ZEEL-Invesco Case: ಮಂಡಳಿಯ ಮುಂದೆ Invesco ವಂಚನೆ ಬಹಿರಂಗಪಡಿಸಿದ ಪುನೀತ್ ಗೊಯೆಂಕಾ, ಇಲ್ಲಿದೆ ಸಂಪೂರ್ಣ ಪತ್ರ
ಪುನೀತ್ ಗೊಯೆಂಕಾ ಇನ್ವೆಸ್ಕೋದ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದ್ದಾರೆ. ಇನ್ವೆಸ್ಕೋ ಪ್ರತಿನಿಧಿಗಳು ಒಂದು ಸ್ಟಾಟರ್ಜಿಕ್ ಗುಂಪಿನೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ನೀಡಿದ್ದಾರೆ ಎನ್ನುವುದನ್ನು ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ZEEL-Invesco Case: ಇನ್ವೆಸ್ಕೋ, ಕಾನೂನುಬಾಹಿರವಾಗಿ ಜೀ ಎಂಟರ್‌ಟೈನ್‌ಮೆಂಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಇದೀಗ ಬಹಿರಂಗವಾಗಿದೆ. ZEELನ CEO MD ಆಗಿರುವ ಪುನೀತ್ ಗೋಯೆಂಕಾ (Punit Goenka) ಅವರು ಇನ್ವೆಸ್ಕೋದ ದ್ಟಂದ್ಟ ನೀತಿಗಳನ್ನು ಮಂಡಳಿಯ ಮುಂದಿಟ್ಟಿದ್ದಾರೆ. ಅಕ್ಟೋಬರ್ 12, 2021 ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ, ಪುನೀತ್ ಗೋಯೆಂಕಾ ಪ್ರಸೆಂಟೇಶನ್ ನೀಡಿದ್ದಾರೆ. ಇದರಲ್ಲಿ ಪುನೀತ್ ಗೋಯೆಂಕಾ ಅವರು , ಫೆಬ್ರವರಿ 2021 ರಲ್ಲಿ ಇನ್ವೆಸ್ಕೋ (Invesco) ಪ್ರತಿನಿಧಿಯೊಂದಿಗೆ ನಡೆದ ಸಂಭಾಷಣೆಯನ್ನು ಮಂಡಳಿಯ ಮುಂದಿಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪುನೀತ್ ಗೋಯೆಂಕಾ ಬಿಎಸ್‌ಇ (BSE) ಮತ್ತು ಎನ್‌ಎಸ್‌ಇಗೂ (NSE)ಪತ್ರವನ್ನು ಬರೆದಿದ್ದಾರೆ.
ಇನ್ವೆಸ್ಕೋ ಪ್ರಕರಣದ ಹಿನ್ನೆಲೆಯಲ್ಲಿ ZEEL ಆಡಳಿತ ಮಂಡಳಿ ಸಭೆ :
ಪುನೀತ್ ಗೊಯೆಂಕಾ (Punit Goenka)ಇನ್ವೆಸ್ಕೋದ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದ್ದಾರೆ. ಇನ್ವೆಸ್ಕೋ ಪ್ರತಿನಿಧಿಗಳು ಒಂದು ಸ್ಟಾಟರ್ಜಿಕ್ ಗುಂಪಿನೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ನೀಡಿದ್ದಾರೆ ಎನ್ನುವುದನ್ನು ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮಾತುಕತೆಯಲ್ಲಿ ಇನ್ವೆಸ್ಕೋದ (Invesco) ಪರವಾಗಿ ಅರುಣ್ ಬಲೋನಿ ಮತ್ತು ಒಎಫ್‌ಐ ಗ್ಲೋಬಲ್ ಚೀನಾ ಫಂಡ್‌ನ ಭವತೋಶ್ ಬಾಜಪೇಯಿ ಕೂಡ ಭಾಗಿಯಾಗಿದ್ದರು. ಇಬ್ಬರೂ ಪುನೀತ್ ಗೋಯೆಂಕಾ ಸಮ್ಮುಖದಲ್ಲಿಯೇ, ಭಾರತದ ದೊಡ್ಡ ಸ್ಟಾಟರ್ಜಿಕ್ ಗುಂಪಿನೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಇಟ್ಟಿದ್ದರು. 'ಸ್ಟ್ರಾಟೆಜಿಕ್ ಗ್ರೂಪ್' ನ ಮೌಲ್ಯಮಾಪನವನ್ನು ಹೆಚ್ಚಿಸಿ ಅಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ : #DeshKaZee: ZEEL-SONY Merger ಗೆ ಸಂಬಂಧಿಸಿದಂತೆ 'Invesco ಯಾರ ಕೈ ಗೊಂಬೆ?' ಎಂದು ಪ್ರಶ್ನಿಸಿದ Dr. Subhash Chandra
ಈ ಒಪ್ಪಂದದಿಂದ ಹೂಡಿಕೆದಾರರಿಗೆ 10 ಸಾವಿರ ಕೋಟಿ ನಷ್ಟ :
ಈ ಒಪ್ಪಂದದಿಂದಾಗಿ ZEEL ನ ಹೂಡಿಕೆದಾರರು 10 ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಪುನೀತ್ ಗೊಯೆಂಕಾ ತಿಳಿಸಿದ್ದಾರೆ. ಪ್ರವರ್ತಕರು ವಿಲೀನಗೊಂಡ ಘಟಕದಲ್ಲಿ ಕೇವಲ 3.99% ಪಾಲನ್ನು ಪಡೆಯುತ್ತಾರೆ. ಪುನೀತ್ ಗೊಯೆಂಕಾ ಅವರು, ವಿಲೀನಗೊಂಡ ಸಂಸ್ಥೆಯಲ್ಲಿ 4% ESOP ಪಡೆಯುತ್ತಾರೆ. ಹೊಸ ಸಂಸ್ಥೆಯಲ್ಲಿಯೂ, ಪುನೀತ್ ಗೊಯೆಂಕಾ ಅವರನ್ನು ಎಂಡಿ ಮತ್ತು ಸಿಇಒ ಮಾಡುವ ಪ್ರಸ್ತಾಪವನ್ನು ಮುಂದಿಡಲಾಗಿತ್ತು. ಒಪ್ಪಂದ ಮಾಡಿಕೊಂಡರೆ, ವಿಲೀನದ ನಂತರ ರಚನೆಯಾಗುವ ಹೊಸ ಕಂಪನಿಯಲ್ಲಿ, ರಣನೀತಿ ರಚಿಸಿದ ಸಮೂಹ ಅಧಿಕ ಪಾಲನ್ನು ಹೊಂದಿರುತ್ತಿತ್ತು ಎಂದು ಗೊಯೆಂಕಾ ತಿಳಿಸಿದ್ದಾರೆ. ಪುನೀತ್ ಗೊಯೆಂಕಾ (Punit Goenka) ಅವರನ್ನೇ MD ಮತ್ತು CEO ಆಗಿ ನೇಮಕ ಮಾಡಲಾಗುವುದು ಎಂದು ಇನ್ವೆಸ್ಕೋ ಪ್ರಸ್ತಾಪಿಸಿತ್ತು.
