ದಾವಣಗೆರೆ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ, ಪಿಎಂ-ಅಭಿಯಾನ ಕಾರ್ಯಕ್ರಮದಡಿ 4 ಆಯುಷ್ಮತಿ ಕ್ಲಿನಿಕ್‍ಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಚ್.ಕೆ.ಆರ್ ನಗರ, ಎಸ್.ಎಂ.ಕೆ ನಗರ, ಭಾಷ ನಗರ ಹಾಗೂ ದೊಡ್ಡಪೇಟೆ ಇಲ್ಲಿ ಮಂಜೂರಾಗಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಸಮಾಲೋಚನೆ ಅಧಾರದಲ್ಲಿ 2025 ರ ಮಾರ್ಚ್ 31 ರವರೆಗೆ ಹಾಗೂ 2025-26 ನೇ ಸಾಲಿನ ಪಿ.ಐ.ಪಿ ಅನುಮೋದನೆ ನಿರೀಕ್ಷಿಸಿ ತಾತ್ಕಾಲಿಕ ನೇಮಕಾತಿ ಮಾಡಲು ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಪದವಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಹುದ್ದೆಯ ವಿವರ: ಸ್ತ್ರೀ ರೋಗ ತಜ್ಞರು ಹುದ್ದೆ-4, ಮೂಳೆ ಮತ್ತು ಕೀಲು ತಜ್ಞರು ಹುದ್ದೆ-4, ಶಸ್ತ್ರ ಚಿಕಿತ್ಸಾ ತಜ್ಞರು ಹುದ್ದೆ-4, ಮಕ್ಕಳ ತಜ್ಞರು ಹುದ್ದೆ-4, ಚರ್ಮ ರೋಗ ತಜ್ಞರು ಹುದ್ದೆ-4, ಫಿಜಿಷಿಯನ್ ಹುದ್ದೆ-4 ಮನರೋಗ ತಜ್ಞರು ಹುದ್ದೆ-4, ಕಿವಿ, ಮೂಗು ಮತ್ತು ಗಂಟಲು ತಜ್ಞರು ಹುದ್ದೆ-4


ತಜ್ಞ ವೈದ್ಯರು ಗರಿಷ್ಠ 70 ವರ್ಷ ವಯೋಮಾನದವರಾಗಿರಬೇಕು. ಅರ್ಜಿಗಳನ್ನು ಜುಲೈ 30 ರಂದು ಬೆಳಗ್ಗೆ 10 ರಿಂದ 2 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಚೇರಿ, ಶ್ರೀರಾಮನಗರ ರಸ್ತೆ, ದಾವಣಗೆರೆ ಎಸ್.ಎಸ್.ಆಸ್ಪತ್ರೆ ಹಿಂಬಾಗ, ಎನ್.ಸಿ.ಸಿ.ಕ್ಯಾಂಪ್ ಪಕ್ಕ, ದಾವಣಗೆರೆ ಇಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಇದೇ ದಿನ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಸಂಜೆ 5-00 ಗಂಟೆಗೆಯೊಳಗೆ ಕಚೇರಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9449843195 ಗೆ ಸಂಪರ್ಕಿಸಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.