Karnataka Board Exam: 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಸೂಚನೆ ನೀಡಿರುವ ಶಿಕ್ಷಣ ಇಲಾಖೆ ರಾಜ್ಯ ಪಠ್ಯಕ್ರಮದ 5, 8 ಮತ್ತು 9ನೇ ತರಗತಿಗಳ ಮೌಲ್ಯಾಂಕನ ಮೌಲ್ಯಮಾಪನವನ್ನು ಏಪ್ರಿಲ್ 2 ರ ಒಳಗೆ ಪೂರ್ಣಗೊಳಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಆದೇಶಿಸಿದೆ. 


COMMERCIAL BREAK
SCROLL TO CONTINUE READING

2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ. 


ಇದನ್ನೂ ಓದಿ- GK Quiz: 'ರಿವರ್ಸ್ ಫ್ಲಿಕ್ ' ಶಬ್ದವನ್ನು ಯಾವ ಆಟದಲ್ಲಿ ಬಳಸಲಾಗುತ್ತದೆ?


ಇದರಲ್ಲಿ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ (Summative Assessment-(SA-2) ಕಾರ್ಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ, ದಿನಾಂಕ:11.03.2024 ಮತ್ತು 12.03.2024 ರಂದು ಹಾಗೂ ಉಳಿದ ವಿಷಯಗಳ ಮೌಲ್ಯಾಂಕನವನ್ನು ಉಲ್ಲೇಖ(2) ರನ್ವಯ, ದಿನಾಂಕ:25.03.2024 ರಿಂದ 28.03.2024 ರವರೆಗೆ ನಡೆಸಲಾಗುತ್ತಿದೆ.


ಇದನ್ನೂ ಓದಿ- GK Quiz: ಯಾವ ದೇಶದ ಸಂಸತ್ತಿಗೆ 'ಮಜಲೀಸ್' ಎಂದು ಕರೆಯಲಾಗುತ್ತದೆ?


5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನಕ್ಕೆ ನೀಡಲಾದ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದಂತೆ ವಿಷಯವಾರು ಕೀ ಉತ್ತರಗಳ ಪ್ರತಿಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಲಭ್ಯಮಾಡಲಾಗುತ್ತಿದ್ದು, ಈಗಾಗಲೇ ಉಲ್ಲೇಖ(1) ರ ಸರ್ಕಾರಿ ಆದೇಶದಲ್ಲಿ ತಿಳಿಸಿರುವಂತೆ ಮೌಲ್ಯಮಾಪನ ಕಾರ್ಯವನ್ನು ಬ್ಲಾಕ್ ಹಂತದಲ್ಲಿ ಅಂತರ್ ಕ್ಲಸ್ಟರ್‌ವಾರು ನಿರ್ವಹಿಸಬೇಕಿರುತ್ತದೆ. ದಿನಾಂಕ:02.04.2024 ರ ಒಳಗಾಗಿ ಪೂರ್ಣಗೊಳಿಸುವುದು ಹಾಗೂ ಎಲ್ಲಾ ತರಗತಿಗಳ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳನ್ನು ಶಾಲೆಗಳಿಗೆ ಮರು ರವಾನೆ ಮಾಡುವುದು ಎಂದು ಇಲಾಖೆ ಹೊರಡಿಸಲಾಗಿರುವ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.