BMRCL Recruitment 2024: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಖಾಲಿಯಿರುವ 58 ಅಸಿಸ್ಟಂಟ್‌ ಸೆಕ್ಯೂರಿಟಿ ಆಫೀಸರ್‌ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 9 ಕೊನೆಯ ದಿನವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಹುದ್ದೆಗಳ ವಿವರ & ಅರ್ಹತೆ: ಅಸಿಸ್ಟಂಟ್‌ ಸೆಕ್ಯೂರಿಟಿ ಆಫೀಸರ್‌ ಹುದ್ದೆ ಇದಾಗಿದ್ದು, ಜೂನಿಯರ್ ಕಮಿಷನ್ಡ್ ಶ್ರೇಣಿಯಲ್ಲಿ ಸೇವೆಯಲ್ಲಿರುವ ಅಥವಾ ನಿವೃತ್ತ ಸಿಬ್ಬಂದಿ, ಅಧಿಕಾರಿ/ಸುಬೇದಾರ್ ಮೇಜರ್/ಸುಬೇದಾರ್/ಮಾಸ್ಟರ್ ಚೀಫ್ ಪೆಟ್ಟಿ, ಆಫೀಸರ್/ಮಾಸ್ಟರ್ ವಾರಂಟ್ ಆಫೀಸರ್/ವಾರಂಟ್ ಆಫೀಸರ್ ಅಥವಾ ತತ್ಸಮಾನ, ರಕ್ಷಣಾ ಸೇವೆಯಲ್ಲಿದ್ದವರು, ಇನ್ಸ್‌ಪೆಕ್ಟರ್‌/ಸಬ್ ಇನ್ಸ್‌ಪೆಕ್ಟರ್‌/ಎಎಸ್‌ಐ ಅಥವಾ ತತ್ಸಮಾನ ಶ್ರೇಣಿಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ: ದೇಶದ್ರೋಹಿಗಳು ದೇಶಪ್ರೇಮದ ಪಾಠ ಮಾಡುತ್ತಿರುವುದು ಇಂದಿನ ದುರಂತ: ಡಿಸಿಎಂ ಡಿ. ಕೆ. ಶಿವಕುಮಾರ್


ವಯೋಮಿತಿ: ಗರಿಷ್ಠ ವಯೋಮಿತಿ 62 ವರ್ಷ. ಇದು ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, 60 ವರ್ಷಕ್ಕಿಂತ ಕೆಳಗಿರುವವರನ್ನು 3 ವರ್ಷಕ್ಕೆ ಮತ್ತು 60 ವರ್ಷಕ್ಕಿಂತ ಮೇಲಿರುವವರನ್ನು 1 ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಉದ್ಯೋಗ ನಿರ್ವಹಿಸುವ ರೀತಿಯನ್ನು ನೋಡಿಕೊಂಡು ಗುತ್ತಿಗೆ ಮುಂದುವರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.


ಆಯ್ಕೆ ವಿಧಾನ: ದೈಹಿಕ ಪರೀಕ್ಷೆ, ಅರ್ಹತೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 


ಮಾಸಿಕ ವೇತನ: ಆಯ್ಕೆಯಾದ 60 ವರ್ಷದೊಳಗಿನವರಿಗೆ 32,950 ರೂ. ಮತ್ತು 60 ವರ್ಷ ದಾಟಿದವರಿಗೆ 30,000 ರೂ. ಮಾಸಿಕ ವೇತನ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು projectrecruit.bmrc.co.inಗೆ ಭೇಟಿ ನೀಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು: General Manager (HR), Bangalore Metro Rail Corporation Limited, III Floor, BMTC Complex, K.H Road, Shanthinagar, Bengaluru - 560027.


ಇದನ್ನೂ ಓದಿ: ವೈದ್ಯರ ಮುಷ್ಕರ: ಗಡಿಜಿಲ್ಲೆ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ, ಚಿಕಿತ್ಸೆ ಸಿಗದೇ ವಾಪಾಸ್!!


ವಿಶೇಷ ಸೂಚನೆ: ನಿಮ್ಮ ಅಪ್ಲಿಕೇಷನ್ ಸ್ಪೀಡ್‌ ಪೋಸ್ಟ್‌/ಕೊರಿಯರ್‌ ಮೂಲಕ ಕಳುಹಿಸಬೇಕು. ಅರ್ಜಿ ಲಕೋಟೆಯ ಮೇಲ್ಭಾಗದಲ್ಲಿ "APPLICATION FOR THE POST OF ASSISTANT SECURITY OFFICER" ಎಂದು ನಮೂದಿಸುವುದನ್ನು ಮರೆಯಬಾರದು. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ english.bmrc.co.inಗೆ ಭೇಟಿ ನೀಡಿ ಅಥವಾ ಇಮೇಲ್‌ ವಿಳಾಸ helpdesk@bmrc.co.inಗೆ ಸಂಪರ್ಕಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