ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನ
ಜಿಲ್ಲೆಯ ರೈತ ಮಕ್ಕಳಿಗೆ 2023-24 ನೇ ಸಾಲಿಗೆ, 10 ತಿಂಗಳ ಅವಧಿಗೆ ಅಂದರೆ ಜೂನ್.1, 2023 ರಿಂದ ಮಾರ್ಚ್ 30, 2024 ರ ವರೆಗೆ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 5 ಮಹಿಳೆಯರಿಗೆ ಹಾಗೂ 10 ಪುರುಷರಿಗೆ ಸೇರಿ ಒಟ್ಟು-15 ಅಭ್ಯರ್ಥಿಗಳಿಗೆ ತೋಟಗಾರಿಕಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಧಾರವಾಡ : ಜಿಲ್ಲೆಯ ರೈತ ಮಕ್ಕಳಿಗೆ 2023-24 ನೇ ಸಾಲಿಗೆ, 10 ತಿಂಗಳ ಅವಧಿಗೆ ಅಂದರೆ ಜೂನ್.1, 2023 ರಿಂದ ಮಾರ್ಚ್ 30, 2024 ರ ವರೆಗೆ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 5 ಮಹಿಳೆಯರಿಗೆ ಹಾಗೂ 10 ಪುರುಷರಿಗೆ ಸೇರಿ ಒಟ್ಟು-15 ಅಭ್ಯರ್ಥಿಗಳಿಗೆ ತೋಟಗಾರಿಕಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದು ಹೆಸರು ಘೋಷಣೆ : ಡಿಕೆಶಿ ತವರಲ್ಲಿ ಖಾಕಿ ಹೈ ಅರ್ಲಟ್
ಅಭ್ಯರ್ಥಿಗಳು ಅರ್ಜಿಗಳನ್ನು ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ, ಧಾರವಾಡ ಇವರ ಕಛೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಶುಲ್ಕದ ಮೊತ್ತ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 30/- ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.15/- ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್‍ನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಧಾರವಾಡ ರವರ ಹೆಸರಿನಲ್ಲಿ ಪಡೆದು, ಅರ್ಜಿ ಜೊತೆಗೆ ಲಗತ್ತಿಸಬೇಕು.
ಇದನ್ನೂ ಓದಿ: ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸರ್ಕಾರ ರಚಿಸುತ್ತಿಲ್ಲ. ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ
ಅರ್ಜಿ ಫಾರಂಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಸ್ಟೇಷನ್ ರಸ್ತೆ, ಧಾರವಾಡ ರವರ ಕಛೇರಿಯಲ್ಲಿ ಅಥವಾ ಇಲಾಖಾ ವೆಬ್‍ಸೈಟ್ https://horticulturedir.karnataka.gov.in ನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿ ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಮೇ.22 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಧಾರವಾಡ ಇವರ ಕಛೇರಿ ದೂ.ಸಂ:0836-2957801 ಸಂಪರ್ಕಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.