EMRS Recruitment 2023: ಏಕಲವ್ಯ ಮಾದರಿ ಶಾಲೆಯಲ್ಲಿ 4,062 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
EMRS Recruitment 2023: ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 28, ನೋಂದಣಿ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ ಜುಲೈ 31 ಆಗಿರುತ್ತದೆ. ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ನವದೆಹಲಿ: ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಅಡಿಯಲ್ಲಿ ಬರುವ ಏಕಲವ್ಯ ಮಾದರಿ ವಸತಿ ಶಾಲೆಯು 4,062 ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಏಕಲವ್ಯ ಮಾದರಿ ಶಾಲೆಯ ಅತಿಥಿ ಉಪನ್ಯಾಸಕ, ಪಿಜಿಟಿ, ಟಿಜಿಟಿ, ಅತಿಥಿ ಉಪನ್ಯಾಸಕ, ಲ್ಯಾಬ್ ಅಟೆಂಡೆಂಟ್, ಅಡುಗೆಯವರು, ಸಹಾಯಕರು ಮತ್ತು ಸ್ವೀಪರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 31ರೊಳಗೆ ಅಧಿಕೃತ ವೆಬ್‍ಸೈಟ್ recruitment.nta.nic.in ಗೆ ಭೇಟಿ ನೀಡುವ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 28, ನೋಂದಣಿ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ ಜುಲೈ 31 ಆಗಿರುತ್ತದೆ. ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಹುದ್ದೆಗಳ ವಿವರ: ಪ್ರಿನ್ಸಿಪಾಲ್ - 303 ಹುದ್ದೆಗಳು, ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ) - 2,266 ಹುದ್ದೆಗಳು, ಅಕೌಂಟೆಂಟ್ - 361 ಹುದ್ದೆಗಳು, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA)/ಕ್ಲರ್ಕ್ - 759 ಹುದ್ದೆಗಳು ಮತ್ತು ಲ್ಯಾಬ್ ಅಟೆಂಡೆಂಟ್ - 373 ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ: ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿದು ಪ್ರಾಣ ಬಿಟ್ಟ ವೃದ್ಧೆ, ಮತ್ತೊಂದು ಪ್ರಕರಣದಲ್ಲಿ ತಾಯಿ-ಮಗು ಗ್ರೇಟ್ ಎಸ್ಕೇಪ್
ವೇತನ ಶ್ರೇಣಿ: ಹುದ್ದೆಗಳಿಗೆ ತಕ್ಕಂತೆ 30 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ವೇತನವಿರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ/OBC/EWS ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಪ್ರಿನ್ಸಿಪಾಲ್ ಹುದ್ದೆಗೆ ಶುಲ್ಕ 2 ಸಾವಿರ ರೂ., ಪಿಜಿಟಿಗೆ 1,500 ರೂ. ಮತ್ತು ಬೋಧಕೇತರ ಹುದ್ದೆಗಳಿಗೆ 1 ಸಾವಿರ ರೂ. ಮತ್ತು SC/ST/PwBDಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಇರುತ್ತದೆ.
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸ್ನಾತಕೋತ್ತರ ಪದವಿ, ಬಿ.ಎಡ್ ಪದವಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಾವೀಣ್ಯತೆ. ಕಂಪ್ಯೂಟರ್ ಗಳ ಕೆಲಸದ ಜ್ಞಾನ
ಸ್ನಾತಕೋತ್ತರ ಶಿಕ್ಷಕರು (PGT) ಡೀಮ್ಡ್ ವಿಶ್ವವಿದ್ಯಾಲಯವೆಂದು ಪರಿಗಣಿಸಲಾದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ವಾಣಿಜ್ಯ ಅಕೌಂಟೆಂಟ್ ಪದವಿ
ಜ್ಯೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (GSA) ಸೀನಿಯರ್ ಸೆಕೆಂಡರಿ (12ನೇ ತರಗತಿ) ಪ್ರಮಾಣಪತ್ರವನ್ನು ಮಾನ್ಯತೆ ಪಡೆದ ಮಂಡಳಿಯಿಂದ ಪಡೆದಿರಬೇಕು ಮತ್ತು ಇಂಗ್ಲಿಷ್ ಟೈಪಿಂಗ್‍ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳು ಅಥವಾ ಹಿಂದಿ ಟೈಪಿಂಗ್‍ನಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗವನ್ನು ಹೊಂದಿರಬೇಕು.
ಇದನ್ನೂ ಓದಿ: ಕರ್ನಾಟಕದಲ್ಲಿ ಒಳ ಹರಿವು ಮಟ್ಟ ಹೆಚ್ಚಳ; ಡ್ಯಾಂ ನೀರಿನ ಪ್ರಮಾಣದ ಇಲ್ಲಿದೆ ಇಂದಿನ ವಿವರ
ವಯೋಮಿತಿ: ಪ್ರಿನ್ಸಿಪಾಲ್ ಹುದ್ದೆಗೆ 50 ವರ್ಷಗಳು, ಪಿಜಿಟಿಗೆ 40 ವರ್ಷಗಳು ಮತ್ತು ಅಕೌಂಟೆಂಟ್, ಜೂ. ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಪಾವತಿ ವಿಧಾನ: ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‍ಸೈಟ್ https://emrs.tribal.gov.in/ ಗೆ ಭೇಟಿ ನೀಡಿ ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಬಳಸಿ ಆನ್‍ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.