ದೆಹಲಿ ವಿಶ್ವವಿದ್ಯಾಲಯ ಶೀಘ್ರದಲ್ಲೇ ಕೆಲವು ಹೊಸ ಮತ್ತು ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.ವಿಶ್ವವಿದ್ಯಾನಿಲಯ ಸೈಟ್‌ಗಳಿಂದ ಪಡೆದ ಮಾಹಿತಿಯ ಪ್ರಕಾರ,ಕ್ಯಾಂಪಸ್‌ನಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳ ಪ್ರವೇಶವನ್ನು ಅನುಮತಿಸುವುದು,ವಿದ್ಯಾರ್ಥಿಗಳಿಗೆ ಉಚಿತ ಊಟದ ಯೋಜನೆಯನ್ನು ಪ್ರಾರಂಭಿಸುವಂತಹ ಮಹತ್ವಾಕಾಂಕ್ಷೆಯ  ಕ್ರಮಗಳನ್ನು ಜಾರಿಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. 


COMMERCIAL BREAK
SCROLL TO CONTINUE READING

ಇಸ್ರೋ ಜೊತೆ ಟೈ ಅಪ್ : 
ನಿಗದಿತ ಗುರಿಗಳ ಪ್ರಕಾರ, ವಿಶ್ವವಿದ್ಯಾನಿಲಯವು ತನ್ನದೇ ಆದ ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಜಿಪಿಎಸ್ ನ್ಯಾವಿಗೇಷನ್ ಜೊತೆಗೆ ವೈಜ್ಞಾನಿಕ ಸಂಶೋಧನೆ, ದೂರಸಂಪರ್ಕ, ದೂರ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಯೋಜನೆಯನ್ನು ವಾಸ್ತವೀಕರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದಂತಹ ಸಂಸ್ಥೆಗಳ ನೆರವು ಪಡೆಯುವ ಬಗ್ಗೆ DU  ಯೋಚಿಸಬಹುದು ಎಂದು ಹೇಳಲಾಗಿದೆ. 


ಇದನ್ನೂ ಓದಿ : IRCTC Recruitment 2024: ಲಿಖಿತ ಪರೀಕ್ಷೆ ಇಲ್ಲದೆ ಭಾರತೀಯ ರೈಲ್ವೆಯಲ್ಲಿ ನೇಮಕಾತಿ, ತಿಂಗಳಿಗೆ 2 ಲಕ್ಷ ಸಂಬಳ!


ಡೀಸೆಲ್-ಪೆಟ್ರೋಲ್ ವಾಹನಗಳಿಗೆ ಪ್ರವೇಶವಿಲ್ಲ : 
ಹೆಚ್ಚುವರಿಯಾಗಿ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಮಹತ್ವದ ನಿರ್ಧಾರ ತೆಗೆದುಕೊಳ್ಳುವತ್ತ ಗಮನ ಹರಿಸಿದೆ. ಹಾಗಾಗಿ   DU ಕ್ಯಾಂಪಸ್‌ನಲ್ಲಿ  ಪೆಟ್ರೋಲ್, ಡಿಸೇಲ್ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಿದೆ ಎನ್ನಲಾಗಿದೆ. ಈ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣದತ್ತ ಗಮನ ಹರಿಸುತ್ತಿದೆ. 


ಉಚಿತ ಊಟ: 
ಡಿಯು ವಂಚಿತ ಸಮುದಾಯದ ವಿದ್ಯಾರ್ಥಿಗಳಿಗೆ 'ವರ್ಕಿಂಗ್ ಲಂಚ್' ಯೋಜನೆಯನ್ನು ಪ್ರಾರಂಭಿಸಲಿದೆ. ಇದರಲ್ಲಿ ಕೆಲಸದ ಬದಲಿಗೆ  ವಿಶ್ವವಿದ್ಯಾಲಯದ 'ಕೆಫೆಟೇರಿಯಾ'ದಲ್ಲಿ ಉಚಿತ ಆಹಾರವನ್ನು ಪಡೆಯುತ್ತಾರೆ. ಈ ಯೋಜನೆಗಳ ಜೊತೆಗೆ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನೇತೃತ್ವದ ಸ್ಟಾರ್ಟ್-ಅಪ್‌ಗಳು ಅಭಿವೃದ್ಧಿಪಡಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ವಾಣಿಜ್ಯ ಶಾಪಿಂಗ್ ಪ್ರದೇಶವನ್ನು ಸ್ಥಾಪಿಸುವ ಮೂಲಕ ವಿದೇಶದಲ್ಲಿರುವ ವಿಶ್ವವಿದ್ಯಾನಿಲಯಗಳ ಮಾದರಿಯಲ್ಲಿ 'ಯೂನಿವರ್ಸಿಟಿ ಹಾಟ್' ಅನ್ನು ರಚಿಸುವ ಬಗ್ಗೆಯೂ ಯೋಚಿಸುತ್ತಿದೆ. ಸಾಂಸ್ಥಿಕ ಅಭಿವೃದ್ಧಿ ಯೋಜನೆಗೆ ಶೈಕ್ಷಣಿಕ ಪರಿಷತ್ತಿನ ಸದಸ್ಯರು ಗುರುವಾರ ಅನುಮೋದನೆ ನೀಡಿದರು.


ಇದನ್ನೂ ಓದಿ : ದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಇಲ್ಲಿವೆ ! ನಂಬರ್ ಒನ್ ಸ್ಥಾನದಲ್ಲಿ ಬೆಂಗಳೂರಿನ ವಿದ್ಯಾಸಂಸ್ಥೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.