CBSE ಬೋರ್ಡ್ 12ನೇ ತರಗತಿ ಫಲಿತಾಂಶ: ರಿಸಲ್ಟ್ ಪರಿಶೀಲಿಸಲು ಈ ಮಾರ್ಗ ಅನುಸರಿಸಿ
ಸಿಬಿಎಸ್‌ಯ ಅಂತಿಮ ಅಂಕಪಟ್ಟಿಯನ್ನು 2022 ರ ಪ್ರಥಮ ಮತ್ತು ದ್ವಿತೀಯ ಅವಧಿಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ತೂಕದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ವರ್ಕ್, ಪ್ರಾಯೋಗಿಕ ಮತ್ತು ಪೂರ್ವ-ಬೋರ್ಡ್ ಪರೀಕ್ಷೆಯ ರೂಪದಲ್ಲಿ ಪಡೆದ ಅಂಕಗಳ ವಿವರಗಳನ್ನು ಸ್ಕೋರ್ಕಾರ್ಡ್ ಒಳಗೊಂಡಿದೆ.
CBSE ಬೋರ್ಡ್ 12 ನೇ ತರಗತಿಯ ಫಲಿತಾಂಶ ಬಿಡುಗಡೆಯಾಗಿದೆ. ಈಗಾಗಲೇ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು CBSE ಮಂಡಳಿಯ ಅಧಿಕೃತ ವೆಬ್‌ಸೈಟ್ cbseresults.nic.in, results.cbse.nic.in, results.gov.in, digilocker.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಈ ವರ್ಷ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಎಲ್ಲಾ ವಿದ್ಯಾರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದು.
ಸಿಬಿಎಸ್‌ಯ ಅಂತಿಮ ಅಂಕಪಟ್ಟಿಯನ್ನು 2022 ರ ಪ್ರಥಮ ಮತ್ತು ದ್ವಿತೀಯ ಅವಧಿಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ತೂಕದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ವರ್ಕ್, ಪ್ರಾಯೋಗಿಕ ಮತ್ತು ಪೂರ್ವ-ಬೋರ್ಡ್ ಪರೀಕ್ಷೆಯ ರೂಪದಲ್ಲಿ ಪಡೆದ ಅಂಕಗಳ ವಿವರಗಳನ್ನು ಸ್ಕೋರ್ಕಾರ್ಡ್ ಒಳಗೊಂಡಿದೆ.
ಸಿಬಿಎಸ್‌ಇ 12 ನೇ ಫಲಿತಾಂಶವನ್ನು ಹೀಗೆ ಪರಿಶೀಲಿಸಿ:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- cbse.gov.in, cbresults.nic.in.
ನಂತರ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ
ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ
12ನೇ ತರಗತಿಯ ಫಲಿತಾಂಶ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.
12 ನೇ ತರಗತಿಯ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ
SMS ಮೂಲಕ ಫಲಿತಾಂಶವನ್ನು ಪರಿಶೀಲಿಸಿ:
ಎಸ್‌ಎಂಎಸ್ ಮೂಲಕ ಫಲಿತಾಂಶ ಪಡೆಯಬೇಕಾದರೆ cbse12<ರೋಲ್ ಸಂಖ್ಯೆ> ಯನ್ನು ಟೈಪ್ ಮಾಡಿ. ಅದನ್ನು 7738299899 ಗೆ ಕಳುಹಿಸಿ. ತಕ್ಷಣವೇ ಮರು ಉತ್ತರದ ಮೂಲಕ ಫಲಿತಾಂಶ ಬರುತ್ತದೆ.
ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಯನ್ನು ಏಪ್ರಿಲ್ 26 ರಿಂದ ಜೂನ್ 4 ರವರೆಗೆ ನಡೆಸಲಾಗಿತ್ತು. ಸಿಬಿಎಸ್‌ಇ 2021-22ರ ಶೈಕ್ಷಣಿಕ ಅವಧಿಯ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ನಡೆಸಿತ್ತು. ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆದ CBSE ಟರ್ಮ್ 1 ಬೋರ್ಡ್ ಪರೀಕ್ಷೆಯನ್ನು ವಸ್ತುನಿಷ್ಠ ಪ್ರಶ್ನೆಗಳಿಗಾಗಿ ನಡೆಸಲಾಯಿತು. ಬಳಿಕ ಟರ್ಮ್ 2 ಪರೀಕ್ಷೆಯು ವಿಶ್ಲೇಷಣಾತ್ಮಕ ಮತ್ತು ಕೇಸ್ ಆಧಾರಿತ ಪ್ರಶ್ನೆಗಳನ್ನು ಹೊಂದಿತ್ತು.ಈ ಪರೀಕ್ಷೆಯನ್ನು ಏಪ್ರಿಲ್-ಮೇ 2022 ರಲ್ಲಿ ನಡೆಸಲಾಗಿದೆ. ಮಂಡಳಿಯು ಟರ್ಮ್ 1 ಫಲಿತಾಂಶವನ್ನು ಪ್ರಕಟಿಸಿರಲಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