ವಿಕಲಚೇತನ ಮಕ್ಕಳ ಅಗತ್ಯಕ್ಕೆ ಅನುಸಾರವಾಗಿ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ CBSE
ಇದೀಗ ಎಲ್ಲಾ ಶಾಲೆಗಳು ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಸರಿಸುವಂತೆ CBSE ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಅಧಿಕೃತ ಸೂಚನೆಯ ಪ್ರಕಾರ, ಮಂಡಳಿಯು ಅಫಿಲಿಯೇಶನ್ ಬೈ-ಲಾಸ್ 2018ರ ಷರತ್ತು ಸಂಖ್ಯೆ 4.7.3ರ ಅಡಿಯಲ್ಲಿ "ಶಾಲೆಯು ಶೌಚಾಲಯಗಳಲ್ಲಿ ಗಾಲಿಕುರ್ಚಿ ತೆಗದುಕೊಂಡು ಹೋಗಲು ಅನುವಾಗುವಂತೆ ರ್ಯಾಂಪ್ ವ್ಯವಸ್ಥೆ, ಪ್ರವೇಶ / ನಿರ್ಗಮನ ಸ್ಥಳಗಳಲ್ಲಿ ಮತ್ತು ಎಲಿವೇಟರ್‌ಗಳಲ್ಲಿ ಶ್ರವಣ ಸಂಕೇತಗಳಂತಹ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದೆ."ವಿಕಲಾಂಗ ವ್ಯಕ್ತಿಗಳ ಪುನರ್ವಸತಿ ಕಾಯಿದೆ 2016ರ ನಿಬಂಧನೆಗಳ ಪ್ರಕಾರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿಶೇಷ ಅಗತ್ಯವಿರುವ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗೆ ಸೇರಿಸುವುದನ್ನು ಶಾಲೆಯು ಪ್ರೋತ್ಸಾಹಿಸಬೇಕು.
ಶಾಲೆಗಳಲ್ಲಿ ಓದುತ್ತಿರುವ CwSN ವಿದ್ಯಾರ್ಥಿಗಳಿಗೆ ನಿಬಂಧನೆಗಳ ಕುರಿತು ಮಾರ್ಗಸೂಚಿಗಳನ್ನು ಅತ್ಯುತ್ತಮವಾಗಿಸಲು ಶಾಲೆಗಳಿಂದ ಲಿಖಿತ ವಿನಂತಿಗಳನ್ನು ಮಾಡುತ್ತಲೇ ಬರುತ್ತಿವೆ.ಇದೀಗ ಎಲ್ಲಾ ಶಾಲೆಗಳು ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಸರಿಸುವಂತೆ CBSE ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : UGC NET 2024 ಪರೀಕ್ಷೆಗಾಗಿ ಸಿಟಿ ಸ್ಲಿಪ್ ಬಿಡುಗಡೆ :ಹೀಗೆ ಡೌನ್‌ಲೋಡ್ ಮಾಡಿಕೊಳ್ಳಿ
CwSN ಮಾರ್ಗಸೂಚಿಗಳು :
೧.ವಿಕಲ ಚೇತನ ವಿದ್ಯಾರ್ಥಿಗಳ ತಡೆ-ಮುಕ್ತ ಪ್ರವೇಶಕ್ಕಾಗಿ ಶಾಲೆಯ ನೆಲ ಮಹಡಿಯಲ್ಲಿ ಸರಿಯಾದ ರಾಂಪ್ ಅನ್ನು ಕಡ್ಡಾಯವಾಗಿ ನಿರ್ಮಿಸಬೇಕು.
೨.ವೀಲ್ ಚೇರ್/ವಾಕರ್ ಚಲಿಸಲು ಸಾಕಷ್ಟು ಸ್ಥಳಾವಕಾಶವಿರುವ ಶೌಚಾಲಯಗಳನ್ನು ನಿರ್ವಹಿಸಬೇಕು.
೩. ಶಾಲೆಗೆ ಅನುಮತಿ ತೆಗೆದುಕೊಳ್ಳುವಾಗ ಮತ್ತು ಶಾಲೆಯ ಲೈಸೆನ್ಸ್ ಅನ್ನು ಮುಂದುವರೆಸುವಾಗ ತರಗತಿಗಳು/ಪ್ರಾಕ್ಟಿಕಲ್‌ಗಳನ್ನು ನಡೆಸಲು ಉದ್ದೇಶಿಸಿರುವ ಮಹಡಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು.
