ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

2022-23ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ) ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜ್ಯುಕೇಶನ್ (National Council for Teacher Education) ನಿಂದ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ರೀಸರ್ಚ್ & ಟ್ರೈನಿಂಗ್ (Department of State Education Research and Training) ನಿಂದ ಮಾನ್ಯತೆ ಪಡೆದಿರುವ ಡಿ.ಎಡ್ ಕೋರ್ಸ್ಗಳ ಸರ್ಕಾರಿ, ಅರೆಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸ್ಗಳಲ್ಲಿ 2022-23 ನೇ ಸಾಲಿನಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರೂ. 25,000 ಗಳ ವಿಶೇಷ ಪ್ರೋತ್ಸಾಹಧನ ಪ್ರತಿ ವರ್ಷ (ಗರಿಷ್ಠ 2 ವರ್ಷ ಮಾತ್ರ) ನೀಡಲು ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿದ್ದು, ಈ ಯೋಜನೆಯ ಸದುಪಯೋಗ ಪಡೆಯಲು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 10 ರೊಳಗಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳೊಂದಿಗೆ ಹಾರ್ಡ್ ಪ್ರತಿಗಳನ್ನು ಆಯಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ : Chandra Grahan 2022: ಚಂದ್ರಗ್ರಹಣವು ಈ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ!


ಷರತ್ತುಗಳು : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು ಹಾಗೂ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಬಿ.ಎಡ್ ಹಾಗೂ ಡಿ.ಎಡ್ ಕೋರ್ಸ್ಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ(ಗರಿಷ್ಠ 2 ವರ್ಷ) ಅನುದಾನವನ್ನು ನೀಡಲಾಗುವುದು. ಅಲ್ಪಸಂಖ್ಯಾತರ ಅಭ್ಯರ್ಥಿಗಳ ಪೋಷಕರ ವಾರ್ಷಿಕ ವರಮಾನ ಗರಿಷ್ಠ ರೂ. 6 ಲಕ್ಷಕ್ಕೆ ಮೀರಿರಬಾರದು. ವಿದ್ಯಾರ್ಥಿಯು ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಪೂರ್ಣಕಾಲಿಕ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರಬಾರದು. ಅಭ್ಯರ್ಥಿಗಳನ್ನು ಅರ್ಹತೆ ಪರೀಕ್ಷೆ ಅಥವಾ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.


ವಿದ್ಯಾರ್ಥಿಗಳು ಡಿ.ಎಡ್ ಮತ್ತು ಬಿ.ಎಡ್ ಕೋರ್ಸ್ಗಳಲ್ಲಿ ದಾಖಲಾಗಿರುವ ಹಾಗೂ ಶುಲ್ಕವನ್ನು ಭರಿಸಿರುವ ಬಗ್ಗೆ ಎಲ್ಲಾ ಅಧಿಕೃತ ದಾಖಲಾತಿಗಳನ್ನು ಸಲ್ಲಿಸಬೇಕು. ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜ್ಯುಕೇಶನ್ ನಿಂದ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ರೀಸರ್ಚ್ & ಟ್ರೈನಿಂಗ್ ನಿಂದ ಮಾನ್ಯತೆ ಪಡೆದಿರುವ ಡಿ.ಎಡ್ ಕೋರ್ಸ್ಗಳ ಸರ್ಕಾರಿ, ಅರೆಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ 2021-22 ನೇ ಸಾಲಿನಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ. ಅಂಚೆ ತೆರಪು, ಅರೆಕಾಲಿಕ ಹಾಗೂ ದೂರ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. ಸುಳ್ಳು ಮಾಹಿತಿ, ದಾಖಲಾತಿ ಅಥವಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಧನ ಪಡೆದಿದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ನೀಡಲಾದ ಪ್ರೋತ್ಸಾಹಧನ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಹಿಂದಿರುಗಿಸಲಾಗುವುದು.


ಇದನ್ನೂ ಓದಿ : Chanakya Niti: ಹಣ ಸಂಪಾದಿಸಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!


ಅರ್ಜಿ ಸಲ್ಲಿಸುವ ವಿಧಾನ : ಬಿ.ಎಡ್ ಹಾಗೂ ಡಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಲು ವೆಬ್‌ಸೈಟ್ https://sevasindhu.karnataka.gov.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸ್ವೀಕೃತವಾದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.