ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಗಳಲ್ಲಿ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಬಾಲನ್ಯಾಯ ಮಂಡಳಿಗೆ ಸಮಾಜ ಕಾರ್ಯಕರ್ತ ಸದಸ್ಯರುಗಳ ಆಯ್ಕೆ ಸಂಬಂಧ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಬಾಲನ್ಯಾಯ ಮಂಡಳಿಗೆ ಸಮಾಜ ಕಾರ್ಯಕರ್ತ ಸದಸ್ಯರುಗಳ ಆಯ್ಕೆ ಸಂಬಂಧ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಖಾಲಿಯಿರುವ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015ರ ಸೆಕ್ಷನ್ 27ರನ್ವಯ ಹಾಗೂ ಮಾದರಿ ನಿಯಮಗಳು, 2016ನ್ನು ಪರಿಷ್ಕರಿಸಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2021 ಹಾಗೂ ಮಾದರಿ ನಿಯಮಗಳು 2022ನ್ನು ದಿನಾಂಕ:01/09/2022 ರಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಪರಿಷ್ಕøತ ಕಾಯ್ದೆ ಹಾಗೂ ನಿಯಮಗಳನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಮತ್ತು ಬಾಲನ್ಯಾಯ ಮಂಡಳಿಯ ಸಮಾಜ ಕಾರ್ಯಕರ್ತ ಸದಸ್ಯರುಗಳಿಗೆ ಪರಿಷ್ಕøಯ ಮಾರ್ಗಸೂಚಿಯನ್ವಯ ಗೌರವಧನ ಪಾವತಿಸಲಾಗುವುದು. ಈ ಗೌರವಧನವು ಉಪಸ್ಥಿತಿ ಭತ್ಯೆ, ಪ್ರಯಾಣ ಭತ್ಯೆ ಮತ್ತು ರಾಜ್ಯ ಸರ್ಕಾರವು ನಿಗಧಿಪಡಿಸುವ ಇನ್ನಿತರೆ ಭತ್ಯೆಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ : ನಕಲಿ ಆಧಾರ್ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ
ಬಾಲನ್ಯಾಯ ಮಂಡಳಿಯ ಸಮಾಜ ಕಾರ್ಯಕರ್ತ ಸದಸ್ಯರುಗಳು: ಬಾಲನ್ಯಾಯ ಮಂಡಳಿಯ ಸಮಾಜ ಕಾರ್ಯಕರ್ತ ಸದಸ್ಯರುಗಳ ಅಧಿಕಾರವಧಿ 3 ವರ್ಷಗಳಾಗಿರುತ್ತದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2021ರ ಸೆಕ್ಷನ್ 27ರನ್ವಯ ಹಾಗೂ ಮಾದರಿ ನಿಯಮಗಳು, 2022ರ ನಿಯಮ 15(3)ರನ್ವಯ ಅರ್ಜಿದಾರರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಾರದು ಮತ್ತು ಮಕ್ಕಳೊಂದಿಗೆ ಸಕ್ರಿಯವಾಗಿ ಶಿಕ್ಷಣ, ಆರೋಗ್ಯ, ಅಥವಾ ಕಲ್ಯಾಣ ಕ್ಷೇತ್ರಗಳಲ್ಲಿ ಕನಿಷ್ಠ 7 ವರ್ಷಗಳ ಕಾರ್ಯಾನುಭವವನ್ನು ಹೊಂದಿರತಕ್ಕದ್ದು. ಅಥವಾ ಅರ್ಜಿದಾರರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಾರದು ಮತ್ತು ಮಕ್ಕಳ ಮನಃಶಾಸ್ತ್ರ (ಚೈಲ್ಡ್ ಸೈಕಾಲಜಿ) ಅಥವಾ ಮನೋರೋಗ ಚಿಕಿತ್ಸೆ (ಸೈಕಿಯಾಟ್ರಿ) ಅಥವಾ ಸಮಾಜ ಶಾಸ್ತ್ರ (ಸೋಶಿಯಾಲಜಿ) ಅಥವಾ ಕಾನೂನು ಕ್ಷೇತ್ರದಲ್ಲಿ ಪದವಿಯನ್ನು ಹೊಂದಿ ವೃತ್ತಿಪರರಾಗಿರತಕ್ಕದ್ದು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಸದಸ್ಯರು: ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಸದಸ್ಯರು ಅಧಿಕಾರವಧಿ 3 ವರ್ಷಗಳಾಗಿರುತ್ತದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2021ರ ಸೆಕ್ಷನ್ 27ರನ್ವಯ ಹಾಗೂ ಮಾದರಿ ನಿಯಮಗಳು, 2022ರ ನಿಯಮ 15(3)ರನ್ವಯ ಅರ್ಜಿದಾರರು 35 ವರ್ಷ ವಯಸ್ಸನ್ನು ಮೀರಿರತಕ್ಕದ್ದು ಮತ್ತು ಮಕ್ಕಳೊಂದಿಗೆ ಸಕ್ರಿಯವಾಗಿ ಶಿಕ್ಷಣ, ಆರೋಗ್ಯ, ಅಥವಾ ಕಲ್ಯಾಣ ಕ್ಷೇತ್ರಗಳಲ್ಲ್ಲಿ ಕನಿಷ್ಠ 7 ವರ್ಷಗಳ ಕಾರ್ಯಾನುಭವವನ್ನು ಹೊಂದಿರತಕ್ಕದ್ದು. ಅಥವಾ ಅರ್ಜಿದಾರರು 35 ವರ್ಷ ವಯಸ್ಸನ್ನು ಮೀರಿರತಕ್ಕದು ್ದಮತ್ತು ಮಕ್ಕಳ ಮನಃಶಾಸ್ತ್ರ (ಚೈಲ್ಡ್ ಸೈಕಾಲಜಿ) ಅಥವಾ ಮನೋರೋಗ ಚಿಕಿತ್ಸೆ (ಸೈಕಿಯಾಟ್ರಿ) ಅಥವಾ ಸಮಾಜ ಕಾರ್ಯಕರ್ತ (ಸೋಶಿಯಲ್ ವರ್ಕ್) ಅಥವಾ ಸಮಾಜ ಶಾಸ್ತ್ರ (ಸೋಶಿಯಾಲಜಿ) ಅಥವಾ ಮಾನವ ಅಭಿವೃದ್ಧಿ (ಹ್ಯೂಮನ್ ಡೆವೆಲಪ್‍ಮೆಂಟ್) ಅಥವಾ ಕಾನೂನು ಕ್ಷೇತ್ರದಲ್ಲಿ ಪದವಿಯನ್ನು ಹೊಂದಿ ವೃತ್ತಿಪರರಾಗಿರತಕ್ಕದ್ದು, ಅಥವಾ ನಿವೃತ್ತ ನ್ಯಾಯಿಕ ಅಧಿಕಾರಿಯಾಗಿರತಕ್ಕದ್ದು.
ಅರ್ಜಿಗಳನ್ನು ನವೆಂಬರ್ 18 ರಿಂದ ಡಿಸೆಂಬರ್ 03. 2022ರ ವರೆಗೆ ಸ್ವೀಕರಿಸಲಾಗುವುದು. ಅರ್ಜಿದಾರರು ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ಕೊನೆಯ ದಿನಾಂಕದೊಳಗೆ ಖುದ್ದು ಅಥವಾ ಅಂಚೆ (ರಿಜಿಸ್ಟರ್ ಪೋಸ್ಟ್) ಮೂಲಕ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಮತ್ತು ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ಆಯ್ಕೆ ಸಮಿತಿ, 3ನೇ ಮಹಡಿ, ವಿಶ್ವೇಶ್ವರಯ್ಯ ಚಿಕ್ಕಗೋಪುರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಸಲ್ಲಿಸಬೇಕು.
ಅಭ್ಯರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯ ಅಧ್ಯಕ್ಷರು, ಸದಸ್ಯರುಗಳ ಆಯ್ಕೆ ಸಂಬಂಧ, ಈ ಹಿಂದೆ ನಿರ್ದೇಶನಾಲಯದಿಂದ ನೀಡಿದ ಪ್ರಕಟಣೆ ದಿನಾಂಕ:13.10.2020, 30.01.2021 ಹಾಗೂ 14.07.2022ರನ್ವಯ ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ, ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ : Guru Margi 2022 : ನ. 24 ರಿಂದ ಗುರುದೇವನ ಚಲನೆ, ಈ ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!
ಬಾಲನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ನಿಗಧಿಪಡಿಸಿರುವ ಅರ್ಜಿ ನಮೂನೆಯು ಎಲ್ಲಾ ಜಿಲ್ಲೆಗಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಲ್ಲಿ ಲಭ್ಯವಿರುತ್ತದೆ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯದ ವೆಬ್‍ಸೈಟ್ www.icps.karnataka.gov.inನಲ್ಲಿ ಸಹ ಲಭ್ಯವಿರುತ್ತದೆ.
ಸಂದರ್ಶನಕ್ಕೆ ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕದೊಂದಿಗೆ ಮಾಹಿತಿಯನ್ನು ತಿಳಿಸಲಾಗುವುದು ಮತ್ತು ಪಟ್ಟಿಯನ್ನು (Short listed) ನಿರ್ದೇಶನಾಲಯದ ವೆಬ್‍ಸೈಟ್ www.icps.karnataka.gov.in ರಲ್ಲಿ ಪ್ರಕಟಿಸಲಾಗುವುದು. ಅರ್ಜಿದಾರರು ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆಯು www.icps.karnataka.gov.in ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕಛೇರಿ ಸಂಖ್ಯೆ:080-22867383. ಯೋಜನಾ ನಿರ್ದೇಶಕರು: 9342585300. ಕಾರ್ಯಕ್ರಮ ಅಧಿಕಾರಿ: 9740399666. ಇ-ಮೇಲ್: icps.kar@gmail.com ಇವರನ್ನು ಸಂಪರ್ಕಿಸಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.