ಬೆಂಗಳೂರು : ರೈತ ಉತ್ಪಾದಕರ ಸಂಸ್ಥೆಗಳಿಗೆ ಏಕರೂಪ ಬ್ರ್ಯಾಂಡ್ ರೂಪಿಸಲು ಆಕರ್ಷಕವಾದ ಬ್ರ್ಯಾಂಡ್ ಹೆಸರು, ವಿಶಿಷ್ಟ ಟ್ಯಾಗ್‍ಲೈನ್ (ಅಡಿಬರಹ) ಮತ್ತು ಆಕರ್ಷಕವಾದ ಲೋಗೋ ನೀಡಲು ಸ್ಪರ್ಧೆಯನ್ನು ಆಯೋಜಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಸ್ಪರ್ಧೆಯಲ್ಲಿ ರೈತರು, ಗ್ರಾಹಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಆಸಕ್ತ ಇತರರು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಆಸಕ್ತರು https://challenge.coefpo.org/ ವೆಬ್‍ಸೈಟ್‍ನಲ್ಲಿ ವಿವರ ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಬಹುದು.


ಇದನ್ನೂ ಓದಿ: ಗೊಂಬೆಯಂತಿದ್ದ ನಟಿ ಪಾಲಿಗೆ ವಿಲನ್ ಆದ ವೈದ್ಯರು! ದಂತ ಚಿಕಿತ್ಸೆ ಪಡೆದ ಯುವನಟಿಗೆ ಇಂದೆಂಥ ಸ್ಥಿತಿ?


ಅತ್ಯತ್ತಮ ಬ್ರ್ಯಾಂಡ್, ವಿಶಿಷ್ಟ ಟ್ಯಾಗ್‍ಲೈನ್ (ಅಡಿಬರಹ) ಮತ್ತು ಆಕರ್ಷಕವಾದ ಲೋಗೋ ಹೊಂದಿ ರಾಜ್ಯದ ರೈತ ಉತ್ಪಾದಕರ ಸಂಸ್ಥೆಗಳು ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ನೀಡುವ ಮೂಲಕ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ದೊರೆತು ರೈತರ ಆದಾಯ ಹೆಚ್ಚಿಸಲು ಅನುಕೂಲವಾಗುತ್ತದೆ.


ಈ ಸ್ಪರ್ಧೆಯಲ್ಲಿ ಆಸಕ್ತರು ಭಾಗವಹಿಸಲು ಜುಲೈ 9, 2022 ಕೊನೆಯ ದಿನಾಂಕವಾಗಿ ಎಂದು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.