೪. ಶಾಲೆಯ ಫ್ಲೋರ್ ಅನ್ನು ಚೆನ್ನಾಗಿ ನಿರ್ವಹಿಸಬೇಕು.ಸಮತಟ್ಟಾದ ಮೇಲ್ಮೈಯನ್ನು ಒದಗಿಸಬೇಕು.
೫. ಸುಸಜ್ಜಿತ ನೆಲಹಾಸು ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಆರಾಮದಾಯಕ ಪ್ರವೇಶವನ್ನು ಒದಗಿಸುತ್ತದೆ.ಇದು ವಿಕಲಾಂಗ ಮಕ್ಕಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
೬. ಶಾಲೆಯ ಗೇಟ್‌ನಿಂದ ಶಾಲಾ ಕಟ್ಟಡದವರೆಗೆ, ಆಟದ ಮೈದಾನ ಮತ್ತು ಶೌಚಾಲಯದವರೆಗಿನ ಮಾರ್ಗವು ಸರಿಯಾಗಿರಬೇಕು,ದೃಢವಾಗಿರಬೇಕು, ಸಮತಟ್ಟಾಗಿರಬೇಕು ಮತ್ತು ನಿಯಮಿತವಾಗಿ ನಿರ್ವಹಿಸಬೇಕು.
ಇದನ್ನೂ ಓದಿ : ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
೭. ಶಾಲಾ ಕಟ್ಟಡಗಳಲ್ಲಿ ಮುಖ್ಯ ಬಾಗಿಲು ಸೇರಿದಂತೆ ಎಲ್ಲಾ ಬಾಗಿಲುಗಳು 1500-1800 ಮಿಮೀ ಅಗಲವಾಗಿರಬೇಕು.
೮. ತರಗತಿ ಕೊಠಡಿಗಳು, ಶೌಚಾಲಯಗಳು,ಲ್ಯಾಬ್‌ಗಳು ಇತ್ಯಾದಿಗಳು ಕನಿಷ್ಠ 900 ಮಿಮೀ ಪಾರದರ್ಶಕ ಬಾಗಿಲಿನ ಅಗಲವನ್ನು ಹೊಂದಿರಬೇಕು.
೯. ಕಾಲುದಾರಿಗಳಲ್ಲಿ ತೀಕ್ಷ್ಣವಾದ ತಿರುವುಗಳನ್ನು ತಪ್ಪಿಸಬೇಕು.
೧೦. ನಡೆದಾಡುವ ದಾರಿಯಲ್ಲಿ ಕಿಟಕಿಗಳು, ದೀಪಗಳು, ತಗ್ಗು ಶಾಖೆಗಳು, ಹೂಕುಂಡಗಳು, ಇತ್ಯಾದಿಗಳಂತಹ ನೇತಾಡುವ ಮತ್ತು ಚಾಚಿಕೊಂಡಿರುವ ವಸ್ತುಗಳನ್ನು ಇಡಬಾರದು.
೧೧. ನಡೆದಾಡಿಕೊಂಡು ಹೋಗಲು ಅನುಕೂಲವಾಗುವಂತೆ ಹ್ಯಾಂಡ್ ರೈಲ್ ಗಳನ್ನೂ ಒದಗಿಸಬೇಕು.
೧೨. ಮೆಟ್ಟಿಲುಗಳು ಮತ್ತು ವರಾಂಡಾ ಸೇರಿದಂತೆ ಹಾದಿಯಲ್ಲಿ ಹಠಾತ್ ಬದಲಾವಣೆಗಳಿದ್ದರೆ ಹ್ಯಾಂಡ್ ರೈಲ್ ಅಗತ್ಯವಾಗಿ ಇರಬೇಕು.
೧೩. ಮೆಟ್ಟಿಲುಗಳ ಎತ್ತರ ಮತ್ತು ಅಗಲ ಒಂದೇ ರೀತಿಯಲ್ಲಿ ಇರಬೇಕು.
೧೪. ನಾನ್ ಸ್ಲಿಪರಿ ಮ್,ಅತ್ತು ಮ್ಯಾಟ್ ಫಿನಿಶ್ ನೆಲವನ್ನಷ್ಟೇ ಶಾಲೆ ಹೊಂದಿರಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.