ICAI CA Result2024: CA ಇಂಟರ್, ಫೈನಲ್ ಮೇ ಪರೀಕ್ಷೆಯ ಫಲಿತಾಂಶಗಳನ್ನು ಎಲ್ಲಿ ಮತ್ತು ಹೇಗೆ ಪರಿಶೀಲಿಸುವುದು?
ICAI CA Inter, Final Results 2024: ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು icai.nic.in ಅಥವಾ icai.org ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.ICAI CA ಇಂಟರ್ ಮತ್ತು ಅಂತಿಮ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಲು, ಅಭ್ಯರ್ಥಿಗಳು ರೋಲ್ ನಂಬರ್ ಜೊತೆಗೆ ನೋಂದಣಿ ಸಂಖ್ಯೆಯನ್ನು ಬಳಸಬೇಕು.
ICAI CA Result 2024 : ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ( ICAI ) ಚಾರ್ಟರ್ಡ್ ಅಕೌಂಟೆನ್ಸಿ (CA) ಇಂಟರ್ ಮಿಡಿಯೇಟ್ ಮತ್ತು ಅಂತಿಮ ಜೂನ್ ಪರೀಕ್ಷೆಗಳ ಫಲಿತಾಂಶಗಳನ್ನು ಸಮಯಕ್ಕೆ ಸರಿಯಾಗಿ ಪ್ರಕಟಿಸುತ್ತದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು icai.nic.in ಅಥವಾ icai.org ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.ICAI CA ಇಂಟರ್ ಮತ್ತು ಅಂತಿಮ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಲು,ಅಭ್ಯರ್ಥಿಗಳು ರೋಲ್ ನಂಬರ್ ಜೊತೆಗೆ ನೋಂದಣಿ ಸಂಖ್ಯೆಯನ್ನು ಬಳಸಬೇಕು.
ಸಾಮಾನ್ಯವಾಗಿ, ICAI ತನ್ನ ಪರೀಕ್ಷಾ ಫಲಿತಾಂಶಗಳನ್ನು ಒಂದು ತಿಂಗಳೊಳಗೆ ಪ್ರಕಟಿಸುತ್ತದೆ. ಈ ಬಾರಿ ಸಿಎ ಇಂಟರ್ ಗ್ರೂಪ್ 1 ಪರೀಕ್ಷೆಗಳು ಮೇ 3, 5 ಮತ್ತು 9 ರಂದು ನಡೆದಿವೆ. ಗ್ರೂಪ್ 2 ಪರೀಕ್ಷೆಗಳು ಮೇ 11, 15 ಮತ್ತು 17, 2024 ರಂದು ನಡೆದವು.
ಇದನ್ನೂ ಓದಿ : Job Alert: SSLC ಪಾಸಾಗಿದ್ರೆ ಸಾಕು ʼನಮ್ಮ ಮೆಟ್ರೋʼದಲ್ಲಿ ಸಿಗಲಿದೆ ಕೆಲಸ!
CA ಫೈನಲ್ ಗ್ರೂಪ್ 1 ಪರೀಕ್ಷೆಗಳನ್ನು ಮೇ 2, 4 ಮತ್ತು 8 ರಂದು ನಡೆಸಲಾಯಿತು. ಇನ್ನು ಗ್ರೂಪ್ 2 ಪರೀಕ್ಷೆಗಳನ್ನು ಮೇ 10, 14 ಮತ್ತು 16 ರಂದು ನಡೆಸಲಾಯಿತು. ಅಂತರರಾಷ್ಟ್ರೀಯ ತೆರಿಗೆ-ಮೌಲ್ಯಮಾಪನ ಪರೀಕ್ಷೆಯು ಮೇ 14 ಮತ್ತು 16, 2024 ರಂದು ನಡೆಯಿತು.
ಸಿಎ ಇಂಟರ್ ಮತ್ತು ಅಂತಿಮ ಎರಡೂ ಪರೀಕ್ಷೆಗಳ ಫಲಿತಾಂಶಗಳನ್ನು ಒಂದೇ ದಿನ ಪ್ರಕಟಿಸಲಾಗುವುದು.
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ಸಿಎ ಇಂಟರ್ ಮತ್ತು ಫೈನಲ್ ದಿನಾಂಕಗಳನ್ನು ಪರಿಷ್ಕರಿಸಲಾಗಿತ್ತು.ಪರೀಕ್ಷೆಗಳನ್ನು ಮತ್ತಷ್ಟು ಮುಂದೂಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು, ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತು.
ಇದನ್ನೂ ಓದಿ : ನೀಟ್, ಪಿಜಿ ಪರೀಕ್ಷೆ ಮುಂದೂಡಿಕೆ - ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ
ICAI CA ಇಂಟರ್, ಅಂತಿಮ ಮೇ ಫಲಿತಾಂಶ 2024ವನ್ನು ಹೀಗೆ ಪರಿಶೀಲಿಸಿ :
೧.icai.nic.in ಗೆ ಹೋಗಿ.
೨. ಅಗತ್ಯವಿರುವಂತೆ CA ಇಂಟರ್ ಅಥವಾ CA ಅಂತಿಮ ಮೇ ಪರೀಕ್ಷೆಯ ಫಲಿತಾಂಶ ಲಿಂಕ್ ಅನ್ನು ತೆರೆಯಿರಿ.
೩.ಲಾಗಿನ್ ಕ್ರೆಡೆನ್ಶಿಯಲ್ ಗಳನ್ನು ಹಾಕಿ.
೪.ನಂತರ, ಸಬ್ಮಿಟ್ ಕೊಡಿ.
೫. ಇಷ್ಟಾದ ನಂತರ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ.
೬. ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶವನ್ನು ಸೇವ್ ಮಾಡಿಟ್ಟು ಕೊಳ್ಳಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.