Indian Navy Recruitment 2022 : ಮುಂಬೈನ ನೇವಲ್ ಡಾಕ್‌ಯಾರ್ಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಜೂನ್ 18, 2022 ರಂದು ಜಾಬ್ ನ್ಯೂಸ್ ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು 8ನೇ ಜುಲೈ 2022 ರೊಳಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು.


COMMERCIAL BREAK
SCROLL TO CONTINUE READING

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 338 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದಕ್ಕಾಗಿ, ಐಟಿಐ ಅರ್ಹತೆ / ಫ್ರೆಶರ್ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಎಲೆಕ್ಟ್ರಿಷಿಯನ್, ಎಲೆಕ್ಟ್ರೋಪ್ಲೇಟರ್, ಮೆರೈನ್ ಎಂಜಿನ್ ಫಿಟ್ಟರ್, ಫೌಂಡ್ರಿ ಮ್ಯಾನ್, ಪ್ಯಾಟರ್ನ್ ಮೇಕರ್, ಮೆಕ್ಯಾನಿಕ್ ಡೀಸೆಲ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ : BSF Recruitment 2022 : BSF ನಲ್ಲಿ 110 ಎಸ್‌ಐ ಹುದ್ದೆಗಳಿಗೆ ಅರ್ಜಿ ಅಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ!


ಪ್ರಮುಖ ದಿನಾಂಕ


ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ - 21 ಜೂನ್ 2022 ಬೆಳಿಗ್ಗೆ 10 ಗಂಟೆಗೆ
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ - 8 ಜುಲೈ 2022 


ಶೈಕ್ಷಣಿಕ ಅರ್ಹತೆ


ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ 10 ನೇ ಮತ್ತು ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚುವರಿಯಾಗಿ, ಅಭ್ಯರ್ಥಿಯು ಎನ್‌ಸಿವಿಟಿಯಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಸಂಬಂಧಿತ ಐಟಿಐ / ಟ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ವಯಸ್ಸಿನ ಮಿತಿ ಮತ್ತು ಆಯ್ಕೆ ಪ್ರಕ್ರಿಯೆ


01 ಆಗಸ್ಟ್ 2001 ರಿಂದ 31 ಅಕ್ಟೋಬರ್ 2008 ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಎಷ್ಟು ಸಂಬಳ


ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ತಿಂಗಳಿಗೆ ರೂ.7000/- ಮತ್ತು ಹೊಸಬರು ತಿಂಗಳಿಗೆ 6000 ರೂ./- ತರಬೇತಿಯ ಮೊದಲ ವರ್ಷದಲ್ಲಿ ಪಡೆಯುತ್ತಾರೆ. ಎರಡನೇ ವರ್ಷದ ತರಬೇತಿಯಲ್ಲಿ ಶೇ.10ರಷ್ಟು ವೇತನವನ್ನು ಹೆಚ್ಚಿಸಲಾಗುವುದು.


ಇದನ್ನೂ ಓದಿ : SBI Recruitment 2022 : SBI ನಲ್ಲಿ 211 ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರಗಳಿಗೆ ಇಲ್ಲಿ ನೋಡಿ!


ಅರ್ಜಿ ಸಲ್ಲಿಸುವುದು ಹೇಗೆ?


ಅಭ್ಯರ್ಥಿಗಳು https://dasapprenticembi.recttindia.in ಗೆ ಲಾಗಿನ್ ಆಗಬೇಕು ಮತ್ತು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಉದ್ಯೋಗ ಸುದ್ದಿಯಲ್ಲಿ ಅಧಿಸೂಚನೆಯನ್ನು ಪ್ರಕಟಿಸಿದ ಮೂರನೇ ದಿನದಂದು ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಬೆಳಿಗ್ಗೆ 10 ರಿಂದ ಓಪನ್ ಇರುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.