KPTCL Recruitment 2024: 10ನೇ ತರಗತಿ ಪಾಸಾದವರು ಈ ಸರ್ಕಾರಿ ಉದ್ಯೋಗಕ್ಕೆ ಇಂದೇ ಅರ್ಜಿ ಸಲ್ಲಿಸಿ
KPTCL Recruitment 2024: KPTCLನಲ್ಲಿ ಖಾಲಿ ಇರುವ ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್‌ಮ್ಯಾನ್ ಸೇರಿದಂತೆ ಒಟ್ಟು 2,975 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
KPTCL Recruitment 2024: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(KPTCL)ದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಇಲಾಖೆಯು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ನೇಮಕಾತಿಯ ಮೂಲಕ ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಎಷ್ಟು ಹುದ್ದೆಗಳು?: KPTCLನಲ್ಲಿ ಖಾಲಿ ಇರುವ ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್‌ಮ್ಯಾನ್ ಸೇರಿದಂತೆ ಒಟ್ಟು 2,975 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಜೂನಿಯರ್ ಪವರ್‌ಮ್ಯಾನ್ 2,542 ಮತ್ತು ಜೂನಿಯರ್ ಸ್ಟೇಷನ್ ಅಟೆಂಡೆಂಟ್ 433 ಹುದ್ದೆಗಳು ಖಾಲಿ ಇವೆ
ಇದನ್ನೂ ಓದಿ: ರಾಷ್ಟ್ರೀಯ ಮಹಿಳಾ ಆಯೋಗದ ನೂತನ ಮುಖ್ಯಸ್ಥೆಯಾಗಿ ವಿಜಯ ಕಿಶೋರ್ ರಹತ್ಕರ್ ನೇಮಕ
KPTCL ಹುದ್ದೆಯ ವಿವರಗಳು
ಇಲಾಖಾ ಹೆಸರು | ಸಾಮಾನ್ಯ ಹುದ್ದೆಗಳು | ಬ್ಯಾಕ್‌ಲಾಗ್ ಹುದ್ದೆಗಳು | ಒಟ್ಟು |
ಕೆಪಿಟಿಸಿಎಲ್ | 475 | 48 | 523 |
ಬೆಸ್ಕಾಂ | 640 | 295 | 935 |
CESC ಮೈಸೂರು | 270 | 39 | 309 |
ಹೆಸ್ಕಾಂ | 500 | 60 | 560 |
ಮೆಸ್ಕಾಂ | 415 | 34 | 449 |
GESCOM | 100 | 99 | 199 |
ಒಟ್ಟು | 2,400 | 575 | 2,975 |
ಶೈಕ್ಷಣಿಕ ಅರ್ಹತೆ: 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನವೆಂಬರ್ 20, 2024ರಂತೆ ಕನಿಷ್ಠ 18 ವರ್ಷಗಳಾಗಿರಬೇಕು. ಗರಿಷ್ಠ 35 ವರ್ಷಗಳನ್ನು ದಾಟಿರಬಾರದು.
ವಯೋಮಿತಿ ಸಡಿಲಿಕೆ: SC/ST/Cat-I ಅಭ್ಯರ್ಥಿಗಳಿಗೆ 5 ವರ್ಷ ಮತ್ತು Cat-2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ: ಮೊದಲ ವರ್ಷದ ತಿಂಗಳ ಸಂಬಳ: ₹17,000 ರಿಂದ ₹63,000, 2ನೇ ವರ್ಷದಿಂದ ತಿಂಗಳ ಸಂಬಳ: ₹19,000 ರಿಂದ ₹63,000 ಮತ್ತು 3ನೇ ವರ್ಷದಿಂದ ತಿಂಗಳ ಸಂಬಳ: ₹21,000 ರಿಂದ ₹63,000 ವೇತನವಿರುತ್ತದೆ.
ಅರ್ಜಿ ಶುಲ್ಕ: SC/ST ಅಭ್ಯರ್ಥಿಗಳಿಗೆ 378 ರೂ., ಸಾಮಾನ್ಯ/CAT-I/2A/2B/3A & 3B ಅಭ್ಯರ್ಥಿಗಳಿಗೆ 614 ರೂ. ಮತ್ತು PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ (ಅಂಕಗಳು), ಸಹಿಷ್ಣುತೆ ಪರೀಕ್ಷೆ, ದಾಖಲೆಗಳ ಪರಿಶೀಲನೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 21-10-2024
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ನವೆಂಬರ್-2024
* ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 25 ನವೆಂಬರ್ 2024
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ kptcl.karnataka.gov.in ಭೇಟಿ ನೀಡಬೇಕು.
ಇದನ್ನೂ ಓದಿ: ಮೆಟ್ರೊ ನಿಲ್ದಾಣದ ಬಳಿ ಚಿರತೆ..! ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.