ಬೆಂಗಳೂರು : ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮದಂತೆ. ತಂಡದ ಆಟಗಾರರು ದೇವರಂತೆ. ಈ ಆಟಗಾರರಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳಲು ಜನರು ಅತ್ಯಂತ ಉತ್ಸುಕರಾಗಿರುತ್ತಾರೆ. ಅದು  ವೈಯಕ್ತಿಕವಾಗಿರಲಿ ಅಥವಾ ವೃತ್ತಿಗೆ ಸಂಬಂಧಪಟ್ಟದ್ದಾಗಿರಲಿ.ಭಾರತೀಯ ಕ್ರಿಕೆಟ್ ತಂಡದಲ್ಲಿ ಕಡಿಮೆ ಶಿಕ್ಷಣ ಪಡೆದ ಆಟಗಾರ ಯಾರು ಎಂದು  ತಿಳಿದುಕೊಳ್ಳುವ ಕುತೂಹಲ ನಿಮಗೀ ಇದ್ದರೆ ಆ ಬಗ್ಗೆ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಯಾರದ್ದು ಯಾವ ಪದವಿ : 
unstop.comನ ವರದಿಯ ಪ್ರಕಾರ, 2023 ರ ಐಸಿಸಿ ಪುರುಷರ ವಿಶ್ವಕಪ್ ಟೀಂ ಇಂಡಿಯಾದ ಹೆಚ್ಚಿನ ಆಟಗಾರರು 12 ನೇ ತರಗತಿಗಿಂತ ಹೆಚ್ಚು ಓದಿದ್ದೇ ಇಲ್ಲ.  ಈ ಆಟಗಾರರ ಪೈಕಿ ಕೆಲವೇ ಕೆಲವರು ಮಾತ್ರ ಪದವಿ ಹೊಂದಿದ್ದಾರೆ. ಹಾಗಿದ್ದರೂ ಕ್ರಿಕೆಟ್ ನಲ್ಲಿ ತಾವು ಏನನ್ನು ಸಾಧಿಸಬೇಕು ಅಂದುಕೊಂಡಿದ್ದರೋ ಅದನ್ನು ಸಾಧಿಸಿ ಬಿಟ್ಟಿದ್ದಾರೆ. 


ಭಾರತೀಯ ಕ್ರಿಕೆಟ್‌ನಲ್ಲಿ ಕಡಿಮೆ ಶಿಕ್ಷಣ ಪಡೆದ ಆಟಗಾರ : 
ಶಿಖರ್ ಧವನ್ : 

ಶಿಖರ್ ಧವನ್ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಗಬ್ಬರ್ ಎಂದೇ ಕರೆಯಲಾಗುತ್ತದೆ. ಧವನ್ 12 ನೇ ಕ್ಲಾಸ್ ಪಾಸ್ ಆಗಿದ್ದು,  ಮುಂದೆ ಓದಲಿಲ್ಲ.   ಇತ್ತೀಚಿನ ದಿನಗಳಲ್ಲಿ ಪ್ರೀತಿಯಲ್ಲಿ ತನಗಾದ ಮೋಸದ ವಿಚಾರದಿಂದ ಸುದ್ದಿಯಲ್ಲಿದ್ದಾರೆ. 


ಇದನ್ನೂ ಓದಿ : ವಿಕಲಚೇತನರ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನ


ಎಂಎಸ್ ಧೋನಿ :
ಧೋನಿ ಬಿ.ಕಾಂ.ಗೆ ಪ್ರವೇಶ ಪಡೆದರೂ ಪರೀಕ್ಷೆಗೆ ಹಾಜರಾಗಿಲ್ಲ.ಹೀಗಾಗಿ ಪದವಿ ಕೂಡಾ ಪಡೆದಿಲ್ಲ.ಧೋನಿಯ ವಿದ್ಯಾರ್ಹತೆ ಕೂಡಾ 12ನೇ ತರಗತಿವರೆಗೆ ಮಾತ್ರ. 


ವಿರಾಟ್ ಕೊಹ್ಲಿ :
12ನೇ ತರಗತಿಯ ನಂತರ ವಿರಾಟ್‌ಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಮೂಡಿದ್ದು ಕಾಲೇಜಿನಟ್ಟ ಮುಖ ಮಾಡಲೇ ಇಲ್ಲ.  


ಜಸ್ಪ್ರೀತ್ ಬುಮ್ರಾ : 
ಭಾರತದ ಆಕ್ರಮಣಕಾರಿ ಬೌಲರ್ ಬುಮ್ರಾ ಅಹಮದಾಬಾದ್‌ನ ನಿರ್ಮಾಣ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಯಾರ ಓದಿ ಕೂಡಾ 12ನೇ ತರಗತಿವರೆಗೆ ಮಾತ್ರ.  


ಸಚಿನ್ ತೆಂಡೂಲ್ಕರ್ : 
ಮಾಸ್ಟರ್ ಬ್ಲಾಸ್ಟರ್ ತಮ್ಮ ಬಾಲ್ಯವನ್ನು ಕ್ರಿಕೆಟ್‌ಗೆ ಮೀಸಲಿಟ್ಟರು.ಅವರು 16 ನೇ ವಯಸ್ಸಿನಲ್ಲಿ ಆಟವಾಡಲು ಪ್ರಾರಂಭಿಸಿದರು ಹಾಗಾಗಿ ಶಿಕ್ಷಣವನ್ನು ಪೂರ್ಣಗೊಳಿಸಲಿಲ್ಲ. 


ಇದನ್ನೂ ಓದಿ : Konkan Railway: ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ


ಶುಭಮನ್ ಗಿಲ್ :
ವರದಿಯ ಪ್ರಕಾರ, ಶುಭ್‌ಮನ್ ಎಂದಿಗೂ ಕಾಲೇಜು ಮೆಟ್ಟಿಲು ಹತ್ತಿಯೇ ಇಲ್ಲ. ಬದಲಿಗೆ ತಮ್ಮ ಸಮಯವನ್ನು ಕ್ರಿಕೆಟ್‌ಗೆ ಮೀಸಲಿಟ್ಟರು. ಶುಭ್‌ಮನ್ 10ನೇ ತರಗತಿವರೆಗೆ ಮಾತ್ರ ಶಾಲೆ ಕಲಿತಿರುವುದು.ಇವರು ತ ಮ್ಮ ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.ಇತ್ತೀಚೆಗಷ್ಟೇ ತಮ್ಮ ಅಫೇರ್‌ನಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. 


ಹಾರ್ದಿಕ್ ಪಾಂಡ್ಯ : 
ಆರ್ಥಿಕ ಕಾರಣದಿಂದ ಹಾರ್ದಿಕ್ ಪಾಂಡ್ಯ 9ನೇ ತರಗತಿಗಿಂತ ಹೆಚ್ಚು ಓದಿರಲಿಲ್ಲ. ಆದರೆ ಅದೃಷ್ಟವಶಾತ್, ಕ್ರಿಕೆಟ್ ಕಡೆಗೆ ಅವರ ಪ್ರೀತಿ ಮತ್ತು ಸಮರ್ಪಣೆ ಫಲ ನೀಡಿತು. ಪತ್ನಿಯೊಂದಿಗೆ ವಿಚ್ಛೇದನ ಪಡೆದಿರುವ ಕಾರಣ ಹಾರ್ದಿಕ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.