Railway Recruitment 2024: ನಿರುದ್ಯೋಗಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಖಾಲಿ ಇರುವ ಒಟ್ಟು 11,558 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ಪದವೀಧರ ವರ್ಗದಲ್ಲಿ 8,113 ಹುದ್ದೆಗಳಿವೆ. ಇವುಗಳಲ್ಲಿ 3,144 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳು, 1,736 ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ ಹುದ್ದೆಗಳು, 1,507 ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹುದ್ದೆಗಳು, 994 ಸ್ಟೇಷನ್ ಮಾಸ್ಟರ್ ಹುದ್ದೆಗಳು ಮತ್ತು 732 ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿವೆ.


COMMERCIAL BREAK
SCROLL TO CONTINUE READING

ಸಂಬಂಧಪಟ್ಟ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗಗಳಿಗೆ ಆಯ್ಕೆಯಾದವರಿಗೆ ಮಾಸಿಕ 29,200 ರಿಂದ 35,400 ರೂ. ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳ ವಯಸ್ಸು 1ನೇ ಜನವರಿ 2025ಕ್ಕೆ 18 ವರ್ಷದಿಂದ 36 ವರ್ಷಗಳ ನಡುವಿರಬೇಕು. ವಿಕಲಚೇತನರು, SC/STಯವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಇದನ್ನೂ ಓದಿ: Daily GK Quiz: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ?


ಒಟ್ಟು 11,558 ಹುದ್ದೆಗಳ ಪೈಕಿ 3,445 ಪದವಿಪೂರ್ವ ವಿಭಾಗದಲ್ಲಿವೆ. ಇವುಗಳಲ್ಲಿ 2,022 ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಪೋಸ್ಟ್‌ಗಳು, 990 ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಪೋಸ್ಟ್‌ಗಳು, 361 ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಪೋಸ್ಟ್‌ಗಳು ಮತ್ತು 72 ಟ್ರೈನ್ಸ್ ಕ್ಲರ್ಕ್ ಪೋಸ್ಟ್‌ಗಳು ಸೇರಿವೆ. 


12ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ವಯಸ್ಸು 1ನೇ ಜನವರಿ 2025ಕ್ಕೆ 18 ವರ್ಷದಿಂದ 33 ವರ್ಷಗಳ ನಡುವಿರಬೇಕು. ಅಂಗವಿಕಲರು, SC/ST ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಉದ್ಯೋಗಗಳಿಗೆ ಮಾಸಿಕ 19,900 ರಿಂದ 21,700 ರೂ. ವೇತನ ನೀಡಲಾಗುತ್ತದೆ.ಪದವೀಧರ ವರ್ಗದ ಹುದ್ದೆಗಳಿಗೆ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 13ರವರೆಗೆ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 20ರವರೆಗೆ ಪದವಿಪೂರ್ವ ವರ್ಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯ ಸಂಪೂರ್ಣ ವಿವರವನ್ನು ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡಲಾಗುತ್ತದೆ.


ಇದನ್ನೂ ಓದಿ: ವರ್ಜಿನ್‌, 30 ಲಕ್ಷ ಸಂಬಳ ಪಡೆವ ವರ ಎರಡನೇ ಮದುವೆಯಾಗಲು ಬೇಕಂತೆ ಈ ಸುಂದರಿಗೆ.! ರೂಲ್ಸ್‌ ಬೇರೆ ಇದಾವೆ ಗುರು.. 


ಕಂಪ್ಯೂಟರ್ ಆಧಾರಿತ ಪರೀಕ್ಷೆ (ಟೈರ್-1, ಟೈರ್-2), ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಉದ್ಯೋಗಗಳಿಗೆ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ, EWS, OBC ವರ್ಗದ ಅಭ್ಯರ್ಥಿಗಳಿಗೆ 500 ರೂ. ಹಾಗೂ ಮಹಿಳೆಯರು, ESM, EBC, ಅಂಗವಿಕಲರು, SC/ST ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕವಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.