Bengaluru Metro Jobs: SSLC ಪಾಸ್‌ ಆಗಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ನೀವು 10ನೇ ತರಗತಿ ಪಾಸ್ ಆಗಿದ್ರೆ ಬೆಂಗಳೂರಿನ ʼನಮ್ಮ ಮೆಟ್ರೋʼದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಹೌದು, SSLC ಪಾಸಾದವರಿಗೆ ʼನಮ್ಮ ಮೆಟ್ರೋʼದಲ್ಲಿ ಕೆಲಸ ಖಾಲಿ ಇದೆ.   


COMMERCIAL BREAK
SCROLL TO CONTINUE READING

ಬೆಂಗಳೂರಿನ ʼನಮ್ಮ ಮೆಟ್ರೋʼದಲ್ಲಿ ಸ್ಟೇಶನ್ ಕಂಟ್ರೋಲರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ & ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಒಟ್ಟು 69 ಹುದ್ದೆಗಳು ಖಾಲಿ ಇದ್ದು, ʼನಮ್ಮ ಮೆಟ್ರೋʼದಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. 10ನೇ ತರಗತಿ ಪಾಸ್ ಆಗಿರುವವರು ಸ್ಟೇಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Daily GK Quiz: ಭೂಮಿಯ ಅತಿ ಎತ್ತರದ ಪ್ರದೇಶ ಯಾವುದು?


ಶೈಕ್ಷಣಿಕ ಅರ್ಹತೆ: ಬೆಂಗಳೂರಿನ ʼನಮ್ಮ ಮೆಟ್ರೋʼ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಸ್ಟೇಶನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಹೊಂದಿರುವ ಯಾವುದೇ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು ಅಥವಾ ಡಿಪ್ಲೊಮಾ ಪಾಸ್ ಆಗಿರಬೇಕು. ಈ ವಿದ್ಯಾರ್ಹತೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 


ವಯೋಮಿತಿ: ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಯೋಮಿತಿ ಬಗ್ಗೆ ಹೇಳುವುದಾದರೆ, 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲವು ವರ್ಗದವರಿಗೆ ಮೀಸಲಾತಿಯ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಕೂಡ ಇರುತ್ತದೆ.


ವೇತನ: ಬೆಂಗಳೂರಿನ ʼನಮ್ಮ ಮೆಟ್ರೋʼದಲ್ಲಿ ಖಾಲಿ ಇರುವ ಸ್ಟೇಶನ್‌ ಕಂಟ್ರೋಲರ್‌ ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಮಾಸಿಕ 36 ಸಾವಿರ ರೂ.ನಿಂದ 86 ಸಾವಿರ ರೂ.ವರೆಗೂ ವೇತನ ನಿಗದಿಪಡಿಸಲಾಗಿದೆ. 


ಇದನ್ನೂ ಓದಿ:  IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌


ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.


ಅರ್ಜಿ ಸಲ್ಲಿಸುವುದು ಹೇಗೆ?: ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿರುತ್ತದೆ. ಈ ದಿನಾಂಕದೊಳಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ʼನಮ್ಮ ಮೆಟ್ರೋʼದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.