ಅಜೀಂ ಪ್ರೇಮ್ಜಿ ವಿವಿಯಿಂದ ಅನುವಾದ ಸಂಪದ’ದ ಲೋಕಾರ್ಪಣೆ
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಇಂಗ್ಲಿಷ್ನಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ, ಶೈಕ್ಷಣಿಕ ಸಂಪನ್ಮೂಲಗಳ ಆನ್ ಲೈನ್ ರೂಪದ ‘ಅನುವಾದ ಸಂಪದ’ವನ್ನು ನಗರದಲ್ಲಿ ಇಂದು ಲೋಕಾರ್ಪಣೆ ಮಾಡಿತು.
ಬೆಂಗಳೂರು: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಇಂಗ್ಲಿಷ್ನಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ, ಶೈಕ್ಷಣಿಕ ಸಂಪನ್ಮೂಲಗಳ ಆನ್ ಲೈನ್ ರೂಪದ ‘ಅನುವಾದ ಸಂಪದ’ವನ್ನು ನಗರದಲ್ಲಿ ಇಂದು ಲೋಕಾರ್ಪಣೆ ಮಾಡಿತು.
ಇದೊಂದು ವಿನೂತನ ಪ್ರಯತ್ನವಾಗಿದ್ದು, ದೇಶದಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕ ಶಿಕ್ಷಕರು ಮುಂತಾದವರಿಗೆ ಈ ಶೈಕ್ಷಣಿಕ ಸಂಪನ್ಮೂಲಗಳು ಮುಕ್ತವಾಗಿ ಮತ್ತು ವ್ಯಾಪಕವಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಡಿಜಿಟಲ್ಸಂಪದವನ್ನು ಬಿಡುಗಡೆ ಮಾಡಲಾಗಿದೆ. ಈ ʼಅನುವಾದ ಸಂಪದʼವು ಪ್ರಸ್ತುತ ಕನ್ನಡ ಮತ್ತು ಹಿಂದಿಯಲ್ಲಿ ಲಭ್ಯವಿದೆ. ಸದ್ಯ ಸುಮಾರು 2000 ಶೈಕ್ಷಣಿಕ ಸಂಪನ್ಮೂಲಗಳಿರುವ ಈ ಸಂಪದಕ್ಕೆ ವಿಸ್ತ್ರತ ನೆಲೆಯಲ್ಲಿ ಲೇಖನಗಳು ಸೇರ್ಪಡೆಯಾಗಲಿವೆ.
ಅನುವಾದಿತ ಸಂಪನ್ಮೂಲಗಳು https://anuvadasampada.azimpremjiuniversity.edu.in/ ಇಲ್ಲಿ ಲಭ್ಯವಿದ್ದು ಇದನ್ನು, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಕುಲಪತಿ ಇಂದು ಪ್ರಸಾದ್ಅವರು ಲೋಕಾರ್ಪಣೆ ಮಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳಲ್ಲಿ ಉನ್ನತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳ ಕೊರತೆ ಇದ್ದು, ಈ ಸಂಪದವು ಅಂತಹ ಕೊರತೆಯನ್ನು ತುಂಬಲಿದೆ.
ಇದನ್ನೂ ಓದಿ: Supreme Court Verdict: ಬೆಂಗಳೂರಿನ ಈದ್ಗಾ ಮೈದಾನದಲ್ಲಿ ನಡೆಯಲ್ಲ ಗಣೇಶೋತ್ಸವ, ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಬ್ರೇಕ್
ಈ ಉಪಕ್ರಮದಿಂದ ದೇಶದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ವೃತ್ತಿಪರರು ವಿಜ್ಞಾನ, ಸಮಾಜ ವಿಜ್ಞಾನ, ಮಾನವಿಕ ಮತ್ತು ಭಾಷಾ ವಿಷಯಗಳ ಶೈಕ್ಷಣಿಕ ಸಂಪನ್ಮೂಲಗಳನ್ನು ಹುಡುಕಿ, ಬಳಸಿ, ಮರುಬಳಕೆ ಮಾಡಲು ಸಾಧ್ಯವಾಗಲಿದೆ. ಹಿಂದಿ ಮತ್ತು ಕನ್ನಡದಲ್ಲಿ ಸ್ವತಂತ್ರವಾದ ಹೊಸ ಬರವಣಿಗೆ, ಓದು, ಚರ್ಚೆ ಮತ್ತು ಸಂವಾದವನ್ನು ಉತ್ತೇಜಿಸಲು ಈ ಸಂಪದವು ಸಹಾಯ ಮಾಡುತ್ತದೆ.
“ಭಾರತೀಯ ಭಾಷೆಗಳಲ್ಲಿ ಶೈಕ್ಷಣಿಕ ಸಂಪನ್ಮೂಲಗಳ ಕೊರತೆಯು ಶಿಕ್ಷಣದ ಲಭ್ಯತೆಯ ಅವಕಾಶವನ್ನು ವಿಸ್ತರಿಸುವಲ್ಲಿ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಅಡಚಣೆಯಾಗಿದೆ. ಪ್ರಸ್ತುತ ಇಂಗ್ಲಿಷ್ನಲ್ಲಷ್ಟೇ ಲಭ್ಯವಿರುವ ಪರಿಕಲ್ಪನೆಗಳೊಂದಿಗೆ ಮತ್ತು ಆಲೋಚನೆಗಳೊಂದಿಗೆ ವಿದ್ಯಾರ್ಥಿಗಳು ಆಳವಾಗಿ ತೊಡಗಿಸಿಕೊಳ್ಳಲು, ಸೂಕ್ಷ್ಮವಾದ ಚರ್ಚೆಗಳನ್ನು ಪ್ರೋತ್ಸಾಹಿಸಿ ವಿವಿಧ ಸಂದರ್ಭಗಳಲ್ಲಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಈ ಉಪಕ್ರಮ ಸಹಾಯವಾದೀತು ಎಂಬ ವಿಶ್ವಾಸ ನಮ್ಮದು” ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ಮುಖ್ಯಸ್ಥರಾಗಿರುವ ಹೃದಯಕಾಂತ್ದಿವಾನ್ಅವರು ಆಶಿಸಿದರು.
