KSET 2023 Admit Card Released: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಹಾಯಕ ಪ್ರಾಧ್ಯಾಪಕರ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯ ( ಕೆಎಸ್‌ಇಟಿ 2023 ) ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ . ಅರ್ಹ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಅಧಿಕೃತ ವೆಬ್‌ಸೈಟ್ cetonline.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು .


COMMERCIAL BREAK
SCROLL TO CONTINUE READING

KSET 2023 ಪರೀಕ್ಷೆಯನ್ನು ಜನವರಿ 13, 2024 ರಂದು ನಡೆಸಲು ನಿರ್ಧರಿಸಲಾಗಿದೆ. ನೋಂದಾಯಿತ ಅಭ್ಯರ್ಥಿಗಳಿಗೆ ಎರಡು ಪರೀಕ್ಷೆಗಳಿರಲಿವೆ. ಪೇಪರ್ I ಅನ್ನು ಬೆಳಿಗ್ಗೆ 10.00 ರಿಂದ 11.00 ರವರೆಗೆ ಮತ್ತು ಪೇಪರ್ 2 ಅನ್ನು ಮಧ್ಯಾಹ್ನ 12.00 ರಿಂದ 2.00 ರವರೆಗೆ ನಡೆಸಲಾಗುತ್ತದೆ. ಅರ್ಥಿಗಳು ಪರೀಕ್ಷೆಗೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಸೂಚಿಸಲಾಗಿದೆ. ಗಮನಾರ್ಹ ವಿಷಯವೆಂದರೆ ತಪ್ಪಾದ ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ. 


ಇದನ್ನೂ ಓದಿ- ಗೃಹ ರಕ್ಷಕ ದಳದ ನೇಮಕಾತಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ


ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಅಧಿಕೃತ ವೆಬ್‌ಸೈಟ್ cetonline.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಇದಕ್ಕಾಗಿ ಇಲ್ಲಿದೆ ಹಂತ ಹಂತದ ಪ್ರಕ್ರಿಯೆ.. 
* ಮೊದಲನೆಯದಾಗಿ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ
* ಮುಖಪುಟದಲ್ಲಿ ಕಾಣುವ KSET ಅಡ್ಮಿಟ್ ಕಾರ್ಡ್ 2023 ಲಿಂಕ್ ಅನ್ನು ಕ್ಲಿಕ್ ಮಾಡಿ. 
* ನಿಗದಿತ ಜಾಗದಲ್ಲಿ ನಿಮ್ಮ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ
* ಪ್ರವೇಶ ಪತ್ರವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ
* ಭವಿಷ್ಯದ ಬಳಕೆಗಾಗಿ ಡೌನ್‌ಲೋಡ್ ಮಾಡಿದ ಅಡ್ಮಿಟ್ ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ. 


ಇದನ್ನೂ ಓದಿ- GK Quiz: ಯಾವ ದೇಶ ಫಿಫಾ ವಿಶ್ವಕಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದುಕೊಂಡಿದೆ?


ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅಡ್ಮಿಟ್ ಕಾರ್ಡ್ ಪ್ರಿಂಟ್ ಔಟ್ ಮತ್ತು ಮಾನ್ಯವಾದ ಗುರುತಿನ ಪುರಾವೆಯನ್ನು ಪರೀಕ್ಷಾ ಹಾಲ್ ಗೆ ಕೊಂಡೊಯ್ಯುವುದು ಕಡ್ಡಾಯವಾಗಿದೆ. 


KSET 2023 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಈ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ: 
ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ನೇರ ಲಿಂಕ್.
KSET - 2023 ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು / ಕಾಲೇಜುಗಳು / ಸಂಸ್ಥೆಗಳ (ಸರ್ಕಾರಿ/ ಅನುದಾನಿತ/ಖಾಸಗಿ) ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಿಗದಿಪಡಿಸಿದ ನೇಮಕಾತಿ ನಿಯಮಗಳು ಮತ್ತು ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.