#DeshKaZee: ZEEL-SONY Merger ಗೆ ಸಂಬಂಧಿಸಿದಂತೆ `Invesco ಯಾರ ಕೈ ಗೊಂಬೆ?` ಎಂದು ಪ್ರಶ್ನಿಸಿದ Dr. Subhash Chandra
ZEEL-SONY Merger: ಝೀ ಎಂಟರ್ಟೈನ್ಮೆಂಟ್ ಪ್ರಕರಣದಲ್ಲಿ Invesco ಇದೀಗ ವಿವಾದದ ಸುಳಿಗೆ ಸಿಲುಕಿದೆ. ಇದೀಗ ZEELನ ಸಂಸ್ಥಾಪಕರಾಗಿರುವ ಡಾ. ಸುಭಾಶ್ ಚಂದ್ರಾ ಅವರು ಇನ್ವೆಸ್ಕೋ ಗೂಢ ನಡೆಯನ್ನು ಪ್ರಶ್ನಿಸಿದ್ದಾರೆ.
ZEEL-SONY Merger: ಝೀ ಎಂಟರ್ಟೈನ್ಮೆಂಟ್ (ZEEL) ಹಾಗೂ ಸೋನಿ ಪಿಕ್ಚರ್ಸ್(SPNI) ವಿಲೀನ ಪ್ರಕ್ರಿಯೆಯನ್ನು ಉದ್ಯಮ ವಲಯ ಕೂಡ ಸ್ವಾಗತಿಸಿದೆ. ಷೇರು ಮಾರುಕಟ್ಟೆಯಲ್ಲಿಯೂ ಕೂಡ ಉತ್ಸಾಹದ ವಾತಾವರಣವಿದೆ. ಷೇರುದಾರರಲ್ಲಿ ವಿಶ್ವಾಸವೂ ಇದೆ. ಆದರೆ, ಇನ್ವೆಸ್ಕೋ ಮಾತ್ರ ಇದುವರೆಗೂ ಕೂಡ ಝೀ ಎಂಟರ್ಟೈನ್ಮೆಂಟ್ ಮಂಡಳಿಯಲ್ಲಿನ ಬದಲಾವಣೆಯಲ್ಲಿ ತೊಡಗಿದೆ. ಈ ವಿಷಯದಲ್ಲಿ, ಕೆಲವು ಮಾಧ್ಯಮ ಸಂಸ್ಥೆಗಳು ಝೀ ಸಂಸ್ಥೆಯನ್ನೇ ಪ್ರಶ್ನಿಸುತ್ತಿವೆ. ಝೀ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವು ಬಯಸುತ್ತಿವೆ. ಆದರೆ, ಈ ಎಲ್ಲಾ ವರದಿಗಳು ಆಧಾರರಹಿತವಾಗಿವೆ. ಏಕೆಂದರೆ, ZEEL ಸೋನಿಯೊಂದಿಗೆ ವ್ಯವಹರಿಸಿದೆ ಮತ್ತು ಷೇರುದಾರರಿಗೆ ತನ್ನ ಯೋಜನೆಯನ್ನು ಪ್ರಸ್ತುತಪಡಿಸಿದೆ. ಝೀ ಸಂಸ್ಥೆಯ ಮುಂದೆ ಸ್ಪಷ್ಟತೆ ಇದೆ. ಆದರೆ ಇನ್ವೆಸ್ಕೋ ಉದ್ದೇಶವನ್ನು ಇದೀಗ ಪ್ರಶ್ನಿಸಲಾಗುತ್ತಿದೆ. ಇನ್ವೆಸ್ಕೋ ಹಿಂದೆ ಯಾರ ಕೈವಾಡವಿದೆ? ಇನ್ವೆಸ್ಕೋ ಈ ಪ್ರಶ್ನೆಯಿಂದ ಏಕೆ ತಪ್ಪಿಸಿಕೊಳ್ಳಲು ಬಯಸುತ್ತಿದೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.
ಒಪ್ಪಂದದಲ್ಲಿ ಇನ್ವೆಸ್ಕೋ ಏಕೆ ಹುಳಿ ಹಿಂಡುತ್ತಿದೆ?
