KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ
KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದಲ್ಲಿ ಖಾಲಿ ಇರುವ 670 ಜೂನಿಯರ್ ಅಸಿಸ್ಟೆಂಟ್, SDA ಮತ್ತು ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (KEA Recruitment 2023) ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್, SDA, ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಈ ಹುದ್ದೆಗಳಿಗೆ ಅಗತ್ಯವಿರುವ ವಯಸ್ಸಿನ ಮಿತಿ, ವಿದ್ಯಾರ್ಹತೆ ಮತ್ತು ಅನುಭವ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪರಿಶೀಲಿಬೇಕಾಗುತ್ತದೆ.
ಇದನ್ನೂ ಓದಿ: ಕಳ್ಳರ ಕರಾಮತ್ತು, 20 ಮೋಟಾರ್ಗಳ ವೈರ್, ಸ್ಟಾಟರ್ ಉಡೀಸ್
ಹುದ್ದೆಯ ಸಂಪೂರ್ಣ ವಿವರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದಲ್ಲಿ ಖಾಲಿ ಇರುವ 670 ಜೂನಿಯರ್ ಅಸಿಸ್ಟೆಂಟ್, SDA ಮತ್ತು ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವೇತನ: ಮಾಸಿಕ 21400-97,100 ರೂ.
ಹುದ್ದೆಗಳ ವಿವರ:
ಕಲ್ಯಾಣ ಅಧಿಕಾರಿ: 12 ಹುದ್ದೆಗಳು
ಕ್ಷೇತ್ರ ನಿರೀಕ್ಷಕರು: 60 ಹುದ್ದೆಗಳು
ಮೊದಲ ವಿಭಾಗದ ಸಹಾಯಕ (FDA): 12 ಹುದ್ದೆಗಳು
ಖಾಸಗಿ ಸಲಹೆಗಾರ: 2 ಹುದ್ದೆಗಳು
2ನೇ ವಿಭಾಗದ ಸಹಾಯಕ (SDA): 100 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು: 33 ಹುದ್ದೆಗಳು
ಗುಣಮಟ್ಟದ ಪರಿವೀಕ್ಷಕರು: 23 ಹುದ್ದೆಗಳು
ಹಿರಿಯ ಸಹಾಯಕ (ಖಾತೆಗಳು): 33 ಹುದ್ದೆಗಳು
ಹಿರಿಯ ಸಹಾಯಕ: 57 ಹುದ್ದೆಗಳು
ಕಿರಿಯ ಸಹಾಯಕ: 263 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) – ಗ್ರೂಪ್- B: 4 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) – ಗ್ರೂಪ್- B: 2 ಹುದ್ದೆಗಳು
ಖಾಸಗಿ ಕಾರ್ಯದರ್ಶಿ – ಗ್ರೂಪ್-C: 1 ಹುದ್ದೆ
ಹಿರಿಯ ಸಹಾಯಕ (ತಾಂತ್ರಿಕ) – ಗ್ರೂಪ್-C: 4 ಹುದ್ದೆಗಳು
ಹಿರಿಯ ಸಹಾಯಕ (ತಾಂತ್ರಿಕೇತರ) - ಗ್ರೂಪ್-C: 3 ಹುದ್ದೆಗಳು
ಸಹಾಯಕ (ತಾಂತ್ರಿಕ) – ಗ್ರೂಪ್-C: 6 ಹುದ್ದೆಗಳು
ಸಹಾಯಕ (ತಾಂತ್ರಿಕವಲ್ಲದ) – ಗ್ರೂಪ್-C: 6 ಹುದ್ದೆಗಳು
ಮಾರಾಟ ಮೇಲ್ವಿಚಾರಕರು: 19 ಹುದ್ದೆಗಳು
ಸೇಲ್ಸ್ ಇಂಜಿನಿಯರ್: 4 ಹುದ್ದೆಗಳು
ಅಕೌಂಟ್ಸ್ ಕ್ಲರ್ಕ್: 6 ಹುದ್ದೆಗಳು
ಗುಮಾಸ್ತ: 14 ಹುದ್ದೆಗಳು
ಮಾರಾಟ ಪ್ರತಿನಿಧಿ: 6 ಹುದ್ದೆಗಳು
ಇಲಾಖೆಗಳ ಆಧಾರದ ಮೇಲೆ KEA ಹುದ್ದೆಗಳ ವಿವರ:
ಕರ್ನಾಟಕ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KARBWWB): 186 ಹುದ್ದೆಗಳು
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC): 386 ಹುದ್ದೆಗಳು
ಬೆಂಗಳೂರಿನ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ (KSEDCL): 26 ಹುದ್ದೆಗಳು
ಬೆಂಗಳೂರಿನ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(MSIL) ಬೆಂಗಳೂರು: 72 ಹುದ್ದೆಗಳು
ಶೈಕ್ಷಣಿಕ ಅರ್ಹತೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ KEA ನಿಯಮಗಳ ಪ್ರಕಾರ ಆಯಾ ಹುದ್ದೆಗಳಿಗನುಸಾರ ವಿದ್ಯಾರ್ಹತೆ ಹೊಂದಿರಬೇಕು.
