IBPS ನೇಮಕಾತಿ: 6128 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ, ಇಂದೇ ಅರ್ಜಿ ಸಲ್ಲಿಸಿ
IBPS Recruitment 2024: IBPS ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯು 100 ಅಂಕಗಳ 100 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಭಾಷೆ, ಸಂಖ್ಯಾ ಸಾಮರ್ಥ್ಯ ಮತ್ತು ರೀಸನಿಂಗ್ ಎಬಿಲಿಟಿ ವಿಭಾಗಗಳಿಂದ ಪ್ರಶ್ನೆಗಳು ಬರುತ್ತವೆ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ 2 ಗಂಟೆಗಳ ಅವಧಿಯಾಗಿರುತ್ತದೆ.
IBPS Recruitment 2024: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2025-2026ರ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (CRP)-XIV ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿಯ ಮೂಲಕ 6,128 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದೊಂದಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಇದನ್ನೂ ಓದಿ: Daily GK Quiz: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ವಯೋಮಿತಿ: ಜುಲೈ 1, 2024ರಂತೆ ಅಭ್ಯರ್ಥಿಗಳ ವಯಸ್ಸು 20ರಿಂದ 28 ವರ್ಷಗಳ ನಡುವೆ ಇರಬೇಕು. ಅಂದರೆ ಅರ್ಜಿದಾರರು ಜುಲೈ 2, 1996 ಮತ್ತು ಜುಲೈ 1, 2004ರ ನಡುವೆ ಜನಿಸಿದವರಾಗಿರಬೇಕು.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 850 ರೂ. ಪಾವತಿಸಬೇಕು. SC/ST, PWD, EMM, DESM ಅಭ್ಯರ್ಥಿಗಳು 175 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಅಂತಿಮ ಆಯ್ಕೆಯು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಇರುತ್ತದೆ.
ಅರ್ಜಿ ಸಲ್ಲಿಕೆ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 1ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21 ಆಗಿದೆ.
ಲಿಖಿತ ಪರೀಕ್ಷಾ ವಿಧಾನ: IBPS ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯು 100 ಅಂಕಗಳ 100 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಭಾಷೆ, ಸಂಖ್ಯಾ ಸಾಮರ್ಥ್ಯ ಮತ್ತು ರೀಸನಿಂಗ್ ಎಬಿಲಿಟಿ ವಿಭಾಗಗಳಿಂದ ಪ್ರಶ್ನೆಗಳು ಬರುತ್ತವೆ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ 2 ಗಂಟೆಗಳ ಅವಧಿಯಾಗಿರುತ್ತದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭಿಕ ದಿನಾಂಕ : ಜುಲೈ 01,2024
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ : ಜುಲೈ 21, 2024
ಪೂರ್ವ ಪರೀಕ್ಷೆಯ ತರಬೇತಿಯ ದಿನಾಂಕ : ಆಗಸ್ಟ್ 12ರಿಂದ 17ರವರೆಗೆ
ಆನ್‌ಲೈನ್ ಪೂರ್ವಭಾವಿ ಪರೀಕ್ಷೆ: ಆಗಸ್ಟ್ 24, 25, 31ರಂದು
ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಬಿಡುಗಡೆ ದಿನಾಂಕ : ಸೆಪ್ಟೆಂಬರ್ ತಿಂಗಳಲ್ಲಿ
ಆನ್‌ಲೈನ್ ಮುಖ್ಯ ಪರೀಕ್ಷೆಗಳು : ಅಕ್ಟೋಬರ್ 13, 2024
ಇದನ್ನೂ ಓದಿ: Good News: ಬೆಂಗಳೂರು-ಪಂಢರಾಪುರ ನಡುವೆ ವಿಶೇಷ ರೈಲು ಸಂಚಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.