ಝೀ ಎಂಟರ್ಟಿನ್ ಮೆಂಟ್ ಪ್ರಕರಣದಲ್ಲಿ ಇನ್ವೆಸ್ಕೋ ಖುದ್ದು ಪ್ರಶ್ನೆಗಳಿಂದ ಸುತ್ತುವರೆದಿದೆ. ಏಕೆಂದರೆ ಇನ್ವೆಸ್ಕೋ ಬಳಿ ಯಾವುದೇ ಪ್ರಶ್ನೆಗಳಿಗೆ ಉತ್ತರವಿಲ್ಲ. ಇನ್ವೆಸ್ಕೋ ಯಾರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆ? ಒಂದು ಒಳ್ಳೆಯ ಒಪ್ಪಂದದಲ್ಲಿ ಏಕೆ ಹುಳಿ ಹಿಂಡಲಾಗುತ್ತಿದೆ? ಇನ್ವೆಸ್ಕೋ ಯಾರ ಕೈಗೊಂಬೆಯಾಗಿ ಹೂಡಿಕೆದಾರರನ್ನು ದಾರಿತಪ್ಪಿಸಲು ಬಯಸುತ್ತಿದೆ? ಈ ರೀತಿಯ ಹಲವು ರೀತಿಯ ಪ್ರಶ್ನೆಗಳನ್ನು ಇನ್ವೆಸ್ಕೋ ಕುರಿತು ಕೇಳಿಬರುತ್ತಿವೆ. ಇಡೀ ಪ್ರಕರಣದಲ್ಲಿ ಇನ್ವೆಸ್ಕೋ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ZEEL-SONY ವಿಲೀನದ ನಂತರ ರೂಪುಗೊಂಡ ಕಂಪನಿಯಲ್ಲಿ ಪುನೀತ್ ಗೋಯೆಂಕಾ ಕೂಡ MD-CEO ಆಗಿ ಮುಂದುವರೆದಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್ ವರ್ಕ್ಸ್ ಇಂಡಿಯಾ ಕೂಡ ತನ್ನ ಭರವಸೆಯನ್ನು ವ್ಯಕ್ತಪಡಿಸಿದೆ. ಆದರೆ, ಇದು ಇನ್ವೆಸ್ಕೋಗೆ ಏಕೆ ಕಾಡುತ್ತಿದೆ? ಮ್ಯಾನೇಜ್ಮೆಂಟ್ ನಲ್ಲಿ ಇನ್ವೆಸ್ಕೋ ಯಾರನ್ನು ಇಡಲು ಬಯಸುತ್ತದೆ ಎಂಬುದನ್ನು ಏಕೆ ಬಹಿರಂಗಪಡಿಸುತ್ತಿಲ್ಲ?
ನಿಶ್ಚಿತ ಮಂಡಳಿಯೇ ಇಲ್ಲದಿರುವಾಗ ಇನ್ವೆಸ್ಕೋ ಏಕೆ ಬದಲಾವಣೆ ಬಯಸುತ್ತಿದೆ?
ಇನ್ವೆಸ್ಕೋ ಬಳಿ ಒಂದು ನಿಶ್ಚಿತ ಮಂಡಳಿಯ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಅಷ್ಟೇ ಯಾಕೆ ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ಅನುಭವ ಕೂಡ ಇಲ್ಲ. ಇಂತಹ ಸಂದರ್ಭದಲ್ಲಿ ಇನ್ವೆಸ್ಕೋ ಉದ್ದೇಶವಾದರೂ ಏನು? ಒಂದೆಡೆ ಝೀ ಎಂಟರ್ಟೈನ್ಮೆಂಟ್ ಬಳಿ ಇರುವ ಬೋರ್ಡ್ ನಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ನುರಿತ ಹಾಗೂ ಹೆಸರಾಂತ ಹೆಸರುಗಳು ಸ್ಶಾಮೀಲಾಗಿವೆ. ಇನ್ನೊಂದೆಡೆ ಇನ್ವೆಸ್ಕೋ ಮಂಡಳಿಯಲ್ಲಿರುವ ಹಲವರ ಬಳಿ ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ದೊಡ್ಡ ಅನುಭವವೇ ಇಲ್ಲ. ಹೀಗಿರುವಾಗ ಯಾವ ಆಧಾರದ ಮೇಲೆ ಅವರ ಹೆಸರನ್ನು ಸೂಚಿಸಲಾಗಿದೆ? ಪಾರದರ್ಷಕತೆಯೊಂದಿಗೆ ಇನ್ವೆಸ್ಕೋ ಮುಂದೆ ಬರಬೇಕಿದೆ.
