Indian Merchant Navy Recruitment 2024: ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 4,000 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಇದೇ ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Daily GK Quiz: ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಯಾರು?


ಹುದ್ದೆಯ ಮಾಹಿತಿ: 1,432 ಸೀಮ್ಯಾನ್, 922 ಮೆಸ್ ಬಾಯ್, 721 ಡೆಕ್ ರೇಟಿಂಗ್, 408 ಎಲೆಕ್ಟ್ರಿಷಿಯನ್, 236 ಎಂಜಿನ್​ ರೇಟಿಂಗ್, 203 ಕುಕ್ ಮತ್ತು 78 ವೆಲ್ಡರ್/ಹೆಲ್ಪರ್ ಹುದ್ದೆಗಳು ಖಾಲಿ ಇವೆ.  


ವಿದ್ಯಾರ್ಹತೆ: ಡೆಕ್ ರೇಟಿಂಗ್‌ಗೆ 12ನೇ ತರಗತಿ, ಎಂಜಿನ್​ ರೇಟಿಂಗ್‌ಗೆ 10ನೇ ತರಗತಿ, ಸೀಮ್ಯಾನ್‌ಗೆ 10ನೇ ತರಗತಿ, ಎಲೆಕ್ಟ್ರಿಷಿಯನ್‌ಗೆ 10ನೇ ತರಗತಿ, ಎಲೆಕ್ಟ್ರಿಷಿಯನ್​ ಐಟಿಐ, ವೆಲ್ಡರ್/ಹೆಲ್ಪರ್‌ಗೆ 10ನೇ ತರಗತಿ, ಐಟಿಐ, ಮೆಸ್ ಬಾಯ್‌ಗೆ 10ನೇ ತರಗತಿ ಮತ್ತು ಕುಕ್‌ಗೆ 10ನೇ ತರಗತಿ ಆಗಿರಬೇಕು.


ವಯೋಮಿತಿ: ಡೆಕ್ ರೇಟಿಂಗ್‌ಗೆ 17.5- 25 ವರ್ಷ, ಎಂಜಿನ್​ ರೇಟಿಂಗ್‌ಗೆ 17.5- 25 ವರ್ಷ, ಸೀಮ್ಯಾನ್‌ಗೆ 17.5- 25 ವರ್ಷ, ಎಲೆಕ್ಟ್ರಿಷಿಯನ್‌ಗೆ 17.5- 27 ವರ್ಷ, ವೆಲ್ಡರ್/ಹೆಲ್ಪರ್‌ಗೆ 17.5- 27 ವರ್ಷ, ಮೆಸ್ ಬಾಯ್‌ಗೆ 17.5- 27 ವರ್ಷ ಮತ್ತು ಕುಕ್‌ಗೆ 17.5 27 ವರ್ಷ ಆಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆನ್​​ಲೈನ್​ ಮೂಲಕ 100 ರೂ. ಶುಲ್ಕವನ್ನು ಪಾವತಿಸಬೇಕು.


ವೇತನ: ಡೆಕ್ ರೇಟಿಂಗ್‌ಗೆ ಮಾಸಿಕ ₹50,000- 85,000, ಎಂಜಿನ್​ ರೇಟಿಂಗ್‌ಗೆ ಮಾಸಿಕ ₹40,000- 60,000, ಸೀಮ್ಯಾನ್‌ಗೆ ಮಾಸಿಕ ₹38,000- 55,000, ಎಲೆಕ್ಟ್ರಿಷಿಯನ್‌ಗೆ ಮಾಸಿಕ ₹60,000- 90,000, ವೆಲ್ಡರ್/ಹೆಲ್ಪರ್‌ಗೆ ಮಾಸಿಕ ₹50,000- 85,000, ಮೆಸ್ ಬಾಯ್‌ಗೆ ಮಾಸಿಕ ₹40,000- 60,000 ಮತ್ತು ಕುಕ್‌ಗೆ ಮಾಸಿಕ ₹40,000- 60,000 ರೂ. ವೇತನ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇರವಾಗಿ ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.


ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/03/2024, ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, ಲಿಖಿತ ಪರೀಕ್ಷೆ ನಡೆಯುವ ದಿನ: ಮೇ 2024 ಮತ್ತು ಲಿಖಿತ ಪರೀಕ್ಷೆ ನಡೆದ 3 ದಿನಗಳ ಬಳಿಕ ರಿಸಲ್ಟ್​ ಪ್ರಕಟವಾಗಲಿದೆ.


ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಚಿಹ್ನೆಗಳು ಕಂಡುಬಂದರೆ ಫೋನ್ ಹ್ಯಾಕ್ ಆಗಿದೆ ಅಂತ ಅರ್ಥ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.