ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ 4,055 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪಿಯು ಇಲಾಖೆ ಮತ್ತು ಕಾಲೇಜುಗಳಿಗೆ ಸರ್ಕಾರ ಸೂಚಿಸಿದೆ.


COMMERCIAL BREAK
SCROLL TO CONTINUE READING

ಬಡ್ತಿ, ನಿಧನ, ವಯೋನಿವೃತ್ತಿ, ಖಾಲಿ ಇರುವ ಹುದ್ದೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಲಿಯಿರುವ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರ ಹೆಚ್ಚಾಗುವ ಹಿನ್ನೆಲೆ ಒಟ್ಟಾರೆ 4,055 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬಹುದು ಎಂದು ಇಲಾಖೆಯು ಕಾಲೇಜುಗಳು, ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದೆ.


ಇದನ್ನೂ ಓದಿ: ಸದನ ಪ್ರಾರಂಭಕ್ಕಿಂತಲೂ ಮೊದಲೇ ವರಿಷ್ಠರಿಂದ ವಿಪಕ್ಷ ನಾಯಕನ ಘೋಷಣೆ: ಬಿಜೆಪಿ


ತಿಂಗಳಿಗೆ 12 ಸಾವಿರ ರೂ. ವೇತನದಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಳೆದ ವರ್ಷ ನೇಮಕದ ಸಂದರ್ಭದಲ್ಲಿ ನಿಯಮಗಳು ಪಾಲನೆಯಾಗಿಲ್ಲವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಬಾರಿ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


ಯಾವ ಜಿಲ್ಲೆಗೆ ಎಷ್ಟು..?


ಬೆಂಗಳೂರು ಉತ್ತರ 80, ಬೆಂಗಳೂರು ದಕ್ಷಿಣ 45, ಬೆಂಗಳೂರು ಗ್ರಾಮಾಂತರ 70, ರಾಮನಗರ 150, ಬಳ್ಳಾರಿ 160, ಚಿಕ್ಕೋಡಿ 150, ಬೆಳಗಾವಿ 140, ಬಾಗಲಕೋಟೆ 190, ವಿಜಯಪುರ 130, ಬೀದರ್ 50, ದಾವಣಗೆರೆ 150, ಚಿತ್ರದುರ್ಗ 70, ಚಿಕ್ಕಮಗಳೂರು 160 ಹುದ್ದೆಗಳು. ಗದಗ 95, ಹಾವೇರಿ 120, ಧಾರವಾಡ 60, ಕಲಬುರಗಿ 110, ಯಾದಗಿರಿ 100, ಹಾಸನ 180, ಚಿಕ್ಕಬಳ್ಳಾಪುರ 100, ಕೋಲಾರ 180, ಚಾಮರಾಜನಗರ 95, ಮೈಸೂರು 150, ಮಂಡ್ಯ 130, ಉತ್ತರ ಕನ್ನಡ 140, ಕೊಪ್ಪಳ 140, ರಾಯಚೂರು 120, ದಕ್ಷಿಣ ಕನ್ನಡ 240, ಉಡುಪಿ 200, ಶಿವಮೊಗ್ಗ 90, ತುಮಕೂರು 200, ಕೊಡಗು ಜಿಲ್ಲೆಗೆ 60 ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.


ಇದನ್ನೂ ಓದಿ: ಅಕ್ರಮ ಮರಳು ಗಣಿಗಾರಿಕೆ: ಅಥಣಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.