Joint CSIR UGC NET Result ಪ್ರಕಟ : ಈ ಡೈರೆಕ್ಟ್ ಲಿಂಕ್ ಮೂಲಕ ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ
CSIR-UGC NET ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಕೆಲ್ಹ್ಗಿನ ಲಿಂಕ್ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು.
ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 2024 ರ joint CSIR-UGC NET ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದೆ.ಅಭ್ಯರ್ಥಿಗಳು ಈಗ ತಮ್ಮ CSIR NET ಫಲಿತಾಂಶಗಳನ್ನು 2024 ಅನ್ನು ಅಧಿಕೃತ ವೆಬ್‌ಸೈಟ್- csirnet.nta.ac.in ನಲ್ಲಿ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. CSIR UGC NET ಜೂನ್ 2024 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ತಮ್ಮ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
CSIR NET ಫಲಿತಾಂಶ 2024: ಸ್ಕೋರ್ ಕಾರ್ಡ್‌ಗಳನ್ನು ಹೀಗೆ ಡೌನ್‌ಲೋಡ್ ಮಾಡಿ :
ಅಭ್ಯರ್ಥಿಗಳು ತಮ್ಮ CSIR NET ಫಲಿತಾಂಶ 2024 ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಂತ 1: ಅಧಿಕೃತ ವೆಬ್‌ಸೈಟ್ csirnet.nta.ac.inಗೆ ಭೇಟಿ ನೀಡಿ-
ಹಂತ 2: ಮುಖಪುಟದಲ್ಲಿರುವ CSIR UGC NET 2024 June Result ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಹೊಸದಾಗಿ ತೆರೆಯಲಾದ ಟ್ಯಾಬ್‌ನಲ್ಲಿ, ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಮತ್ತು ಕೋಡ್ ನೀಡಿ
ಹಂತ 4: Submit ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ CSIR NET ಫಲಿತಾಂಶ 2024 ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ
ಹಂತ 5: ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿಕೊಳ್ಳಿ. ಭವಿಷ್ಯದ ಉಲ್ಲೇಖಕ್ಕಾಗಿ ಸೇವ್ ಮಾಡಿ ಇಟ್ಟುಕೊಳ್ಳಿ.
ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿರ ಹುದ್ದೆಗೆ ಅರ್ಜಿ ಆಹ್ವಾನ
NTA CSIR UGC NET 2024ರ ಪ್ರೋವಿಶನಲ್ ಆನ್ಸರ್ ಕೀಗಳನ್ನು ಬಿಡುಗಡೆ ಮಾಡಿದೆ. ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿಗಳು ನೀಡಿದ ರೆಸ್ಪಾನ್ಫ್ ಅನ್ನು NTA ವೆಬ್‌ಸೈಟ್ csirnet.nta.ac.in ನಲ್ಲಿ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 11 ರವರೆಗೆ ಹೋಸ್ಟ್ ಮಾಡಲಾಗಿದ್ದು, ಅಭ್ಯರ್ಥಿಗಳಿಂದ ಸವಾಲುಗಳನ್ನು ಆಹ್ವಾನಿಸಲಾಗಿದೆ.
ಜಂಟಿ CSIR-UGC-NET ಜುಲೈ, 2024 ಅನ್ನು CBT ಮೋಡ್‌ನಲ್ಲಿ ಜುಲೈ 25, 26 ಮತ್ತು 27, 2024 ರಂದು ಐದು ವಿಷಯಗಳಿಗೆ ದೇಶದಾದ್ಯಂತ 187 ನಗರಗಳಲ್ಲಿ 348 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.
ಇದನ್ನೂ ಓದಿ : ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಸೆ.18 ರಿಂದ ಚಾಲನಾ ವೃತ್ತಿ ಪರೀಕ್ಷೆ
ಜಂಟಿ CSIR-UGC NET 2024 ಪರೀಕ್ಷೆಗೆ ಒಟ್ಟು 2,25,335 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,63,529 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. CSIR NET ಫಲಿತಾಂಶ 2024ರ ಹಾರ್ಡ್ ಕಾಪಿಯನ್ನು ಪೋಸ್ಟ್ ಮೂಲಕ ಅಥವಾ ಇ-ಮೇಲ್ ಮೂಲಕ NTA ರವಾನಿಸುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.