KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 486 ಜೂನಿಯರ್ ಎಂಜಿನಿಯರ್, ಇಂಡಸ್ಟ್ರಿಯಲ್ ಎಕ್ಸ್​ಟೆನ್ಶನ್ ಆಫೀಸರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಈ ಮೊದಲು ಮೇ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಬಳಿಕ ಈ ದಿನಾಂಕವನ್ನು ಜೂನ್ 10ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಆ ದಿನಾಂಕವನ್ನು ಆಗಸ್ಟ್ 1ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಕೂಡಲೇ ಆನ್​​ಲೈನ್​​ ಮೂಲಕ ಅರ್ಜಿ ಸಲ್ಲಿಸಬಹುದು. ಜುಲೈ 23ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ನಿರಂತರ ಮಳೆ, ಶೀತಗಾಳಿ ಹಿನ್ನೆಲೆಯಲ್ಲಿ ಜುಲೈ 27 ರಂದು ಶಾಲಾ ಕಾಲೇಜುಗಳಿಗೆ ರಜೆ


ಹುದ್ದೆಯ ಮಾಹಿತಿ: ಅಂತರ್ಜಲ ನಿರ್ದೇಶನಾಲಯ- 5, ಪೌರಾಡಳಿತ ನಿರ್ದೇಶನಾಲಯ- 84, ಸಾರ್ವಜನಿಕ ಗ್ರಂಥಾಲಯ ಇಲಾಖೆ- 34, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ- 63 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 300 ಹುದ್ದೆಗಳು ಖಾಲಿ ಇವೆ. 


ಹುದ್ದೆಗಳ ಸಂಖ್ಯೆ: ಜೂನಿಯರ್ ಎಂಜಿನಿಯರ್- 341, ವಾಟರ್ ಸಪ್ಲೈಯರ್- 4, ಸಬ್ಸಿಡಿಯರಿ ವಾಟರ್ ಸಪ್ಲೈಯರ್- 5, ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್- 39, ಅಸಿಸ್ಟೆಂಟ್ ಲೈಬ್ರರಿಯನ್- 21, ಇಂಡಸ್ಟ್ರಿಯಲ್ ಎಕ್ಸ್​​ಟೆನ್ಶನ್ ಆಫೀಸರ್- 63 ಮತ್ತು ಲೈಬ್ರರಿಯನ್ 13 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 


ವಿದ್ಯಾರ್ಹತೆ: ಜೂನಿಯರ್ ಎಂಜಿನಿಯರ್‌ಗೆ ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ, ವಾಟರ್ ಸಪ್ಲೈಯರ್‌ಗೆ 10ನೇ ತರಗತಿ, ಐಟಿಐ, ಸಬ್ಸಿಡಿಯರಿ ವಾಟರ್ ಸಪ್ಲೈಯರ್‌ಗೆ 10ನೇ ತರಗತಿ, ಐಟಿಐ, ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್‌ಗೆ 10ನೇ ತರಗತಿ, ಪಿಯುಸಿ, ಡಿಪ್ಲೊಮಾ, ಅಸಿಸ್ಟೆಂಟ್ ಲೈಬ್ರರಿಯನ್‌ಗೆ ಲೈಬ್ರರಿ ಸೈನ್ಸ್​​ನಲ್ಲಿ ಡಿಪ್ಲೊಮಾ, ಇಂಡಸ್ಟ್ರಿಯಲ್ ಎಕ್ಸ್​​ಟೆನ್ಶನ್ ಆಫೀಸರ್‌ಗೆ ಸೈನ್ಸ್​/ಕಾಮರ್ಸ್​/ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್/ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಲೈಬ್ರರಿಯನ್‌ಗೆ ಲೈಬ್ರರಿ ಸೈನ್ಸ್​​ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.


ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 28, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ: SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳು, ಪ್ರವರ್ಗ-2A/2B/3A/3B ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು PWD/ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.


ಅರ್ಜಿ ಶುಲ್ಕ: SC/ST/ಪ್ರವರ್ಗ-I/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ., ಪ್ರವರ್ಗ-2A/2B/3A/3B ಅಭ್ಯರ್ಥಿಗಳಿಗೆ 300 ರೂ. ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.


ಉದ್ಯೋಗದ ಸ್ಥಳ: ಕರ್ನಾಟಕ


ವೇತನ: ಜೂನಿಯರ್ ಎಂಜಿನಿಯರ್‌ಗೆ ಮಾಸಿಕ ₹33,450-62,600, ವಾಟರ್ ಸಪ್ಲೈಯರ್‌ಗೆ ಮಾಸಿಕ ₹27,650-52,650, ಸಬ್ಸಿಡಿಯರಿ ವಾಟರ್ ಸಪ್ಲೈಯರ್‌ಗೆ ಮಾಸಿಕ ₹21,400-42,000, ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್‌ಗೆ ಮಾಸಿಕ ₹23,500-47,650, ಅಸಿಸ್ಟೆಂಟ್ ಲೈಬ್ರರಿಯನ್‌ಗೆ ಮಾಸಿಕ ₹30,350-58,250, ಇಂಡಸ್ಟ್ರಿಯಲ್ ಎಕ್ಸ್​​ಟೆನ್ಶನ್ ಆಫೀಸರ್‌ಗೆ ಮಾಸಿಕ ₹33,450-62,600 ಮತ್ತು ಲೈಬ್ರರಿಯನ್‌ಗೆ ಮಾಸಿಕ ₹37,900-70,850 ರೂ. ವೇತನವಿರುತ್ತದೆ.


ಇದನ್ನೂ ಓದಿ: Daily GK Quiz: ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?


ಆಯ್ಕೆ ಪ್ರಕ್ರಿಯೆ: ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. 


ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.