Indian Railway Recruitment 2024: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 18,799 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮುಂದಿನ 6-8 ತಿಂಗಳಲ್ಲಿ 18,799 ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜೂನ್ 18ರಂದು ರೈಲ್ವೆ ಇಲಾಖೆ 5,696 ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ ನೀಡಲಾಗಿತ್ತು. ಆದರೆ ಇದೀಗ 18,799 ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ರೈಲ್ವೆ ಮಂಡಳಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕನಿಷ್ಠ 6 ತಿಂಗಳು ತೆಗೆದುಕೊಳ್ಳುತ್ತದೆ. ಈ ಬಗ್ಗೆ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕಾಗಿದ್ದು, ಅಭ್ಯರ್ಥಿಗಳಿಗೆ ಲಿಖಿತ, ಯೋಗ್ಯತೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಸಹಾಯಕ ಲೋಕೋ ಪೈಲಟ್‌ಗಳ ನೇಮಕಾತಿಯಿಂದ ಇಲಾಖೆಗೆ ನುರಿತ ಮಾನವಶಕ್ತಿಯ ಅಗತ್ಯ ಪೂರೈಸಲು ಸಹಾಯವಾಗಲಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವು..!


ರೈಲು ಕಾರ್ಯಾಚರಣೆಯ ಸುರಕ್ಷತೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಸುರಕ್ಷತಾ ವಿಭಾಗದಡಿ ಮಂಜೂರಾದ ಸುಮಾರು 10 ಲಕ್ಷ ಹುದ್ದೆಗಳಲ್ಲಿ ಈ ವರ್ಷದ ಮಾರ್ಚ್‌ವರೆಗೆ 1.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಸುರಕ್ಷತಾ ವರ್ಗದ ಹುದ್ದೆಗಳಲ್ಲಿ ರೈಲು ಚಾಲಕರು, ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ನಿಯಂತ್ರಕರು, ಲೊಕೊ ಬೋಧಕರು, ರೈಲು ನಿಯಂತ್ರಕರು, ಟ್ರ್ಯಾಕ್ ನಿರ್ವಾಹಕರು, ಸ್ಟೇಷನ್ ಮಾಸ್ಟರ್‌ಗಳು, ಪಾಯಿಂಟ್‌ಮೆನ್, ಎಲೆಕ್ಟ್ರಿಕ್ ಸಿಗ್ನಲ್ ನಿರ್ವಾಹಕರು ಮತ್ತು ಸಿಗ್ನಲಿಂಗ್ ಮೇಲ್ವಿಚಾರಕರು ಇತ್ಯಾದಿ ಹುದ್ದೆಗಳು ಖಾಲಿಯಿವೆ.


ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿದ್ದ ಅರ್ಜಿಯೊಂದಕ್ಕೆ ರೈಲ್ವೆ ಸಚಿವಾಲಯದ ಪ್ರತಿಕ್ರಿಯೆ ನೀಡಿದ್ದು, 2024ರ ಮಾರ್ಚ್‌ 1ರಂತೆ ಈ ಕಚೇರಿಯಲ್ಲಿ ಲಭ್ಯವಿರುವಂತೆ ಭಾರತೀಯ ರೈಲ್ವೆಯ ಸುರಕ್ಷತಾ ವರ್ಗದಲ್ಲಿ ಮಂಜೂರಾದ ಆನ್‌ರೋಲ್ (ಕೆಲಸ ಮಾಡುವ) ಮತ್ತು ಖಾಲಿಯಿರುವ ಹುದ್ದೆಗಳ ಒಟ್ಟು ಸಂಖ್ಯೆ(ತಾತ್ಕಾಲಿಕ) ಕ್ರಮವಾಗಿ 10,00,941, 8,48,207 ಮತ್ತು 1,52,734. ಖಾಲಿಯಿರುವ ಲೋಕೋ ಪೈಲಟ್‌ಗಳ (ಮೇಲ್/ಎಕ್ಸ್‌ಪ್ರೆಸ್/ಪ್ಯಾಸೆಂಜರ್/ಗೂಡ್ಸ್/ಷಂಟಿಂಗ್) ಹುದ್ದೆಗಳ ಕುರಿತು ರೈಲ್ವೆ ಸಚಿವಾಲಯವು ಒಟ್ಟು ಮಂಜೂರಾದ 70,093 ಹುದ್ದೆಗಳಲ್ಲಿ 14,429 ಖಾಲಿಯಿವೆ ಎಂದು ಹೇಳಿದೆ.


ಇದನ್ನೂ ಓದಿ: ಶೇ 65 ರಷ್ಟು ಮೀಸಲಾತಿ ಹೆಚ್ಚಳ: ನಿತೀಶ್ ಕುಮಾರ್ ಸರ್ಕಾರದ ಕ್ರಮ ರದ್ದುಗೊಳಿಸಿದ ಹೈಕೋರ್ಟ್ 


2014-24ರ ಅವಧಿಯಲ್ಲಿ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳಲ್ಲಿ 1,78,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಲಾಗಿದೆ. 2004-14ರ ಅವಧಿಗೆ ಹೋಲಿಸಿದರೆ 70,273 ಕೋಟಿ ರೂ.ಗಳ ಹೂಡಿಕೆಯ 2.5 ಪಟ್ಟು ಹೆಚ್ಚಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.