CTET 2022: CBSE, CTET ಡಿಸೆಂಬರ್ 2022 ಪರೀಕ್ಷೆಗೆ ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (CTET) ಡಿಸೆಂಬರ್ 2022 ರಲ್ಲಿ CBT ಮೋಡ್‌ನಲ್ಲಿ ನಡೆಸಲಾಗುವುದು ಎಂದು ಮಂಡಳಿ ಹೇಳಿದೆ. CTET ಡಿಸೆಂಬರ್ 2022 ರ ವಿವರವಾದ ಅಧಿಸೂಚನೆಯನ್ನು ಶೀಘ್ರದಲ್ಲೇ ctet.nic.in ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಂಡಳಿ ಹೇಳಿದೆ. ಈ ಪರೀಕ್ಷೆಯನ್ನು ಒಟ್ಟು 20 ಭಾಷೆಗಳಲ್ಲಿ ಆಯೋಜಿಸಲಾಗುತ್ತಿದೆ. CTET ಪರೀಕ್ಷೆಯ ಮಾದರಿ, ಭಾಷೆ, ಪಠ್ಯಕ್ರಮ, ಅರ್ಹತಾ ಷರತ್ತುಗಳು, ಪರೀಕ್ಷೆಯ ನಗರ ಮತ್ತು ಪ್ರಮುಖ ದಿನಾಂಕಗಳ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗುವುದು ಎನ್ನಲಾಗಿದೆ. ಈ ಅಧಿಸೂಚನೆಯಲ್ಲಿ ಅಭ್ಯರ್ಥಿಗಳು ctet.nic.in ವೆಬ್‌ಸೈಟ್‌ನಿಂದ CTET ಬುಲೆಟಿನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಅದನ್ನು ಗಮನವಿಟ್ಟು ಓದಿದ ನಂತರವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಬುಲೆಟಿನ್ ಗಾಗ್ ctet.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ.


COMMERCIAL BREAK
SCROLL TO CONTINUE READING

ಅರ್ಜಿ ಪ್ರಕ್ರಿಯೆ ಯಾವಾಗ ಆರಂಭ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇನ್ನೂ ಅಧಿಕೃತವಾಗಿ CTET ಪರೀಕ್ಷೆಯ ನಿಖರವಾದ ದಿನಾಂಕವನ್ನು ಘೋಷಿಸದಿದ್ದರೂ ಕೂಡ ಪರೀಕ್ಷೆಯನ್ನು ಡಿಸೆಂಬರ್ 2022 ರಲ್ಲಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ. CTET ಡಿಸೆಂಬರ್ 2022 ಗಾಗಿ ಅರ್ಜಿ ಪ್ರಕ್ರಿಯೆಯ ದಿನಾಂಕಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು CBSE ಹೇಳಿದೆ.


ಸಂಕ್ಷಿಪ್ತ ಸೂಚನೆಯಲ್ಲಿ, CBSE, CTET ಡಿಸೆಂಬರ್ 2022 ಪರೀಕ್ಷೆಯ ಅರ್ಜಿ ಶುಲ್ಕವನ್ನು ಬಿಡುಗಡೆ ಮಾಡಿದೆ
ಸಾಮಾನ್ಯ ಮತ್ತು OBC ವರ್ಗಕ್ಕೆ: 

ಪೇಪರ್ 1 ಅಥವಾ ಪೇಪರ್ 2 - 1000 ರೂ
ಪೇಪರ್ 1 ಮತ್ತು ಪೇಪರ್ 2 ಎರಡಕ್ಕೂ - 1200 ರೂ


SC, ST ಮತ್ತು ದಿವ್ಯಾಂಗ ವರ್ಗಕ್ಕೆ:
ಪೇಪರ್ 1 ಅಥವಾ ಪೇಪರ್ 2 - 500 ರೂ
ಪೇಪರ್ 1 ಮತ್ತು ಪೇಪರ್ 2 ಎರಡಕ್ಕೂ - 600 ರೂ