ಇನ್ವೆಸ್ಕೋ ಅನ್ನು ಪ್ರಶ್ನಿಸಿದ ಸುಭಾಶ್ ಚಂದ್ರಾ
ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಸಂಸ್ಥಾಪಕರಾಗಿರುವ ಡಾ. ಸುಭಾಶ್ ಚಂದ್ರಾ, ಈ ಪ್ರಕರಣದಲ್ಲಿ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಹೇಳಿಕೆಯಲ್ಲಿ ಮಾತನಾಡಿರುವ ಚಂದ್ರಾ, " ZEEL ಕಂಪನಿಯನ್ನು ಪುನಿತ್ ಗೋಯೆಂಕಾ ಅವರೇ ಮುನ್ನಡೆಸಲಿ ಅಥವಾ ಬೇರೆ ಯಾವುದೇ ವ್ಯಕ್ತಿ ಮುನ್ನಡೆಸಲಿ. ಆದರೆ, ಆ ವ್ಯಕ್ತಿ ಸಂಸ್ಥೆಯನ್ನು ಮುಂದಕ್ಕೆ ಬೆಳೆಸುವ ಮತ್ತು ಷೇರು ಹೂಡಿಕೆದಾರರಿಗೆ ಲಾಭ ವ್ಯಕ್ತಿಯಾಗಿರಬೇಕು ಎಂಬುದು ಮಹತ್ವದ್ದಾಗಿದೆ. ಕಳೆದ ಸುಮಾರು 30 ವರ್ಷಗಳಿಂದ ನಾನು ಈ ಕಂಪನಿಯನ್ನು ರಕ್ತ-ಬೆವರು ಸುರಿಸಿ ಬೆಳೆಸಿದ್ದೇನೆ. ಏಕೆಂದರೆ ಇದರಲ್ಲಿ ಇಂದು ನನಗೆ ಯಾವ ಲಾಭವು ಇಲ್ಲ ಹಾನಿಯೂ ಇಲ್ಲ. ನಾನು ಈ ಸಂದರ್ಶನವನ್ನು CNBC, Money Cotrole ನ ನನ್ನ ಸಹವರ್ತಿಗಳಿಗೂ ಕೂಡ ನಾನು ನೀಡಲು ಬಯಸಿದ್ದೆ. ಆದರೆ, ಅವರು ನನ್ನ ಸಂದರ್ಶನವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಮಾಧ್ಯಮದಲ್ಲಿ ಚಲಾಯಿಸುವುದು ಇಲ್ಲ. ಏಕೆಂದರೆ ಅವರದೂ ಕೂಡ ಇದರಲ್ಲಿ ವೈಯಕ್ತಿಕ ಲಾಭ ಇರುವಂತೆ ಕಾಣಿಸುತ್ತಿದೆ" ಎಂದು ಹೇಳಿದ್ದಾರೆ.
ZEEL ಪ್ರಕರಣದಲ್ಲಿ ಇನ್ವೆಸ್ಕೋ ಏಕೆ ಪಾರದರ್ಶಕವಾಗಿಲ್ಲ?
