NEET JEE Syllabus : ವರ್ಷ ಮುಗಿಯುತ್ತಿದ್ದಂತೆ, ವಿದ್ಯಾರ್ಥಿಗಳು NEET UG ಮತ್ತು JEE ಮೇನ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ತಯಾರಿಯನ್ನು ಪೂರ್ಣಗೊಳಿಸುತ್ತಾರೆ. ಈ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮಾಡುವ ಪ್ರಮುಖ ಕೆಲಸ ಎಂದರೆ ಮಾದರಿ ಪತ್ರಿಕೆಗಳು ಮತ್ತು ಹಿಂದಿನ ವರ್ಷಗಳ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು.


COMMERCIAL BREAK
SCROLL TO CONTINUE READING

ಮಾದರಿ ಪತ್ರಿಕೆಗಳು ಮತ್ತು ಹಿಂದಿನ ವರ್ಷಗಳ ಪತ್ರಿಕೆಗಳಿಗಾಗಿ ಅಥವಾ ಆನ್‌ಲೈನ್ ನೋಂದಣಿಗಾಗಿ ಪುಸ್ತಕಗಳನ್ನು ಖರೀದಿಸಲು ಪ್ರತಿಯೊಬ್ಬರೂ ಹಣವನ್ನು ಖರ್ಚು ಮಾಡಲು ಇಷ್ಟಪಡುವುದಿಲ್ಲ. JEE ಮೇನ್, NEET UGಗಾಗಿ ಉಚಿತ ಮಾದರಿ ಪೇಪರ್‌ಗಳನ್ನು ಪಡೆಯಲು ಅಂತರ್ಜಾಲದಲ್ಲಿ ಕೆಲವು ಸೊರ್ಸ್ ಲಭ್ಯವಿವೆ ಎಂಬುದನ್ನು ಈ ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು.


ಇದನ್ನೂ ಓದಿ : Govt Job Updates: ಖಾಲಿ ಇರುವ ಆಪ್ತ ಸಮಾಲೋಚಕರ ಹುದ್ದೆಗೆ ಅರ್ಜಿ ಅಹ್ವಾನ, ವೇತನ, ವಯೋಮಿತಿ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ...!


NTA ವೆಬ್‌ಸೈಟ್ : 
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ಅಧಿಕೃತ ವೆಬ್‌ಸೈಟ್ - nta.ac.in - ವಿದ್ಯಾರ್ಥಿಗಳು ತಮ್ಮ ಕಲಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸಲು ಮತ್ತು ಅವರ ತಯಾರಿ ತಂತ್ರ ಮತ್ತು ವೇಗವನ್ನು ಸುಧಾರಿಸಲು ಕೆಲವು ಸಂಪನ್ಮೂಲಗಳನ್ನು ಹೊಂದಿದೆ.


ಈ ವೆಬ್‌ಸೈಟ್ (nta.ac.in/LecturesContent) ವಿದ್ಯಾರ್ಥಿಗಳು ಎಲ್ಲಾ JEE ಮತ್ತು NEET ಸಂಬಂಧಿತ ವಿಷಯಗಳಲ್ಲಿ - ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ  ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥ ಮಾಡಿಸಲು ಪ್ರತಿಷ್ಠಿತ IIT ಪ್ರಾಧ್ಯಾಪಕರು/ವಿಷಯ ತಜ್ಞರ ಉಪನ್ಯಾಸಗಳನ್ನು ಪಡೆದುಕೊಳ್ಳಬಹುದು.  ಒಮ್ಮೆ ವಿದ್ಯಾರ್ಥಿಗಳು ಈ ವಿಷಯದ ಸಬ್ ಹೆಡ್ ಮೇಲೆ ಕ್ಲಿಕ್ ಮಾಡಿದರೆ, ಅವರನ್ನು ಅನುಗುಣವಾದ YouTube ಲಿಂಕ್‌ಗೆ ಮರುನಿರ್ದೇಶಿಸಲಾಗುತ್ತದೆ.ಅಲ್ಲಿ ಅವರು ಸಾಮಾನ್ಯವಾಗಿ ಆ ವಿಷಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಒಂದು ಗಂಟೆಯ ಉಪನ್ಯಾಸ ಸರಣಿಯನ್ನು ಕಾಣಬಹುದು.


