Career: 10ನೇ ತರಗತಿ ಪಾಸ್ ಆದವರಿಗೆ ರೈಲ್ವೆ, ಪೋಸ್ಟ್ ಆಫೀಸ್, ಆರ್ಮಿಯಲ್ಲಿ ಉದ್ಯೋಗಾವಕಾಶ!
Govt Jobs: ನೀವು 10ನೇ ತರಗತಿ ಪಾಸ್ ಆಗಿದ್ದರೂ ಸರ್ಕಾರಿ ಉದ್ಯೋಗ ಪಡೆಯಬಹುದು. 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆ, ಅಂಚೆ ಇಲಾಖೆ ಹಾಗೂ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
Govt Jobs: ಸರ್ಕಾರಿ ಉದ್ಯೋಗ ಸಮಾಜದಲ್ಲಿ ಕೀರ್ತಿ ಜೊತೆಗೆ ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೀರಾ? ಆಕರ್ಷಕ ವೇತನ, ಉದ್ಯೋಗ ಭದ್ರತೆ ಸರಕಾರಿ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ. ಹಾಗಾಗಿಯೇ, ನಮ್ಮ ದೇಶದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಬಹಳಷ್ಟು ಮಂದಿ ಪ್ರಯತ್ನಿಸುತ್ತಾರೆ.
ಇಂದಿನ ಕಾಲದಲ್ಲಿ ಸರ್ಕಾರಿ ನೌಕರಿ (Govt Jobs) ಪಡೆಯಲು ಉತ್ತಮ ವಿದ್ಯಾರ್ಹತೆ ಹೊಂದಿರುವುದು ಅವಶ್ಯಕ. ಆದರೆ, ಭಾರತದಲ್ಲಿ ಹಲವು ಸರ್ಕಾರಿ ಕೆಲಸಗಳಿಗೆ 10ನೇ ತರಗತಿ ಪಾಸ್ ಆಗಿದ್ದರೆ ಅಷ್ಟೇ ಸಾಕು. 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆ, ಅಂಚೆ ಇಲಾಖೆ ಹಾಗೂ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಭಾರತೀಯ ಅಂಚೆ ಇಲಾಖೆ:
10ನೇ ತರಗತಿ ಉತ್ತೀರ್ಣರಾದವರಿಗೆ ಭಾರತೀಯ ಪೋಸ್ಟ್‌ನಲ್ಲಿ ನೇಮಕಾತಿ (Recruitment in Indian Post) ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಪೋಸ್ಟಲ್ ಅಸಿಸ್ಟೆಂಟ್, ಶಾರ್ಟನಿಂಗ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ- Good News: TET-2024ರ ಪರೀಕ್ಷೆಗೆ ಅರ್ಜಿ ಆಹ್ವಾನ
ಭಾರತೀಯ ಸೇನೆ:
10ನೇ ತರಗತಿ ಪಾಸ್ ಆಗಿರುವವರು ಭಾರತೀಯ ಸೇನೆ (Indian Army)ಯಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು.
ಭಾರತೀಯ ರೈಲ್ವೆ:
ಭಾರತೀಯ ರೈಲ್ವೇಯಲ್ಲಿ (Indian Railways) 10ನೇ ತರಗತಿ ಪಾಸ್ ಆದವರಿಗೆ ಟ್ರ್ಯಾಕ್‌ಮ್ಯಾನ್, ಗೇಟ್‌ಮ್ಯಾನ್, ಪಾಯಿಂಟ್ಸ್‌ಮನ್, ಹೆಲ್ಪರ್, ಪೋರ್ಟರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇದಲ್ಲದೆ, ಐಟಿಐ ಪಾಸ್ ಅಭ್ಯರ್ಥಿಗಳಿಗೆ ರೈಲ್ವೇಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೂ ಖಾಲಿ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗುವುದು.
ಅರಣ್ಯ ಇಲಾಖೆ (Forest Department):
ಅನೇಕ ರಾಜ್ಯಗಳಲ್ಲಿ, ಅರಣ್ಯ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಸರ್ಕಾರಿ ಉದ್ಯೋಗಕ್ಕಾಗಿ, ಕೆಲವು ರಾಜ್ಯಗಳಲ್ಲಿ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಕೇವಲ 10 ನೇ ತರಗತಿ ತೇರ್ಗಡೆ ಆಗುವುದು.
ಇದನ್ನೂ ಓದಿ- Indian Railways Jobs: ರೈಲ್ವೆ ರಕ್ಷಣಾ ದಳದಲ್ಲಿ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ
ಸಶಸ್ತ್ರ ಪಡೆಗಳು:
10ನೇ ತರಗತಿ ಪಾಸ್ ಆದವರಿಗೆ ಸಶಸ್ತ್ರ ಪಡೆಗಳಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವ ಅವಕಾಶವಿದೆ. ಇದರಲ್ಲಿ, ಸೇನೆ, ಭಾರತೀಯ ನೌಕಾಪಡೆ ಅಥವಾ ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಪೊಲೀಸ್ ಕಾನ್ಸ್‌ಟೇಬಲ್:
ಹಲವು ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (Police Constable) ಹುದ್ದೆಗಳಿಗೆ ನೇಮಕಾತಿಗಾಗಿ 10 ನೇ ತರಗತಿ ಪಾಸ್ ಆಗಿರುವುದು ಅವಶ್ಯಕ. ಪೊಲೀಸ್ ಇಲಾಖೆಯಲ್ಲಿ ಸರ್ಕಾರಿ ಕೆಲಸ ಮಾಡಲು ಬಯಸಿದರೆ, ನೀವು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.