CBSE 12th Result 2022: CBSE 12 ನೇ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳ ನಿರೀಕ್ಷೆಯ ನಡುವೆ ಭಾರತ ಸರ್ಕಾರವು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. CBSE 12 ನೇ ಪಾಸ್ ವಿದ್ಯಾರ್ಥಿಗಳು NIRF ಶ್ರೇಯಾಂಕ 2022 ರ ಪ್ರಕಟಣೆಯಿಂದ ಭಾರಿ ಪ್ರಯೋಜನವನ್ನು ಪಡೆಯಲಿದ್ದಾರೆ. ಸಂಶೋಧನೆ, ವಿಶ್ವವಿದ್ಯಾನಿಲಯ, ನಿರ್ವಹಣೆ, ಕಾಲೇಜು, ಫಾರ್ಮಸಿ, ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಒಟ್ಟಾರೆ ವಿಭಾಗಗಳಲ್ಲಿ ಯಾವ ಸಂಸ್ಥೆ ಉತ್ತಮವಾಗಿದೆ ಎಂಬುದನ್ನು ತಿಳಿಯಲು ಈ ಶ್ರೇಯಾಂಕವು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ. 12 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ವಿದ್ಯಾರ್ಥಿಗಳು  ಸುಲಭವಾಗಿ ತಮ್ಮ ಮುಂದಿನ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಲು ಇದರಿಂದ ಸಾಧ್ಯವಾಗಲಿದೆ.

COMMERCIAL BREAK
SCROLL TO CONTINUE READING

ವಿಶ್ವವಿದ್ಯಾನಿಲಯ ವರ್ಗದಲ್ಲಿ 2022 ರ ಶ್ರೇಯಾಂಕ
1. IISc, ಬೆಂಗಳೂರು
2. JNU, ದೆಹಲಿ
3. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ
4. ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ
5. ಅಮೃತ ವಿಶ್ವ ವಿದ್ಯಾಪೀಠ, ಕೊಯಮತ್ತೂರು, ತಮಿಳುನಾಡು
6. BHU, ವಾರಣಾಸಿ
7. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್, ಕರ್ನಾಟಕ
8. ಕಲ್ಕತ್ತಾ ವಿಶ್ವವಿದ್ಯಾಲಯ, ಪು. ಬಂಗಾಳ
9. ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೈದ್ರಾಬಾದ್
10. ಹೈದರಾಬಾದ್ ವಿಶ್ವವಿದ್ಯಾಲಯ, ಹೈದ್ರಾಬಾದ್


ಟಾಪ್ 10 ಕಾಲೇಜುಗಳ ಪಟ್ಟಿ
1- ಮಿರಾಂಡಾ ಹೌಸ್ ಕಾಲೇಜ್ ದೆಹಲಿ
2- ಹಿಂದೂ ಕಾಲೇಜು, ದೆಹಲಿ
3- ಪ್ರೆಸಿಡೆನ್ಸಿ ಕಾಲೇಜು, ಚೆನ್ನೈ
4- ಲೋಯಾಲಾ ಕಾಲೇಜು, ಚೆನ್ನೈ
5- ಲೇಡಿ ಶ್ರೀರಾಮ್ ಕಾಲೇಜ್, ನವದೆಹಲಿ
6- PSGR ಕೃಷ್ಣಮ್ಮಲ್ ಮಹಿಳಾ ಕಾಲೇಜು, ಕೊಯಮತ್ತೂರು
7- ಆತ್ಮಾರಾಮ್ ಸನಾತನ ಧರ್ಮ ಕಾಲೇಜು, ದೆಹಲಿ
8- ಸೇಂಟ್ ಕ್ಸೇವಿಯರ್ ಕಾಲೇಜು, ಕೋಲ್ಕತ್ತಾ
9- ರಾಮಕೃಷ್ಣ ಮಿಷನ್, ಹೌರಾ
10- ಕಿರೋರಿ ಮಲ್ ಕಾಲೇಜು, ನವದೆಹಲಿ


ಒಟ್ಟಾರೆ ವಿಭಾಗದಲ್ಲಿ 
1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್
2. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ
4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ
5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ
6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್‌ಪುರ
7. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ
8. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗುವಾಹಟಿ
9. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ನವದೆಹಲಿ
10. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ


ಇವು ಭಾರತದ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳಾಗಿವೆ
ಐಐಟಿ ಮದ್ರಾಸ್
ಐಐಟಿ ದೆಹಲಿ
ಐಐಟಿ ಬಾಂಬೆ
ಐಐಟಿ ಕಾನ್ಪುರ
ಐಐಟಿ ಖರಗ್‌ಪುರ
ಐಐಟಿ ರೂರ್ಕಿ
ಐಐಟಿ ಗುವಾಹಟಿ
NIT ತಿರುಚ್ಚಿ
ಐಐಟಿ ಹೈದರಾಬಾದ್
NIT ಕರ್ನಾಟಕ


ಇದನ್ನೂ ಓದಿ-ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ 'ಉಚಿತ ಬೂಸ್ಟರ್ ಡೋಸ್' : ಹೀಗೆ ನೊಂದಾಯಿಸಿಕೊಳ್ಳಿ!


ಏನಿದು NIRF ಶ್ರೇಯಾಂಕ ಪಟ್ಟಿ?
ಪ್ರತಿ ವರ್ಷ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.  ದೇಶದ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಮತ್ತು ಫಾರ್ಮಸಿ ಸಂಸ್ಥೆಗಳ ಶ್ರೇಯಾಂಕವನ್ನು ನಿರ್ಧರಿಸಲು NIRF ಅನ್ನು ರಚಿಸಲಾಗಿದೆ. ಈ ಹಿಂದೆ ಶ್ರೇಯಾಂಕಕ್ಕಾಗಿ ಯಾವುದೇ ಸರ್ಕಾರಿ ಸಂಸ್ಥೆ ಇರಲಿಲ್ಲ. ಖಾಸಗಿ ಸಂಸ್ಥೆಗಳು ಶ್ರೇಯಾಂಕಗಳನ್ನು ನೀಡುತ್ತಿದ್ದವು, ಆದರೆ ಅವುಗಳನ್ನು ಪ್ರಶ್ನಿಸಲಾಗುತ್ತಿತ್ತು. ಆದರೆ ಇದೀಗ ವಿವನಿಯತಾಂಕಗಳ ಆಧಾರದ ಮೇಲೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಶ್ರೇಯಾಂಕವನ್ನು ನೀಡಲಾಗುತ್ತದೆ. ಬೋಧನಾ ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಔಟ್‌ರೀಚ್ ಮತ್ತು ಒಳಗೊಳ್ಳುವಿಕೆ, ಗ್ರಹಿಕೆಗಳ ಆಧಾರದ ಮೇಲೆ ಸಂಸ್ಥೆಗಳಿಗೆ ಈ NIRF ಶ್ರೇಯಾಂಕವನ್ನು ನೀಡಲಾಗುತ್ತದೆ.


ಇದನ್ನೂ ಓದಿ-ಮಕ್ಕಳ ಸ್ಟೇಷನರಿಯಿಂದ ಹಿಡಿದು ಆಸ್ಪತ್ರೆಯ ಬೆಡ್ ವರೆಗೆ ಸೋಮವಾರದಿಂದ ಯಾವ ಯಾವ ವಸ್ತುಗಳು ದುಬಾರಿ?


ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಜುಲೈ ಕೊನೆಯ ವಾರದಲ್ಲಿ ಪ್ರಕಟವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ,  NIRF ಶ್ರೇಯಾಂಕ ಪತಿ ಬಿಡುಗಡೆಯಾದ ಬಳಿಕ, 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸಬಹುದು. ಫಲಿತಾಂಶ ಪ್ರಕಟವಾದ ನಂತರ ಯಾವುದೇ ಗೊಂದಲವಿಲ್ಲದೆ ಅರ್ಜಿ ಸಲ್ಲಿಸಲು ಇದರಿಂದ ಸಾಧ್ಯವಾಗಲಿದೆ. CBSE ಟರ್ಮ್-2 10 ನೇ ತರಗತಿಯ ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಮೇ 24 ರವರೆಗೆ ನಡೆಸಲಾಗಿತ್ತು ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಜೂನ್ 15 ರವರೆಗೆ ನಡೆಸಲಾಗಿತ್ತು. ಎರಡೂ ತರಗತಿಗಳ ಪರೀಕ್ಷೆಯಲ್ಲಿ ಸುಮಾರು 35 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