"ಇನ್ವೆಸ್ಕೋ ಒಂದು ಒಳ್ಳೆಯ ಹೂಡಿಕೆದಾರ ಕಂಪನಿಯಾಗಿದೆ. ಆದರೆ ZEEL ಪ್ರಕರಣದಲ್ಲಿ ಅದು ಕಂಪನಿಯನ್ನು ತೆಗೆದುಕೊಂಡು ಅದು ಏನು ಮಾಡಲಿದೆ ಎಂಬುದನ್ನು ಪಾರದರ್ಶಕವಾಗಿ ಹೇಳುತ್ತಿಲ್ಲ. ಕಂಪನಿಯ ನಿರ್ವಹಣೆ ಯಾರ ಕೈಗೆ ನೀಡಲಿದೆ. ಪುನಿತ್ ಗೋಯೆಂಕಾ ಅವರನ್ನು ತೆಗೆದುಹಾಕಲು ಬಯಸುತ್ತಿದ್ದರೆ, ತೆಗೆದು ಹಾಕಲಿ. ಆದರೆ, ಅವರ ಜಾಗದಲ್ಲಿ ಮ್ಯಾನೇಜ್ಮೆಂಟ್ ಯಾರ ಕೈಗೆ ನೀಡಲಿದೆ ಎಂಬುದನ್ನು ಏಕೆ ಸ್ಪಷ್ಟಪಡಿಸುತ್ತಿಲ್ಲ? ಇದಕ್ಕಾಗಿ ಇನ್ವೆಸ್ಕೋ ಬೇರೆ ಯಾರ ಜೊತೆಗೆ ಡೀಲ್ ಮಾಡಿಕೊಂಡಿದೆಯೇ? ನಿರ್ದೇಶಕ ಮಂಡಳಿಗೆ ನೀಡಲಾಗಿರುವ 6 ವ್ಯಕ್ತಿಗಳ ಪ್ರಸ್ತಾವನೆಯಲ್ಲಿರುವ 6 ಹೆಸರುಗಳ ಹಿನ್ನೆಲೆ ಏನು? ಈ ಕುರಿತು ಇನ್ವೆಸ್ಕೋ ಬಹಿರಂಗಪಡಿಸಬೇಕು. ಅವರು ಯಾವುದಾದರೊಂದು X ಕಂಪನಿಯ ಜೊತೆಗೆ ಸಂಬಂಧಹೊಂದಿದ್ದಾರೆಯೇ? ಕಂಪನಿಯನ್ನು ಯಾರಾದರು ಪಡೆಯಲು ಬಯಸುತ್ತಿದ್ದಾರೆಯೇ? ಇನ್ವೆಸ್ಕೋ ಈ ಕುರಿತು ಬಹಿರಂಗಪಡಿಸಬೇಕು ನಂತರ ಷೇರು ಹೂಡಿಕೆದಾರರು ಇನ್ವೆಸ್ಕೋ ಜೊತೆಗೆ ಹೋಗಲು ಬಯಸುತ್ತಾರೆಯೋ ಅಥವಾ ZEEL-SONY ಜೊತೆಗೆ ಬರಲು ಇಷ್ಟಪಡುತ್ತಾರೆಯೇ ಎಂಬುದನ್ನು ಅವರನ್ನೇ ನಿರ್ಧರಿಸಲು ಬಿಡಬೇಕು" ಎಂದು ಸುಭಾಶ್ ಚಂದ್ರಾ ಹೇಳಿದ್ದಾರೆ.
ನಿಯಂತ್ರಕರು ಕೂಡ ಇನ್ವೆಸ್ಕೋ ಕಂಪನಿಯನ್ನು ಪ್ರಶ್ನಿಸಬೇಕು
ಮಾಧ್ಯಮ ನಿಯಂತ್ರಕರು ZEEL ಅನ್ನು ಏಕೆ ಪ್ರಶ್ನಿಸುತ್ತಿಲ್ಲ? ಎಂಬ ಪ್ರಶ್ನೆ ಮಾಧ್ಯಮ ವಲಯದಲ್ಲಿ ಕೇಳಲಾಗುತ್ತಿದೆ. ಈ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸುಭಾಶ್ ಚಂದ್ರಾ, "ನಿಯಂತ್ರಕರ ಮೊದಲ ಜವಾಬ್ದಾರಿ ಮೈನಾರಿಟಿ ಷೇರುದಾರರ ಹಿತರಕ್ಷಣೆಯಾಗಿದೆ. ಅವರೂ ಕೂಡ ಇನ್ವೆಸ್ಕೋ ಅನ್ನು ಪ್ರಶ್ನಿಸಬೇಕು ಮತ್ತು ಈ ಪ್ರಕರಣದಲ್ಲಿ ಪಾರದರ್ಶಕತೆಯನ್ನು ಕಾಯಬೇಕು. ಸಣ್ಣ ಷೇರುದಾರರಿಗೆ ಅವರು ಯಾರ ಜೊತೆಗೆ ಹೋಗಲು ಬಯಸುತ್ತಾರೆ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ನೀಡಬೇಕು, ಮತ್ತು ಇದುವರೆಗೆ ಅದು ಮುಂದಕ್ಕೆ ಬಂದಿಲ್ಲ" ಎಂದಿದ್ದಾರೆ.