NTA ಯ ಇನ್ನೊಂದು ವೆಬ್‌ಸೈಟ್ (nta.ac.in/Quiz) ಅಭ್ಯರ್ಥಿಗಳಿಗೆ ಪರೀಕ್ಷಾ ಹಾಲ್ ಪರಿಸರವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು JEE ಮುಖ್ಯ, NEET ಅಥವಾ NTA ನಡೆಸುವ ಯಾವುದೇ ಇತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮತ್ತು ಅದಕ್ಕಾಗಿ ಪೇಪರ್‌ಗಳನ್ನು ಆಯ್ಕೆ ಮಾಡಬಹುದು. ಇದರ ನಂತರ NTA ಮಾದರಿ ಪೇಪರ್‌ಗಳನ್ನು ಒದಗಿಸುತ್ತದೆ.


ಇದನ್ನೂ ಓದಿ : CBSE 10 ಮತ್ತು 12ನೇ ಬೋರ್ಡ್ ಪರೀಕ್ಷೆಯ ಮಾದರಿಯಲ್ಲಿ ಬದಲಾವಣೆ!ಈ ಬಾರಿ ಕೇಳುವ ಪ್ರಶ್ನೆಗಳು ಈ ರೀತಿ ಇರುತ್ತವೆ !


SATHEE : 
ವಿದ್ಯಾರ್ಥಿಗಳು ಹಿಂದಿನ ವರ್ಷದ ಪೇಪರ್‌ಗಳು, ವೆಬ್‌ನಾರ್‌ಗಳು, 'solve with me ಸೆಷನ್‌ಗಳು, 'learn with me'  ಸೆಷನ್‌ಗಳು ಮತ್ತುಡೌಟ್ ಲೇಸನ್ ಅನ್ನು ಕೂಡಾ ಪಡೆದುಕೊಳ್ಳಬಹುದು. ಈ ಲೇಸನ್ ಮತ್ತು ದೌಂಟ್ ಕ್ಲಾಸ್ ಗಳನ್ನು  ವರ್ಗವಾರು ಮತ್ತು ವಿಷಯವಾರುಗಳಲ್ಲಿ ವಿತರಿಸಲಾಗಿದೆ. ಹಿಂದಿನ ವರ್ಷದ ಪೇಪರ್‌ಗಳನ್ನು ವರ್ಷವಾರು ವಿತರಿಸಲಾಗುತ್ತದೆ.ಇದು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಸುಲಭವಾಗುತ್ತದೆ.


ಅಲ್ಲದೆ, NCERT ಟ್ಯುಟೋರಿಯಲ್‌ಗಳು IIT/IIIT/NIT ಮತ್ತು AIIMS ನ ವಿದ್ಯಾರ್ಥಿಗಳಿಂದ ಲಭ್ಯವಿವೆ. IIT ತಜ್ಞರು ಮಾಡಿದ SWAYAM ವೀಡಿಯೊಗಳು SATHEE ವೆಬ್‌ಸೈಟ್‌ನಲ್ಲಿಯೂ ಲಭ್ಯವಿವೆ.  SATHEE ವೆಬ್‌ಸೈಟ್‌ಗಾಗಿ, ವಿದ್ಯಾರ್ಥಿಗಳು ತಮ್ಮ ಹೆಸರು, ನಗರ, ಶಾಲೆ ಮುಂತಾದ ವೈಯಕ್ತಿಕ ವಿವರಗಳನ್ನು ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು.


JEE ಅಡ್ವಾನ್ಸ್ಡ್ ವೆಬ್‌ಸೈಟ್:
ವಿದ್ಯಾರ್ಥಿಗಳು JEE ಅಡ್ವಾನ್ಸ್ಡ್ ಮತ್ತು ಆರ್ಕಿಟೆಕ್ಚರ್ ಆಪ್ಟಿಟ್ಯೂಡ್ ಟೆಸ್ಟ್ (AAT) ನ ಹಿಂದಿನ ವರ್ಷದ ಪೇಪರ್‌ಗಳಿಗಾಗಿ JEE ಅಡ್ವಾನ್ಸ್ಡ್ ವೆಬ್‌ಸೈಟ್ - jeeadv.ac.in/archive.html ನ ಆರ್ಕೈವ್ ವಿಭಾಗವನ್ನು ಸಹ ಪರಿಶೀಲಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.