ಧಾರವಾಡ: ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಡಿ ಕಮ್ಯುನಿಟಿ ಹೆಲ್ಪರ್ಸ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ನೇಮಕಾತಿ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.


ಹುದ್ದೆಗಳ ವಿವರ: ಧಾರವಾಡದ ಕೃಷಿ ವಿವಿಯಲ್ಲಿ ಖಾಲಿ ಇರುವ 21 ಕಮ್ಯುನಿಟಿ ಹೆಲ್ಪರ್ಸ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಇದನ್ನೂ ಓದಿ: ಜಗತ್ತಿನ ಅತೀ ಶ್ರೀಮಂತ ಭಿಕ್ಷುಕನ ಆಸ್ತಿ ಮೌಲ್ಯ ರೂ. 7.5 ಕೋಟಿ! ಈ ಹೈಫೈ ಬೆಗ್ಗರ್ ಭಾರತದವನೇ…


ಉದ್ಯೋಗ ಸ್ಥಳ: ಧಾರವಾಡ, ಬೆಳಗಾವಿ, ಹಾವೇರಿ ಮತ್ತು ವಿಜಯಪುರ


ಸಲಹೆಗಾರ- 1 ಹುದ್ದೆ


ಹಿರಿಯ ಸಂಶೋಧನಾ ಫೆಲೋ (SRF) - 1 ಹುದ್ದೆ


ಯೋಜನಾ ಸಹಾಯಕ (LRI) - 4 ಹುದ್ದೆಗಳು


ಯೋಜನೆಯ ಸಹಾಯಕ (ಜಲವಿಜ್ಞಾನ) - 2 ಹುದ್ದೆಗಳು


ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು - 1 ಹುದ್ದೆ


ಸಮುದಾಯ ಸಹಾಯಕರು (ಜಲ ಮಿತ್ರ) - 12 ಹುದ್ದೆಗಳು


ಶೈಕ್ಷಣಿಕ ಅರ್ಹತೆ:


ಸಲಹೆಗಾರ: RS & GSನಲ್ಲಿ M.Sc, M.Tech, ಜಿಯೋ-ಇನ್ಫರ್ಮ್ಯಾಟಿಕ್ಸ್‌ನಲ್ಲಿ Ph.D ಮಾಡಿರಬೇಕು.


ಹಿರಿಯ ಸಂಶೋಧನಾ ಫೆಲೋ (SRF): ಕೃಷಿ, ಮಣ್ಣು ವಿಜ್ಞಾನ ಮತ್ತು ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಿರಬೇಕು.


ಪ್ರಾಜೆಕ್ಟ್ ಅಸಿಸ್ಟೆಂಟ್ (LRI): ಡಿಪ್ಲೊಮಾ, ಪದವಿ, ಕೃಷಿಯಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು.


ಪ್ರಾಜೆಕ್ಟ್ ಅಸಿಸ್ಟೆಂಟ್ (Hydrology): ಕೃಷಿಯಲ್ಲಿ ಬಿ.ಎಸ್ಸಿ, ಕೃಷಿ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿರಬೇಕು.


ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು, ಸಮುದಾಯ ಸಹಾಯಕರು (ಜಲ ಮಿತ್ರ): 10ನೇ ತರಗತಿ ಪಾಸ್ ಆಗಿರಬೇಕು.


ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಮಾಸಿಕ ವೇತನ:


ಸಲಹೆಗಾರ: 70 ಸಾವಿರ ರೂ.


ಹಿರಿಯ ಸಂಶೋಧನಾ ಫೆಲೋ (SRF): 31 ಸಾವಿರ ರೂ.


ಯೋಜನಾ ಸಹಾಯಕ (LRI): 21-25 ಸಾವಿರ ರೂ.


ಯೋಜನೆಯ ಸಹಾಯಕ (ಜಲವಿಜ್ಞಾನ):  25 ಸಾವಿರ ರೂ.


ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು: 13 ಸಾವಿರ ರೂ.


ಸಮುದಾಯ ಸಹಾಯಕರು (ಜಲ ಮಿತ್ರ): 5 ಸಾವಿರ ರೂ.


ಪ್ರಮುಖ ದಿನಾಂಕ: ಜುಲೈ 18ರಂದು ಬೆಳಗ್ಗೆ 10.30ಕ್ಕೆ ನೇರ ಸಂದರ್ಶನ ನಡೆಯಲಿದೆ.


ಸಂದರ್ಶನ ನಡೆಯುವ ಸ್ಥಳ: Chamber of Office of Assoc. Director of Research (HQ), Krishinagar, Dharwad


ನೇಮಕಾತಿ ಕುರಿತ ಮತ್ತಷ್ಟು ಮಾಹಿತಿ ಮತ್ತು  ಅಧಿಕೃತ ಅಧಿಸೂಚನೆ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್: uasd.eduಗೆ ಭೇಟಿ ನೀಡಬಹುದು.


ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಮಾಸ್ಟರ್ ಪ್ಲಾನ್! ರಾಷ್ಟ್ರೀಯ ಕಾರ್ಯಕಾರಿಣಿಗೆ ಈ 10 ಹಿರಿಯ ನಾಯಕರ ಸೇರ್ಪಡೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.