ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯೊಳಗೆ ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4 ರ ಸಿಬ್ಬಂದಿಗಳ ವರ್ಗಾವಣೆಗಾಗಿ 2023 ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವರ್ಗಾವಣೆ ಚಟುವಟಿಕೆಗಳು (ವಿಭಾಗದ ಒಳಗೆ ಹಾಗೂ ಅಂತರ ವಿಭಾಗ) ವರ್ಗಾವಣೆ ಪ್ರಕ್ರಿಯೆಯ ವಿವರ ಇಂತಿದೆ. ನಿಗಮದ www.kkrtc.org ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು 2023ರ ಆಗಸ್ಟ್ 12 ರಿಂದ ಆಗಸ್ಟ್ 31 ರವರೆಗೆ ಅವಕಾಶ ಇರುತ್ತದೆ.


ಸಂಬಂಧಿಸಿದ ವಿಭಾಗಮಟ್ಟದ ಸಿಬ್ಬಂದಿ ಶಾಖೆಯಿಂದ ಅರ್ಜಿಗಳನ್ನು ಪರಿಶೀಲಿಸಿ ಸರಿಯಾಗಿರುವ ಬಗ್ಗೆ ಹಾಗೂ ವ್ಯತ್ಯಾಸಗಳಿದ್ದಲ್ಲಿ ಸರಿಪಡಿಸಿ, ಅವಶ್ಯ ಸೇವಾ ವಿವರಗಳನ್ನು ಭರ್ತಿ ಮಾಡಲು 2023ರ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 11 ರವರೆಗೆ ಅವಕಾಶ ಇರುತ್ತದೆ.


ಇದನ್ನೂ ಓದಿ: ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದಲ್ಲಿ ಟೆಕ್ನಿಕಲ್ ಅಸಿಸ್ಟಂಟ್ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ


ಗಣಕ ಇಲಾಖೆಯಿಂದ ವರ್ಗಾವಣೆಗೆ ಅರ್ಹರಿರುವ ಸಿಬ್ಬಂದಿಗಳ ಯೂನಿಟ್‍ವಾರು ಅರ್ಹತಾ ಪಟ್ಟಿಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲು 2023ರ ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 14 ರವರೆಗೆ ಅವಕಾಶ ಇರುತ್ತದೆ.


ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ ಅರ್ಹತಾ ಪಟ್ಟಿಗೆ ಅರ್ಜಿದಾರರು ಆಕ್ಷೇಪಣೆಗಳನ್ನು (ಇದ್ದಲ್ಲಿ) ಆಯಾ ಯೂನಿಟ್ ಮುಖ್ಯಸ್ಥರಿಗೆ ಸಲ್ಲಿಸಲು 2023ರ ಸೆಪ್ಟೆಂಬರ್ 15 ರಿಂದ 19 ರವರೆಗೆ ಅವಕಾಶ ಇರುತ್ತದೆ.


ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಸರಿಪಡಿಸಿದ ನಂತರ, ಅಂತರ ವಿಭಾಗ ವರ್ಗಾವಣಾ ಅರ್ಜಿಗಳೊಂದಿಗೆ ದೃಢೀಕೃತ ಪಟ್ಟಿಯನ್ನು ಆಯಾ ಇಲಾಖಾ ಮುಖ್ಯಸ್ಥರಿಗೆ ಹಾಗೂ ವಿಭಾಗದೊಳಗಿನ ವರ್ಗಾವಣಾ ಅರ್ಜಿಗಳೊಂದಿಗೆ ದೃಢೀಕೃತ ಪಟ್ಟಿಯನ್ನು ವಿಭಾಗದ ವರ್ಗಾವಣಾ ಸಮಿತಿಗೆ ಸಿಬ್ಬಂದಿ ಶಾಖೆಯಿಂದ ಸಲ್ಲಿಸಲು 2023ರ ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 22 ರವರೆಗೆ ಅವಕಾಶ ಇರುತ್ತದೆ.


ಇದನ್ನೂ ಓದಿ: ಐತಿಹಾಸಿಕ ಕೆಂಪುಕೋಟೆಯಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ ಮೋದಿ!


ಆಯಾ ವರ್ಗಾವಣಾ ಸಮಿತಿಗಳು ವರ್ಗಾವಣಾ ಆದೇಶಗಳನ್ನು ಹೊರಡಿಸಿ, ಕಡ್ಡಾಯವಾಗಿ ಅನುಸರಣಾ ವರದಿಯನ್ನು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಕೇಂದ್ರ ಕಛೇರಿ ಕಲಬುರಗಿ ರವರಿಗೆ ಸಲ್ಲಿಸಲು 2023ರ ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ಅವಕಾಶ ಇರುತ್ತದೆ.


ವರ್ಗಾವಣೆಗೊಂಡ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಲು 2023ರ ಅಕ್ಟೋಬರ್ 3 ರಿಂದ ಅಕ್ಟೋಬರ್ 15 ರವರೆಗೆ ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.