ಸಂಪೂರ್ಣ ಕಿರು ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ಕಿಸಿ...
CBSE ಪ್ರತಿ ವರ್ಷ ಎರಡು ಬಾರಿ CTET ಪರೀಕ್ಷೆಯನ್ನು ಆಯೋಜಿಸುತ್ತದೆ. ಮೊದಲ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ಮತ್ತು ಎರಡನೇ ಪರೀಕ್ಷೆಯನ್ನು ಡಿಸೆಂಬರ್‌ನಲ್ಲಿ ನಡೆಸಲಾಗುತದೆ. CTET ಪೇಪರ್-1 ರಲ್ಲಿ ಹಾಜರಾಗುವ ಯಶಸ್ವಿ ಅಭ್ಯರ್ಥಿಗಳನ್ನು 1 ರಿಂದ 5 ನೇ ತರಗತಿಗೆ ಶಿಕ್ಷಕರ ನೇಮಕಾತಿಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ. ಆದರೆ ಪತ್ರಿಕೆ-2 ರಲ್ಲಿ ಹಾಜರಾಗುವ ಯಶಸ್ವಿ ಅಭ್ಯರ್ಥಿಗಳನ್ನು 6 ರಿಂದ 8 ನೇ ತರಗತಿಗೆ ಶಿಕ್ಷಕರ ನೇಮಕಾತಿಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ.


ಹಿಂದಿನ CTET ಡಿಸೆಂಬರ್ 2021 ಪರೀಕ್ಷೆಯಲ್ಲಿ ಒಟ್ಟು 2773676 ಅಭ್ಯರ್ಥಿಗಳು CTET ಪೇಪರ್-1 ಮತ್ತು ಪೇಪರ್-2 ಎರಡರಲ್ಲೂ ಹಾಜರಾಗಿದ್ದರು. ಈ ಪೈಕಿ 665536 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.


ಇದನ್ನೂ ಓದಿ-ಪಿಎಸ್ಐ ನೇಮಕಾತಿ ಅಕ್ರಮ : ಈ ಬ್ಯಾಚ್ ಪಿಎಸ್ ಐಗಳ ಮೇಲೆ ಈಗ ಸಿಐಡಿ ಕಣ್ಣು..?


CTET ಪರೀಕ್ಷೆಯ ಮಾನ್ಯತೆ ಈ ಮೊದಲು ಕೇವಲ 7 ವರ್ಷಗಳಿಗಾಗಿ ಮಾತ್ರ ಇತ್ತು. ಆದರೆ, ಇದೀಗ ಅದನ್ನು ಬದಲಾಯಿಸಿ ಜೀವಿತಾವಧಿಗಾಗಿ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೇಶದಾದ್ಯಂತ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸೈನಿಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ-CBSE 12th Result 2022 : ಸಿಬಿಎಸ್ಇ 12ನೇ ತರಗತಿಗೂ ಮುನ್ನ ಸರ್ಕಾರದ ಮಹತ್ವದ ಘೋಷಣೆ, ವಿದ್ಯಾರ್ಥಿಗಳಿಗೆ ಭಾರಿ ಲಾಭ


CTET ಕನಿಷ್ಠ ಅಂಕಗಳು
CTET ಪರೀಕ್ಷೆ ಪಾಸಾಗಲು ಅಭ್ಯರ್ಥಿಗಳು ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸುವುದು ಅವಶ್ಯಕ ಎನ್ನಲಾಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕನಿಷ್ಠ ಶೇ.60 ರಷ್ಟು ಅಂಕ ಗಳಿಸುವುದು ಕಡ್ಡಾಯವಾಗಿದೆ. ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಈ ಕನಿಷ್ಠ ಅಂಕ ಶೇ. 55. ಅಂಕಗಳನ್ನು ಗಳಿಸಬೇಕು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.