CBSE Class 10th Result 2024:ಆಕ್ಟಿವ್ ಆಗಿದೆ CBSE 10ನೇ ಮರುಮೌಲ್ಯಮಾಪನ ಲಿಂಕ್: ಅರ್ಜಿ ಸಲ್ಲಿಸಲು ಹೀಗೆ ಮಾಡಿ
CBSE Class 10 Result Revaluation 2024: ಸಿಬಿಎಸ್ಇ 10 ನೇ ತರಗತಿಯ ಫಲಿತಾಂಶದಿಂದ ಅತೃಪ್ತರಾಗಿರುವ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಪರಿಶೀಲನೆ, ಫೋಟೋಕಾಪಿ ಮತ್ತು ಮರು-ಮೌಲ್ಯಮಾಪನಕ್ಕಾಗಿ ಈಗ ಅರ್ಜಿ ಸಲ್ಲಿಸಬಹುದು.
CBSE Class 10 Result Revaluation 2024:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಉತ್ತರ ಪತ್ರಿಕೆಯ ವೆರಿಫಿಕೆಶನ್,ಫೋಟೋಕಾಪಿ ಮತ್ತು ಮರು ಮೌಲ್ಯಮಾಪನಕ್ಕಾಗಿ ಅಪ್ಲಿಕೇಶನ್ ಲಿಂಕ್ ಅನ್ನು ಆಕ್ಟಿವ್ ಮಾಡಿದೆ. ಈ ಪ್ರಕ್ರಿಯೆಗಳಿಗಾಗಿ ಅರ್ಜಿ ಸಲ್ಲಿಸಲು ಮೇ 24, 2024 ಕೊನೆಯ ದಿನವಾಗಿದೆ.ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 500 ರೂ.ಅರ್ಜಿ ಶುಲ್ಕ ಪಾವತಿಸಬೇಕು. ಸಿಬಿಎಸ್ಇ 10 ನೇ ತರಗತಿಯ ಫಲಿತಾಂಶದಿಂದ ಅತೃಪ್ತರಾಗಿರುವ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಪರಿಶೀಲನೆ, ಫೋಟೋಕಾಪಿ ಮತ್ತು ಮರು-ಮೌಲ್ಯಮಾಪನಕ್ಕಾಗಿ ಈಗ ಅರ್ಜಿ ಸಲ್ಲಿಸಬಹುದು.
1.ವೆರಿಫಿಕೆಶನ್ ಮಾಡುವ ಅಂಕಗಳನ್ನು CBSE ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಯ ಲಾಗಿನ್ ಖಾತೆಗೆ ಅಪ್‌ಲೋಡ್ ಮಾಡಲಾಗುತ್ತದೆ.ಇಲ್ಲಿ ವಿದ್ಯಾರ್ಥಿಯೊಂದಿಗೆ ಯಾವುದೇ ರೀತಿಯ ವೈಯಕ್ತಿಕ ಸಂವಹನ (individual communication) ಇರುವುದಿಲ್ಲ.
2.ಒಂದು ವೇಳೆ ಅಂಕಗಳಲ್ಲಿ ಬದಲಾವಣೆ ಇದ್ದರೆ ಅಂಕಗಳನ್ನು ಬದಲಾಯಿಸಲಾಗಿದೆ ಎಂದು ಅಪ್‌ಲೋಡ್ ಮಾಡಲಾಗುತ್ತದೆ.
೩. ನಂತರ, ಫಲಿತಾಂಶವನ್ನು ಮರು ಲೆಕ್ಕಾಚಾರ ಮಾಡಿದ ಬಳಿಕದ ಅಂಕ (ಅದು ಹೆಚ್ಚಿದ್ದರೂ ಸರಿ ಕಡಿಮೆಯಿದ್ದರೂ ಸರಿ) ಅದನ್ನು ಅಪ್‌ಲೋಡ್ ಮಾಡಲಾಗುತ್ತದೆ.
೪. ವೆರಿಫಿಕೆಶನ್ ರಿಕ್ವೆಸ್ಟ್ ಸ್ಟೇಟಸ್ ಪರಿಶೀಲನೆಗೆ ಅರ್ಜಿದಾರರು CBSE ಯ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ : 30 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
“ಅಂಕಗಳ ವೆರಿಫಿಕೆಶನ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಯ ಫೋಟೊಕಾಪಿಯನ್ನು ಮಾತ್ರ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಹೇಳಲಾಗಿದೆ.
CBSE 10ನೇ ತರಗತಿಯ ಮರುಮೌಲ್ಯಮಾಪನ,ವೆರಿಫಿಕೆಶನ್ ಪ್ರಕ್ರಿಯೆ 2024:
ಅರ್ಜಿ ಸಲ್ಲಿಸುವುದು ಹೇಗೆ ?:
೧. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)ನ ಅಧಿಕೃತ ವೆಬ್‌ಸೈಟ್ cbse.gov.in ಮತ್ತು ಪರೀಕ್ಷಾ ಸಂಗಮಕ್ಕೆ ಭೇಟಿ ನೀಡಿ.
೨. ‘Continue’ ಮತ್ತು Schools(Ganga) ಮೇಲೆ ಕ್ಲಿಕ್ ಮಾಡಿ.
೩. ಈಗ,School Digilocker & Post Exam Activities ಮೇಲೆ ಕ್ಲಿಕ್ ಮಾಡಿ.
೪. ಇದಾದ ನಂತರ ‘Online Application for Verification, Photocopies and Re-Evaluations of Answer Scripts/Re-checking and Re-evaluation ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
೫. ‘Apply for Verification – Class 10,’ ಮೇಲೆ ಕ್ಲಿಕ್ ಮಾಡಿ.
೬.ನಿಮ್ಮ ಪ್ರವೇಶ ಕಾರ್ಡ್‌ನಲ್ಲಿ ನೀಡಿರುವಂತೆ,ರೋಲ್ ಸಂಖ್ಯೆ, 5 ಅಂಕಿಗಳ ಶಾಲಾ ಸಂಖ್ಯೆ ( ಖಾಸಗಿ ಅಭ್ಯರ್ಥಿಯಾಗಿದ್ದಲ್ಲಿ 99999 ಅನ್ನು ನಮೂದಿಸಿ), ಸೆಂಟರ್ ಸಂಖ್ಯೆ ಯಂಥಹ ವಿವರಗಳನ್ನು ನಮೂದಿಸಿ.
ಇದನ್ನೂ ಓದಿ :KCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್ ಫಿಕ್ಸ್.. ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.