Govt Jobs 2024: ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿಯಲ್ಲಿ ಲೈಬ್ರರಿ ಮತ್ತು ಮಾಹಿತಿ ಸಹಾಯಕ ಹುದ್ದೆಗಳಿಗೆ ಪರೀಕ್ಷೆಯಿಲ್ಲದೆ ನೇರ ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗಾಗಿ ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭಾಗಿದ್ದು, ಈ ತಿಂಗಳಾಂತ್ಯದವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮೊದಲು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯ ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಇಲ್ಲಿವೆ ಪ್ರಮುಖ ಮಾಹಿತಿ. 


COMMERCIAL BREAK
SCROLL TO CONTINUE READING

ಎಲ್ಲಿ ಅರ್ಜಿ ಸಲ್ಲಿಸಬೇಕು? 
ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿಯಲ್ಲಿ ಲೈಬ್ರರಿ ಮತ್ತು ಇನ್ಫಾರ್ಮೇಶನ್ ಅಸಿಸ್ಟೆಂಟ್ ಹುದ್ದೆಗಳ (Jobs) ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indiaculture.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. 


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 
ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿಯಲ್ಲಿ ಲೈಬ್ರರಿ ಮತ್ತು ಇನ್ಫಾರ್ಮೇಶನ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ (Recruitment) ಅರ್ಜಿ  ಸಲ್ಲಿಸಲು 30 ಮೇ 2024 ಕೊನೆಯ ದಿನಾಂಕವಾಗಿದೆ. 


ಇದನ್ನೂ ಓದಿ- CSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌


ವಿದ್ಯಾರ್ಹತೆ: 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಲೈಬ್ರರಿ ಸೈನ್ಸ್ ಅಥವಾ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಯು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೊಮಾವನ್ನು ಸಹ ಉತ್ತೀರ್ಣರಾಗಿರಬೇಕು. ಅಷ್ಟೇ ಅಲ್ಲದೆ, ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು.


ವಯೋಮಿತಿ: 
ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳು. 


ನೇಮಕಾತಿ ಪ್ರಕ್ರಿಯೆ? 
ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿಯಲ್ಲಿ ಲೈಬ್ರರಿ ಮತ್ತು ಇನ್ಫಾರ್ಮೇಶನ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಗಾಗಿ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆಗಳನ್ನು ಆಯೋಜಿಸಲಾಗುವುದಿಲ್ಲ. ಬದಲಿಗೆ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. 


ಇದನ್ನೂ ಓದಿ- GK Quiz: ಯಾವ ವಿಟಮಿನ್ ಕೊರತೆಯಿಂದ ವ್ಯಕ್ತಿಯು ಬೇಗ ವಯಸ್ಸಾದವರಂತೆ ಕಾಣುತ್ತಾನೆ


ವೇತನ ಶ್ರೇಣಿ: 
ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿಯಲ್ಲಿ ಲೈಬ್ರರಿ ಮತ್ತು ಮಾಹಿತಿ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹಂತ-6 ರ ಅಡಿಯಲ್ಲಿ 35,400ರೂ.ಗಳಿಂದ  1,00,000 ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.