ಬೆಂಗಳೂರು : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತು ಜೀವನೋಪಾಯ ಇಲಾಖೆಯಿಂದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಕಲಬುರಗಿಯ ಫ್ಲೈಟ್ ಕ್ರೂವ್ ಏವಿಯೇಶನ್ ಅಕಾಡೆಮಿಯಲಿ ಉಚಿತವಾಗಿ ಏರ್‍ಲೈನ್ ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಕೋರ್ಸಿಗೆ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‍ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಲಬುರಗಿಯ ಏರೋಸ್ಪೆಸ್ ಮತ್ತು ಎವಿಯೆಷನ್ ಸೆಕ್ಟರ್‍ನಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ತರಬೇತಿ ಅವಧಿಯು 2 ತಿಂಗಳು ಇದ್ದು, ತರಬೇತಿ ಪಡೆದ ನಂತರ ಸದರಿ ತರಬೇತಿ ಕೇಂದ್ರದಿಂದ ಉದ್ಯೋಗ ಸೌಲಭ್ಯವು ಸಹ ಸಿಗಲಿದೆ.


ಇದನ್ನೂ ಓದಿ: ಗಣಿಗಾರಿಕೆ ಆರೋಪ: ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲು!


ಆಸಕ್ತಿಯುಳ್ಳ ಅಭ್ಯರ್ಥಿಗಳು ದ್ವೀತಿಯ ಪಿ.ಯು.ಸಿ. (ಆಟ್ಸ್, ಕಾಮರ್ಸ್, ಸೈನ್ಸ್) ಪಾಸಾದ ಹಾಗೂ ಯಾವುದೆ ಪದವಿ ಪಾಸಾಗಿರಬೇಕು. ಅಭ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್, ಅಂಕಪಟ್ಟಿ, ಜಾತಿ ಪ್ರಮಾಣಪತ್ರ ಹಾಗೂ ಎರಡು ಭಾವಚಿತ್ರಗಳ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಕಿಯೋನಿಕ್ಸ್ ಐಟಿ ಪಾಕ್, ಹೈಕೋರ್ಟ್ ಎದುರುಗಡೆ, ಕಲಬುರಗಿಯಲ್ಲಿ 2022ರ ಜೂನ್ 6 ರೊಳಗಾಗಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು.'ಸಚಿವ ನಾಗೇಶ್ ಅವರ ಮನೆ ಮೇಲಿನ ದಾಳಿ ಹೇಡಿತನದ ಸಂಕೇತ' 


ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಕೌಶಲ್ಯ ಮೀಷನ್‍ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-225569, ಮೊಬೈಲ್ ಸಂಖ್ಯೆ 8317384664, 9945727378 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.