ಚಿಕ್ಕೋಡಿ: ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ತೊಗಲಿನ ಚಪ್ಪಲಿ ತಯಾರಕರ ಸ್ಥಿತಿ ಸದ್ಯ ದುಸ್ಥಿತಿಯಾಗಿದ್ದು ಸರ್ಕಾರ ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಮದ್ಯೋಗ ನಡೆಸುತ್ತಿರುವ ಕುಟುಂಬಗಳ ಕುರಿತು ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕುಶಲಕರ್ಮಿಗಳು ಆಗ್ರಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ಚಪ್ಪಲಿ ತಯಾರಕರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆಯಿಂದ ದಿನದಿಂದ ದಿನಕ್ಕೆ ಚರ್ಮದಿಂದ ತಯಾರಿಸಿದ  ಚಪ್ಪಲಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಮಾತ್ರವಲ್ಲ, ಸರ್ಕಾರಗಳ ಹಿತಾ ಶಕ್ತಿ ಕೊರತೆಯಿಂದ ಚರ್ಮದ್ಯೋಗವನ್ನು ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಸಿದ್ದು ಆದಷ್ಟು ಬೇಗನೆ ಸರ್ಕಾರಗಳು ಪಾರಂಪರಿಕ ಕುಶಲಕರ್ಮಿಗಳ ನೆರವಿಗೆ ಬರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 


ಈ ಕುರಿತಂತೆ ಮಾತನಾಡಿರುವ ಅಖಿಲ ಕರ್ನಾಟಕ ಚರ್ಮಕಾಗ ಸಮಾಜ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಡಾಕ್ಟರ್ ಅನಿಲ್ ಸೌದಾಗರ್, ಕರ್ನಾಟಕ ರಾಜ್ಯದಲ್ಲಿ 18 ಲಕ್ಷ ಜನ ಚರ್ಮಕುಶಲಕರ್ಮಿಗಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1 ಲಕ್ಷ 52 ಸಾವಿರ ಕುಟುಂಬಗಳ ವಾಸಿಸುತ್ತಿದ್ದಾರೆ. ಅಥಣಿ, ರಾಯಭಾಗ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಕಾಗವಾಡ ಭಾಗದಲ್ಲಿ ಚರ್ಮ ಉದ್ಯೋಗವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ತಯಾರಾಗಿರುವ ಚಪ್ಪಲಿಗಳು ನೆದರ್ ಲ್ಯಾಂಡ್, ಇಟಲಿ, ಸಿಂಗಾಪುರ್, ಬ್ಯಾಂಕಾಕ್, ಅಮೆರಿಕ, ಲಂಡನ್   ವಿದೇಶಗಳಿಗೆ ರಫ್ತು ಮಾಡಿ ಹೆಸರುವಾಸಿಯಾಗಿವೆ. ದೇಶದಲ್ಲಿ ಬಾಂಬೆ, ಕೊಲ್ಕತ್ತಾ, ಚೆನ್ನೈ, ಅಹ್ಮದಾಬಾದ್, ದೆಹಲಿ ಮಾರುಕಟ್ಟೆಗಳಿಗೆ ಸದ್ಯ ನಾವು ರಫ್ತನ್ನು ಮಾಡುತ್ತಿದ್ದೇವೆ. ಆದರೆ ಸರಕಾರಗಳು ವಿದೇಶಗಳಿಗೆ ರಫ್ತನ್ನು ನಿಲ್ಲಿಸುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಇದರಿಂದ ತಯಾರಿಕರಿಗೆ ತಾವು ಮಾಡಿದ ಖರ್ಚನ್ನು ಕೂಡ ಬರಿಸುವುದು ಹೊರೆಯಾಗಿದೆ. ಆದಷ್ಟು ಬೇಗನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಮದ್ಯೋಗ ಮೇಲೆ ವಿಧಿಸಿದ ಜಿಎಸ್‌ಟಿಯನ್ನು ಹಿಂಪಡೆಯಬೇಕೆಂದು ಮತ್ತೆ ವಿದೇಶಗಳಿಗೆ ರಪ್ತು ಮಾಡ್ಬೇಕು ಎಂದು ಆಗ್ರಹಿಸಿರು.


ಇದನ್ನೂ ಓದಿ- GK Quiz: ಭಾರತದ ಷೇಕ್ಸ್‌ಪಿಯರ್ ಎಂದು ಕರೆಯಲ್ಪಡುವ ಕವಿ ಯಾರು ಗೊತ್ತಾ?


