ಕೊಪ್ಪಳ : ಕೊಪ್ಪಳ ನಗರಸಭೆ ಕಾರ್ಯಾಲಯದ ಡೇ ನಲ್ಮ್ ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳಿಗೆ ಅರ್ಹ ಸ್ವ-ಸಹಾಯ ಗುಂಪು ಅಥವಾ ಒಕ್ಕೂಟಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ ಗೌರವಧನದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಸ್ವ-ಸಹಾಯ ಸಂಘಗಳ ಅಥವಾ ಒಕ್ಕೂಟದ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ 


ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಯ ಸಂಖ್ಯೆ 02 ಆಗಿದ್ದು, ಗೌರವಧನ ಮಾಸಿಕ ರೂ. 8000, ಟಿ.ಎ. ಗರಿಷ್ಟ ರೂ 2000 ಗಳನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, 18 ರಿಂದ 45 ವರ್ಷದೊಳಗಿರಬೇಕು. ಕನಿಷ್ಠ ಪಿ.ಯು.ಸಿ. ಅದಕ್ಕಿಂತ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರಬೇಕು). ಪಟ್ಟಣದ ವ್ಯಾಪ್ತಿಯ ಸ್ವ ಸಹಾಯ ಸಂಘದಲ್ಲಿ ಕನಿಷ್ಟ ಮೂರು ವರ್ಷದಿಂದ ಸದಸ್ಯೆಯಾಗಿರಬೇಕು ಅಥವಾ ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯೆಯಾಗಿರಬೇಕು. ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು. ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಕಟ್ ಬಾಕಿದಾರರಾಗಿರಬಾರದು. ಸರ್ಕಾರಿ, ಅರೆಸರಕಾರಿ ಅಥವಾ ಎನ್.ಜಿ.ಓ.ಗಳಲ್ಲಿ ಉದ್ಯೋಗಸ್ಥರಾಗಿರಬಾರದು. ಕಾರ್ಯನಿಮಿತ್ಯ ಅಗತ್ಯವಿದ್ದಲ್ಲಿ ಹೊರಸಂಚಾರಕ್ಕೆ ಸಿದ್ದರಿರಬೇಕು.


ಇದನ್ನೂ ಓದಿ: ಅಭಿಷೇಕ್ ಅಂಬರೀಷ್​ ಅವಿವಾ ಅದ್ದೂರಿ ವಿವಾಹ: ಸಿನಿ ತಾರೆಯರ ಸಮಾಗಮ


ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಮಿತಿಯ ನಿರ್ಣಯವೇ ಅಂತಿಮವಾಗಿದ್ದು, ಆಸಕ್ತ ಅಭ್ಯರ್ಥಿಗಳು ನಗರಸಭೆ ಕಾರ್ಯಾಲಯದ ಡೇ-ನಲ್ಮ್ ಯೋಜನೆಯ ವಿಭಾಗದಲ್ಲಿ ಸಂಪರ್ಕಿಸಿ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ದೃಢೀಕೃತ ದಾಖಲಾತಿಗಳೊಂದಿಗೆ ಜೂನ್ 15ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.