿದೆ ಲೆಕ್ಕಾಚಾರ!
ಗೇಮ್ ಟೆಸ್ಟಿಂಗ್
ಗೇಮಿಂಗ್‌ನ ವ್ಯಾಪ್ತಿಯು ದಿನದಿಂದ ದಿನಕ್ಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಈಗ ಜನರು ಗೇಮಿಂಗ್‌ನಿಂದ ಹಣವನ್ನು ಗಳಿಸುತ್ತಿದ್ದಾರೆ. ಕೆಲವು ಆಟದ ತಯಾರಿಕಾ ಕಂಪನಿಗಳು ತಮ್ಮ ಹೊಸ ಆಟಗಳನ್ನು ಪರೀಕ್ಷಿಸಲು ಹಣವನ್ನು ಪಾವತಿಸುತ್ತವೆ ಎಂಬುದು ಇಲ್ಲಿ ಗಮನಾರ್ಹ. ಈ ಮೊತ್ತ ಕೆಲವೊಮ್ಮೆ ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಹೀಗಿರುವಾಗ, ನೀವು ಈ ರೀತಿಯಲ್ಲಿಯೂ ಗಳಿಸಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.