ಇನ್ವೆಸ್ಕೋ ಪುನೀತ್ ಗೊಯೆಂಕಾಗೆ ಆಫರ್ :
ಮಂಡಳಿಯ ನೋಟಿನ ಪ್ರಕಾರ, ಇನ್ವೆಸ್ಕೋ ಪ್ರಸ್ತಾವನೆಯನ್ನು ಪ್ರಸ್ತುತಪಡಿಸುವಾಗ, ಹೊಸ ವಿಲೀನಗೊಂಡ ಘಟಕದ ಕಾರ್ಯಾಚರಣೆ ಮತ್ತು ವ್ಯವಹಾರ, ಪುನೀತ್ ಗೋಯೆಂಕಾ ನೇತೃತ್ವದಲ್ಲಿಯೇ ನಡೆಯುವುದಾಗಿ ಒತ್ತಿ ಹೇಳಲಾಗಿತ್ತು. ಗೊಯೆಂಕಾ ಅವರ ಪರಿಣತಿ ಮತ್ತು ವೃತ್ತಿಪರ ಸಾಮರ್ಥ್ಯದಿಂದಾಗಿ, ಎಂಡಿ ಮತ್ತು ಸಿಇಒ ಹುದ್ದೆಯಲ್ಲಿ ಅವರೇ ಉಳಿಯುವುದು ಅತ್ಯುನ್ನತವಾದುದು ಎಂದು ಇನ್ವೆಸ್ಕೊ ಹೇಳಿತ್ತು.
ಇದನ್ನೂ ಓದಿ : ZEEL-Sony ಮೆಗಾ ವಿಲೀನಕ್ಕೆ Invesco ಅಸಮಾಧಾನ ಗೊಂಡಿರುವುದರ ಉದ್ದೇಶವಾದರೂ ಏನು?
ಇನ್ವೆಸ್ಕೋ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ?
ZEEL ನೀಡಿರುವ ಪತ್ರದ ಪ್ರಕಾರ, ಪುನೀತ್ ಗೊಯೆಂಕಾ ಒಪ್ಪಂದದಲ್ಲಿ ಕೆಲವು ಆಡಳಿತಾತ್ಮಕ ಸಮಸ್ಯೆಗಳನ್ನು ಕೂಡ ಪ್ರಸ್ತಾಪಿಸಿದ್ದಾರೆ. (ವಿಶೇಷವಾಗಿ ಕಾರ್ಯತಂತ್ರದ ಗುಂಪಿನ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ). ಈ ಒಪ್ಪಂದ ಅವರೊಂದಿಗೆ ಅಥವಾ ಅವರು ಇಲ್ಲದೆಯೂ ಪೂರ್ಣಗೊಳಿಸಬಹುದು ಎಂದು ಇನ್ವೆಸ್ಕೋ ಹೇಳಿತ್ತು. ಆದಾಗ್ಯೂ, ವಿಲೀನಾನಂತರದ ಕಂಪನಿಯನ್ನು ಮುನ್ನಡೆಸಲು ಪುನಿತ್ ಗೊಯೆಂಕಾ ಸೂಕ್ತ ಎಂದು ಇನ್ವೆಸ್ಕೊ ನಂಬಿತ್ತು. ಮತ್ತು ಅವರ ಅನುಪಸ್ಥಿತಿಯು ಷೇರುದಾರರ ಮೌಲ್ಯವನ್ನು ಕಡಿಮೆ ಮಾಡುತ್ತದೆ ಎಂದೂ ಹೇಳಿತ್ತು. ಅವರು ಒಪ್ಪಂದವನ್ನು ಮುಂದುವರಿಸಲು ನಿರಾಕರಿಸಿದರೆ, ಅವರು ಮತ್ತು ಅವರ ಕುಟುಂಬವು ತೊಂದರೆ ಅನುಭವಿಸುತ್ತದೆ ಎಂದು ಇನ್ವೆಸ್ಕೋ ಪದೇ ಪದೇ ಗೊಯೆಂಕಾಗೆ ನೆನಪಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.