ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ (Current Affairs) ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು (General Knowledge) ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1 - ಯಾವ ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ?
ಉತ್ತರ 1 - ಲೀ ಕೌಂಟಿ ಮಾಸ್ಕಿಟೊ ಕಂಟ್ರೋಲ್ ಡಿಸ್ಟ್ರಿಕ್ಟ್ ನ(LCMCD) ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸೊಳ್ಳೆಗಳು ನಮ್ಮ ರಕ್ತದಿಂದ ಪ್ರೋಟೀನ್‌ಗಳನ್ನು ತೆಗೆದುಕೊಳ್ಳಲು ಕಚ್ಚುತ್ತವೆ, ಕೆಲವು ರಕ್ತ ಪ್ರಕಾರಗಳು ಇತರರಿಗಿಂತ ಹೆಚ್ಚು ರುಚಿಕರವಾಗಿರುತ್ತವೆ ಎಂದು ಸಂಶೋಧನೆ ಹೇಳುತ್ತದೆ. ಒಂದು ಅಧ್ಯಯನವು ನಿಯಂತ್ರಿತ ವ್ಯವಸ್ಥೆಯಲ್ಲಿ, ಸೊಳ್ಳೆಗಳು O ರಕ್ತವನ್ನು ಹೊಂದಿರುವ ಜನರ ಮೇಲೆ ಎ ರಕ್ತವನ್ನು ಹೊಂದಿರುವವರಿಗಿಂತ ಎರಡು ಪಟ್ಟು ಹೆಚ್ಚಾಗಿ ದಾಳಿ ಇಡುತ್ತವೆ ಎಂದು ಕಂಡುಹಿಡಿದಿದೆ.


ಪ್ರಶ್ನೆ 2 - ವಿಷ್ಟದ ಅತ್ಯಂತ ವಿಶಿಷ್ಟವಾದ ಹಣ್ಣು ಯಾವುದು?
ಉತ್ತರ 2 - ವಿಶ್ವದ ಅತ್ಯಂತ ವಿಶಿಷ್ಟವಾದ ಹಣ್ಣು ಡ್ರ್ಯಾಗನ್ ಫ್ರೂಟ್ ಆಗಿದೆ.


ಪ್ರಶ್ನೆ 3 - ಯಾರನ್ನು ಪಕ್ಷಿಗಳ ಮೊಸಳೆ ಎಂದು ಕರೆಯಲಾಗುತ್ತದೆ?
ಉತ್ತರ 3 - ಪೆಲಿಕಾನ್ ಅನ್ನು ಪಕ್ಷಿಗಳ ಮೊಸಳೆ ಎಂದು ಕರೆಯಲಾಗುತ್ತದೆ.


ಪ್ರಶ್ನೆ 4 - ಯಾವ ದೇಶದ ಜನರು ಮಣ್ಣಿನ ರೊಟ್ಟಿ ಸೇವಿಸುತ್ತಾರೆ? (which country people eat soil roti)
ಉತ್ತರ 4 - ಕೆರಿಬಿಯನ್ ಸಮುದ್ರದಲ್ಲಿರುವ ಹೈಟಿಯ ಜನರು ಹಸಿವು ನೀಗಿಸಲು ಮಣ್ಣಿನಿಂದ ತಯಾರಿಸಿದ ರೊಟ್ಟಿ ಹಾಗೂ ಕುಕೀಗಳನ್ನು ಸೇವಿಸುತ್ತಾರೆ.


ಪ್ರಶ್ನೆ 5 - ವಿಶ್ವದ ಅತ್ಯಂತ ಅಪಾಯಕಾರಿ ಸೈನ್ಯ ಎಲ್ಲಿದೆ?
ಉತ್ತರ 5 - ಗ್ಲೋಬಲ್ ಫೈರ್‌ಪವರ್‌ನ ಪ್ರಕಾರ, ಅಮೆರಿಕವು ವಿಶ್ವದ ಪ್ರಬಲ ಮಿಲಿಟರಿ ಶಕ್ತಿಯನ್ನು ಹೊಂದಿದೆ. ಈ ಪಟ್ಟಿಯಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದ್ದು, ಚೀನಾ ಮೂರನೇ ಸ್ಥಾನದಲ್ಲಿದೆ. ಅದೇ ವೇಳೆ ಭಾರತ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ.


ಇದನ್ನೂ ಓದಿ-GK Quiz: ವಿಶ್ವದ ಯಾವ ದೇಶದಲ್ಲಿ ಅಧ್ಯಕ್ಷರ ಅಧಿಕಾರಾವಧಿಯು ಕೇವಲ ಒಂದು ವರ್ಷ ಮಾತ್ರ?


ಪ್ರಶ್ನೆ 6 - ಯಾವ ದೇಶದಲ್ಲಿ ಬೈಸಿಕಲ್ ಅನ್ನು ಕಂಡುಹಿಡಿಯಲಾಗಿದೆ?
ಉತ್ತರ 6 - ಬೈಸಿಕಲ್ ಅನ್ನು ಜರ್ಮನಿಯಲ್ಲಿ ಕಂಡುಹಿಡಿಯಲಾಯಿತು.


ಇದನ್ನೂ ಓದಿ-ಸGK Quiz: ಯಾವ ದೇಶದ ಪ್ರದೇಶವೊಂದ್ರಲ್ಲಿ ಓರ್ವ ಪುರುಷ ಕೂಡ ಇಲ್ಲ ಮತ್ತು ಯುವತಿಯರು ವಿವಾಹಕ್ಕೆ ಹಾತೊರೆಯುತ್ತಾರೆ?


ಪ್ರಶ್ನೆ 7 - ಮಾನವ ದೇಹದ ಯಾವ ಭಾಗವು ಬೆಂಕಿಯಲ್ಲಿ ಸುಡುವುದಿಲ್ಲ?
ಉತ್ತರ 7 - ಹಲ್ಲುಗಳು ಬೆಂಕಿಯಲ್ಲಿ ಸುಡುವುದಿಲ್ಲ. ಶರೀರ ಸುಟ್ಟ ಬಳಿಕ ಮೂಳೆಗಳನ್ನು ಸಂಗ್ರಹಿಸಿದಾಗ, ಅಲ್ಲಿ ಹಲ್ಲುಗಳು ಸಹ ಕಂಡುಬರುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