KCET Admit Card: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ 2024) ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. KCET ಅರ್ಜಿ ನಮೂನೆಗಳನ್ನು 2024 ರ ಗಡುವಿನ ಮೊದಲು ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cetonline.karnataka.gov.in/kea/ ನಿಂದ ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ. 


COMMERCIAL BREAK
SCROLL TO CONTINUE READING

2024ರ ಏಪ್ರಿಲ್ 18 ಮತ್ತು 19ರಂದು ನಡೆಯಲಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ - ಕೆಸಿಇಟಿ (Karnataka Common Entrance Test, KCET) 2024 ಪರೀಕ್ಷೆಗಳಿಗೆ ಕೆಸಿಇಟಿ ಹಾಲ್ ಟಿಕೆಟ್ ಬಿಡುಗಡೆ ಮಾಡಿದೆ. ಏಪ್ರಿಲ್ 20 ರಂದು  ಕನ್ನಡ ಭಾಷಾ ಪರೀಕ್ಷೆಯು  ನಡೆಯಲಿದೆ. ಹೊರನಾಡು ಮತ್ತು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು.


ಇದನ್ನೂ ಓದಿ- Job Alert: PDO ಸೇರಿ 1,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ


ಕೆಸಿಇಟಿ ಪರೀಕ್ಷೆಯ ಮೂಲಕ, ಎಂಜಿನಿಯರಿಂಗ್, ಎಂಬಿಬಿಎಸ್, ದಂತ ವೈದ್ಯಕೀಯ, ಆಯುಷ್, ನರ್ಸಿಂಗ್, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಸೀಟುಗಳನ್ನು ನೀಡಲಾಗುತ್ತದೆ.


ಎಂಜಿನಿಯರಿಂಗ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ (PCM) ವಿಷಯಗಳಲ್ಲಿ ಪರೀಕ್ಷೆ ಬರೆಯಬೇಕಾಗಿದೆ. ಆದರೆ, ಕೃಷಿ ವಿಜ್ಞಾನ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು  ಪಿಸಿಎಂ ಜೊತೆಗೆ ಜೀವಶಾಸ್ತ್ರ ಪರೀಕ್ಷೆಯನ್ನು ಬರೆಯಬೇಕಾಗಿದೆ. ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ಅಭ್ಯರ್ಥಿಗಳು ಪಿಸಿಬಿ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಫಾರ್ಮಸಿ ಕೋರ್ಸ್‌ಗಳಿಗೆ, ಪ್ರಯತ್ನಿಸುತ್ತಿರುವವರು ಪಿಸಿಎಂ ಅಥವಾ ಪಿಸಿಬಿ ಪರೀಕ್ಷೆಗಳನ್ನು ಬರೆಯುವುದು ಕಡ್ಡಾಯ್


ಇದನ್ನೂ ಓದಿ- GK Quiz: ಯಾವ ದೇಶವು ಪ್ರಪಂಚದ ಮೊದಲ ಕಂಪ್ಯೂಟರ್ ವೈರಸ್ ಅನ್ನು ಸೃಷ್ಟಿಸಿತು?


KCET ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ಈ ಹಂತ-ಹಂತದ ಪ್ರಕ್ರಿಯೆಯನ್ನು ಅನುಸರಿಸಿ: 
* ಮೊದಲಿಗೆ ಕೆಇಎ ಅಧಿಕೃತ ವೆಬ್‌ಸೈಟ್, kea.kar.nic.in ಅಥವಾ cetonline.karnataka.gov.in/kea/ ಗೆ ಭೇಟಿ ನೀಡಿ .
* ಮುಖಪುಟದಲ್ಲಿ ಕಾಣುವ "UGCET 2024 ಡೌನ್‌ಲೋಡ್ ಪ್ರವೇಶ ಟಿಕೆಟ್ ಲಿಂಕ್ 03/04/2024" ಆಯ್ಕೆಯನ್ನು ಆರಿಸಿ. 
* ನಂತರ  ಹಾಲ್ ಟಿಕೆಟ್ ಡೌನ್‌ಲೋಡ್ ಲಿಂಕ್‌ಗೆ ಮರುನಿರ್ದೇಶಿಸಲಾಗುತ್ತದೆ.
* ಇಲ್ಲಿ ನಿಗದಿತ ಜಾಗದಲ್ಲಿ ಅರ್ಜಿ ಸಂಖ್ಯೆ, ಹೆಸರು ಮತ್ತು ಹುಟ್ಟಿದ ದಿನಾಂಕದ ಮೊದಲ ಐದು ಅಕ್ಷರಗಳನ್ನು ನಮೂದಿಸಿ.
* ನಂತರ ಹಾಲ್ ಟಿಕೆಟ್‌ನಲ್ಲಿ ನೀಡಲಾದ ವಿವರಗಳನ್ನು ಪರಿಶೀಲಿಸಿ. 
* ಭವಿಷ್ಯದ ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿದ ಹಾಲ್ ಟಿಕೆಟ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.