ಇದನ್ನೂ ಓದಿ: "ಅವರ ಬಗ್ಗೆ ವ್ಯಂಗ್ಯಚಿತ್ರಗಳು ಬಂದಾಗ ಯಾಕೆ ದೂರು ನೀಡಲಿಲ್ಲ? "
ಈ ಸಂಪದವು ಶಿಕ್ಷಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸ್ನಾತಕೋತ್ತರ ಕಾರ್ಯಕ್ರಮಗಳು, ಕಲೆ, ವಿಜ್ಞಾನ ವಿಷಯಗಳನ್ನೊಳಗೊಂಡ ಸ್ನಾತಕ ಕಾರ್ಯಕ್ರಮಗಳು, ಡಿಪ್ಲೊಮಾ ಕೋರ್ಸ್ಗಳಿಗೆ ಅಗತ್ಯವಿರುವ ಬೇಕಾದ ಆಯ್ದ ಶೈಕ್ಷಣಿಕ ಸಂಪನ್ಮೂಲಗಳನ್ನು ಈ ಸಂಪದ ಒಳಗೊಂಡಿದೆ. ಜತೆಗೆ, ನಿಯತಕಾಲಿಕೆಗಳ ಲೇಖನಗಳು, ಪುಸ್ತಕಗಳ ಆಧ್ಯಾಯಗಳಿಂದ ಆಯ್ದ ಭಾಗ ಅಥವಾ ಪೂರ್ಣಪಾಠ, ಪಾಡ್ಕಾಸ್ಟ್ಗಳು, ಕಿರುಚಿತ್ರಗಳು, ಸಂಕ್ಷಿಪ್ತ ಉಪನ್ಯಾಸಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರನ್ನೊಳಗೊಂಡ ಚರ್ಚೆಗಳ ಆಯ್ದ ಭಾಗಗಳೂ ಇದರಲ್ಲಿವೆ.
ಅಜೀಂ ಪ್ರೇಮ್ಜಿ ಫೌಂಡೇಷನ್ಪ್ರಕಟಿಸಿದ ಕೃತಿಗಳು ಮತ್ತು ಸಂಶೋಧನಾ ಅಧ್ಯಯನಗಳಲ್ಲದೆ ಅಜೀಂ ಪ್ರೇಮ್ಜಿ ಯುನಿವರ್ಸಿಟಿಯ ನಿಯತಕಾಲಿಕೆಗಳಾದ ಲರ್ನಿಂಗ್ಕರ್ವ್(Learning Curve), ಅಟ್ರೈಟ್ಆಂಗಲ್ಸ್(At Right Angles), ಐ ವಂಡರ್(i wonder), ಪಾಠಶಾಲಾ , ಮುಂತಾದ ಸಂಚಿಕೆಗಳು ಶಾಲಾ ಶಿಕ್ಷಣದ ಬೇರೆ ಬೇರೆ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಅವೆಲ್ಲವೂ ಈ ಸಂಪದದಲ್ಲಿವೆ.
ಈ ಜಾಲತಾಣದಲ್ಲಿ, ಅಸಂಖ್ಯಾತ ಅಕಾಡೆಮಿಕ್ಲೇಖನಗಳ ಓದಿಗೆ ಮುಕ್ತ ಅವಕಾಶವಾಗುವಂತೆ ಬೇರೆ ಬೇರೆ ಪ್ರಕಾಶಕರಿಂದ ಹಕ್ಕುಸ್ವಾಮ್ಯ ಅನುಮತಿ ಪಡೆಯುವ ಪ್ರಕ್ರಿಯೆಯೂ ಜಾರಿಯಲ್ಲಿದೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವನ್ನು ಕುರಿತು:
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಕಾಯ್ದೆ 10ರ ಅಡಿ 2010ರಲ್ಲಿ ಸ್ಥಾಪಿಸಲಾಯಿತು. ಪ್ರಾಯೋಜಕ ಸಂಸ್ಥೆಯಾಗಿರುವ ಅಜೀಂ ಪ್ರೇಮ್ಜಿ ಫೌಂಡೇಷನ್ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಸಂಪೂರ್ಣ ಲಾಭರಹಿತ ಸಂಸ್ಥೆಯಾಗಿ, ಸಮಾಜೋಪಕಾರಿ ಉದ್ದೇಶ ಹೊಂದಿದೆ. ನ್ಯಾಯಯುತ, ಸಮಾನ, ಮಾನವೀಯ ಹಾಗೂ ಸುಸ್ಥಿರ ಸಮಾಜ ನಿರ್ಮಾಣದ ದೃಷ್ಟಿಕೋನವನ್ನಿರಿಸಿಕೊಂಡು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.