ರಾಜ್ಯ ಆರೋಗ್ಯ ಇಲಾಖೆಯು ಶೀಘ್ರದಲ್ಲೇ 874 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಿದೆ. ಈಗಾಗಲೇ ಈ ಹುದ್ದೆಗಳಿಗೆ ಅಂತಿಮ ನೇಮಕ ನಿಯಮಗಳನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಲ್ಯಾಣ ಕರ್ನಾಟಕ ಹಾಗೂ ಉಳಿದ ಮೂಲ ವೃಂದದ ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್‌, ಜೂನಿಯರ್ ಹೆಲ್ತ್‌ ಅಸಿಸ್ಟಂಟ್ ಹಾಗೂ ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್‌ ಹುದ್ದೆಗಳು ಸೇರಿದಂತೆ ಒಟ್ಟು 854 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ನೇರ ನೇಮಕಾತಿಯನ್ನು ನಡೆಸಲು ಮುಂದಾಗಿದೆ. ಒಟ್ಟು 854 ಸ್ಥಾನಗಳ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿ ಅಂತಿಮಗೊಳಿಸಿದೆ. 


ಇದನ್ನೂ ಓದಿ: Child Birth: 2 ಗಂಡು.. 2 ಹೆಣ್ಣು 4 ಮಕ್ಕಳಿಗೆ ಜನ್ಮ ಕೊಟ್ಟ ಮಹಾತಾಯಿ


ಹುದ್ದೆವಾರು ಶೈಕ್ಷಣಿಕ ಅರ್ಹತೆಗಳು ಇಂತಿದೆ:


ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್‌: ಕಲ್ಯಾಣ ಕರ್ನಾಟಕದ 54, ಉಳಿದ ಮೂಲ ವೃಂದ 150 ಹುದ್ದೆಗಳು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಕರ್ನಾಟಕ ಔದ್ಯೋಗಿಕ ಶಿಕ್ಷಣ ಮಂಡಳಿಯಿಂದ ಎರಡು ವರ್ಷಗಳ ಡಿಪ್ಲೋಮಾ ಪೂರೈಸಿರಬೇಕು. ಇಲ್ಲವೇ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿ ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಿಂದ ಸಂಬಂಧಿಸಿದ ವಿಷಯದಲ್ಲಿ 2 ವರ್ಷ ಡಿಪ್ಲೋಮಾ ಮಾಡಿರಬೇಕು. 


ಫಾರ್ಮಸಿಸ್ಟ್‌: ಉಳಿಕೆ ಮೂಲ ವೃಂದದ 400, ಹೈದೆರಾಬಾದ್ ಕರ್ನಾಟಕದ 93 ಹುದ್ದೆಗಳಿವೆ. ಈ ಹುದ್ದೆಗೆ ಅರ್ಜಿ ಹಾಕಲು 10 ನೇ ತರಗತಿ ನಂತರ ಫಾರ್ಮಸಿ ಡಿಪ್ಲೋಮಾ ಪಾಸ್‌ ಮಾಡಿರಬೇಕು. ಅಲ್ಲದೇ, ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೊಂದಾವಣೆ ಮಾಡಿರಬೇಕು. 


ಮೇಲಿನ ಎರಡು ಹುದ್ದೆಗಳಿಗೆ ರೂ.27,650-52650 ವರೆಗೆ ವೇತನ ಶ್ರೇಣಿಯನ್ನು ಪಡೆಯಬಹುದಾಗಿದೆ. 


ಇದನ್ನೂ ಓದಿ: ಎಸ್‌ಡಿಎಂ‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮಾ‌ ನಿಧನ


ಜೂನಿಯರ್ ಹೆಲ್ತ್‌ ಅಸಿಸ್ಟಂಟ್: ಇದರಡಿ 111 ಕಲ್ಯಾಣ ಕರ್ನಾಟಕ ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. ಈ ಹುದ್ದೆಗೆ 10 ನೇತರಗತಿ ಪಾಸಾಗಿರಬೇಕು. ಬಳಿಕ ಎಎನ್‌ಎಂ ಕೋರ್ಸ್‌ ಮಾಡಿದ್ದು, ರಾಜ್ಯ ನರ್ಸಿಂಗ್ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು. ವೇತನ ಶ್ರೇಣಿ Rs.23,500-47,650 ವರೆಗೆ ಪಡೆಯಬಹುದು. 


ಇತರೆ ಯಾವೆಲ್ಲ ಹುದ್ದೆಗಳು:


  • ಸೈಕಾಲಜಿಸ್ಟ್‌

  • ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್

  • ಮೈಕ್ರೋಬಯಾಲಜಿಸ್ಟ್‌

  • ಡಯಾಲಿಸಿಸ್ ಟೆಕ್ನಿಷಿಯನ್

  • ಎಲೆಕ್ಟ್ರಿಷಿಯನ್

  • ಇಸಿಜಿ ಟೆಕ್ನಿಷಿಯನ್

  • ಅಸಿಸ್ಟಂಟ್ ಎಂಟಮಾಲಜಿಸ್ಟ್‌

  • ಡೆಮಟಲ್ ಮೆಕ್ಯಾನಿಕ್

  • ಆಫ್ತಾಲ್ಮಿಕ್ ಆಫೀಸರ್

  • ಫಿಜಿಯೋಥೆರಫಿಸ್ಟ್‌


ಈ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಡಿಪ್ಲೋಮಾ/ಡಿಗ್ರಿ/ಇಂಜಿನಿಯರಿಂಗ್ ಪಾಸ್ ಮಾಡಿರಬೇಕು. ಈ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನಿಸಲಾಗುವುದು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.