ವಯಸ್ಸಿನ ಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ KEA ನಿಯಮಗಳ ಪ್ರಕಾರ ಆಯಾ ಹುದ್ದೆಗಳಿಗನುಸಾರ ವಯೋಮಿತಿ ಹೊಂದಿರಬೇಕು.
ವಯೋಮಿತಿ ಸಡಿಲಿಕೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ
ಅರ್ಜಿ ಶುಲ್ಕ: ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಸಬೇಕು.
ಆಯ್ಕೆ ಪ್ರಕ್ರಿಯೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಮಾಜಿ ಪಿಎಂ ಎಚ್.ಡಿ. ದೇವೇಗೌಡರ ದೆಹಲಿ ಪ್ರವಾಸ ರದ್ದು
ಹುದ್ದೆವಾರು ಸಂಬಳದ(ಮಾಸಿಕ) ವಿವರ:
ಕಲ್ಯಾಣ ಅಧಿಕಾರಿ: 37,900-70,850 ರೂ.
ಕ್ಷೇತ್ರ ನಿರೀಕ್ಷಕರು: 33,450-62,600 ರೂ.
ಮೊದಲ ವಿಭಾಗದ ಸಹಾಯಕ (FDA): 27,650-52,650 ರೂ.
ಖಾಸಗಿ ಸಲಹೆಗಾರ: 27,650-52,650 ರೂ.
2ನೇ ವಿಭಾಗದ ಸಹಾಯಕ (SDA): 21,400-42,000 ರೂ.
ಸಹಾಯಕ ವ್ಯವಸ್ಥಾಪಕರು: 43,100-97,100 ರೂ.
ಗುಣಮಟ್ಟದ ಪರಿವೀಕ್ಷಕರು: 27,650-52,650 ರೂ.
ಹಿರಿಯ ಸಹಾಯಕ (ಖಾತೆಗಳು): 27,650-52,650 ರೂ.
ಹಿರಿಯ ಸಹಾಯಕ: 27,650-52,650 ರೂ.
ಕಿರಿಯ ಸಹಾಯಕ: 21,400-42,000 ರೂ.
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) – ಗ್ರೂಪ್ ಬಿ: 52,650-97,100 ರೂ.
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) – ಗ್ರೂಪ್ ಬಿ : 52,650-97,100 ರೂ.
ಖಾಸಗಿ ಕಾರ್ಯದರ್ಶಿ – ಗ್ರೂಪ್ ಸಿ: 27,650-52,650 ರೂ.
ಹಿರಿಯ ಸಹಾಯಕ (ತಾಂತ್ರಿಕ) – ಗ್ರೂಪ್ ಸಿ: 33,450-62,600 ರೂ.
ಹಿರಿಯ ಸಹಾಯಕ (ತಾಂತ್ರಿಕೇತರ) – ಗ್ರೂಪ್ ಸಿ: 33,450-62,600 ರೂ.
ಸಹಾಯಕ (ತಾಂತ್ರಿಕ) – ಗ್ರೂಪ್ ಸಿ: 30,350-58,250 ರೂ.
ಸಹಾಯಕ (ತಾಂತ್ರಿಕವಲ್ಲದ) – ಗ್ರೂಪ್: 30,350-58,250 ರೂ.
ಮಾರಾಟ ಮೇಲ್ವಿಚಾರಕ: 35,150-64,250 ರೂ.
ಸೇಲ್ಸ್ ಇಂಜಿನಿಯರ್: 35,150-64,250 ರೂ.
ಅಕೌಂಟ್ಸ್ ಕ್ಲರ್ಕ್: 25,200-50,150 ರೂ.
ಗುಮಾಸ್ತ: 21,900-43,100 ರೂ.
ಮಾರಾಟ ಪ್ರತಿನಿಧಿ: 28,950-55,350 ರೂ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.