ತಯಾರಕರು ನಾವು ಆದರೆ ಹೆಸರು ಮಾತ್ರ ಬೇರೆಯವರಿಗೆ: 
ಕೊಲ್ಲಾಪುರಿ ಬ್ರಾಂಡ್ ನ ಚಪ್ಪಲಿ ತಯಾರಾಗುವುದು ಅಥಣಿಯಲ್ಲಿ, ಆದರೆ ಹೆಸರು ಬಂದಿದ್ದು ಮಾತ್ರ ಕೊಲ್ಲಾಪುರ್ ಅಂತ. 12ನೇ ಶತಮಾನದಿಂದಲೂ ಈ ಉದ್ಯೋಗವನ್ನು ನಮ್ಮ ಸಮುದಾಯ ಮಾಡಿಕೊಂಡು ಬರುತ್ತಿದೆ. ಗಡಿ ಹೊಂದಿರುವ ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ಇರೋದ್ರಿಂದ, ಅಥಣಿ ಮಾರುಕಟ್ಟೆಯಿಂದ ಅಲ್ಲಿ ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಮಾರಲಾಗುತ್ತಿತ್ತು. ಕೊಲ್ಲಾಪುರದಿಂದ ದೇಶ ವಿದೇಶಗಳಲ್ಲಿ ರಪ್ತು ಆಗಿರೋದ್ರಿಂದ ಕೊಲ್ಲಾಪುರಿ ಹೆಸರೆಂದು ಬ್ರಾಂಡ್ ಆಗಿದೆ. ತಯಾರಕರು ನಾವು ಆದರೆ ಹೆಸರು ಮಾತ್ರ ಬೇರೆಯವರಾಗಿದೆ ಎಂದು ಕುಶಲಕರ್ಮಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. 


ಚಪ್ಪಲಿಗಳಿಗೆ 12% ಜಿ‌ಎಸ್‌ಟಿ: 
ಈ ಚಪ್ಪಲಿಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ "ವಿದೇಶಗಳಿಗೆ ಹೋಗುವ ಚಪ್ಪಲಿಗಳನ್ನು ಸದ್ಯ ಸರ್ಕಾರಗಳು ರಫ್ತನ್ನು ನಿರ್ಬಂಧ ಮಾಡಿದೆ", ಮತ್ತು ಈ ಚಪ್ಪಲಿಗಳಿಗೆ 12% ಜಿ‌ಎಸ್‌ಟಿ ಇರುವುದರಿಂದ ಮಾರುಕಟ್ಟೆಯಲ್ಲಿ ಅತಿ ದುಬಾರಿಯಾಗಿದ್ದು ಜನರು ಕೂಡ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ.  ಚಪ್ಪಲಿ ತಯಾರು ಮಾಡುವುದು ಕರಕುಶಲ ಅಡಿಯಲ್ಲಿ ಯಾವುದೇ ಜಿಎಸ್‌ಟಿ ಬರುವುದಿಲ್ಲ. ಆದರೆ ಸರ್ಕಾರ ತೆರಿಗೆ ನೀಡಿದೆ ಈ ಜಿಎಸ್‌ಟಿಯನ್ನು ವಿನಾಯಿತಿ ನೀಡಬೇಕು. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಆದಾಗ್ಯೂ, ಇದುವರೆಗೆ ಯಾವುದೇ ಜಿಎಸ್​ಟಿಯಲ್ಲಿ ಸಡಿಲಿಕೆ ಆಗಿಲ್ಲ, ಆದಷ್ಟು ಬೇಗನೆ ಚರ್ಮೋದ್ಯೋಗ ಉದ್ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುತುವರ್ಜಿಯನ್ನು ವಹಿಸಬೇಕು ಎಂದು ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಡಾ. ಅನಿಲ್ ಕುಮಾರ್ ಸೌದಾಗರ್ ಒತ್ತಾಯಿಸಿದರು. 


ಇದನ್ನೂ ಓದಿ- GK Quiz: 'ಗಿದ್ಧಾ' ಯಾವ ರಾಜ್ಯದ ಜಾನಪದ ನೃತ್ಯ ಕಲೆಯಾಗಿದೆ ಗೊತ್ತಾ?


ಆಧುನಿಕತೆ ಬೆಳೆದಂತೆ ಪಾರಂಪರಿಕವಾಗಿ ಪಾದರಕ್ಷೆ ಬೇಡಿಕೆ ಕಡಿಮೆಯಾಗಿದೆ, ಈ ಕಾಯಕವನ್ನು ನಂಬಿದ ಸಮುದಾಯದ ಬಗ್ಗೆ ಸರ್ಕಾರ ಈ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಮದ್ಯೋಗ ಸಮಸ್ಯೆ ಬಗ್ಗೆ ಮಾತನಾಡುವಂತೆ ಸಭಾಪತಿ ಯುಟಿ ಖಾದರ್ ಸಮಯವನ್ನು ನೀಡಬೇಕು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈ ಕುರಿತಂತೆ ಸರ್ಕಾರದ ಗಮನಕ್ಕೆ ತರುವಂತೆ ಅನಿಲ್ ಕುಮಾರ ಸೌದಾಗರ ಮನವಿ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.